
ಕಮಲಕಾಂತ ನಾಯಕ್
ಭುವನೇಶ್ವರ: ಒಡಿಶಾ ಮೂಲದ ಪ್ಯಾರಾ ಅಥೀಟ್ ಕಮಲಕಾಂತ ನಾಯಕ್ ವೀಲ್ ಚೇರಿನಲ್ಲಿ ಕುಳಿತು 24 ಗಂಟೆಯಲ್ಲಿ 213 ಕಿ.ಮೀ ಕ್ರಮಿಸಿ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ವಿಶ್ವ ದಾಖಲೆ: 1000 ಕೋಟಿ views ಪಡೆದ ಜಗತ್ತಿನ ಮೊದಲ ಯೂಟ್ಯೂಬ್ ವಿಡಿಯೊ 'ಬೇಬಿ ಶಾರ್ಕ್ ಡ್ಯಾನ್ಸ್'
ಈ ಹಿಂದೆ ವೀಲ್ ಚೇರಿನಲ್ಲಿ ಕುಳಿತು 24 ಗಂಟೆಗಳಲ್ಲಿ ಕ್ರಮಿಸಿದ ವಿಶ್ವದಾಖಲೆ ದೂರ 182 ಕಿ.ಮೀ ಆಗಿತ್ತು. ಪೋರ್ಚುಗಲ್ ಮೂಲದ ಮಾರಿಯೊ ಎಂಬಾತನ ಹೆಸರಲ್ಲಿತ್ತು ವಿಶ್ವದಾಖಲೆ. ಇದೀಗ ಈ ವಿಶ್ವದಾಖಲೆ ಭಾರತದ ಪಾಲಾಗಿದೆ.
ಇದನ್ನೂ ಓದಿ: 1 ಗಂಟೆಯಲ್ಲಿ ಅತಿ ಹೆಚ್ಚು ಜನರಿಗೆ ಮೆಹಂದಿ ಹಚ್ಚಿದ ಭಾರತದ ಯುವತಿ: ಪಾಕ್ ಮಹಿಳೆಯ ಗಿನ್ನೆಸ್ ದಾಖಲೆ ಧೂಳಿಪಟ
24 ಗಂಟೆಗಳಲ್ಲಿ ನಡುವೆ ನಾಲ್ಕು ಹಂತಗಳಲ್ಲಿ ಒಟ್ಟು 2 ಗಂಟೆಗಳ ವಿರಾಮವನ್ನು ಕಮಲಕಾಂತ ನಾಯಕ್ ತೆಗೆದುಕೊಂಡಿದ್ದರು. ವೀಲ್ ಚೇರ್ ಪಯಣದ ವಿಡಿಯೊ ರೆಕಾರ್ಡ್ ಆಗಿದ್ದು ಗಿನ್ನೆಸ್ ದಾಖಲೆ ಅಧಿಕಾರಿಗಳಿಗೆ ಕಳಿಸಲಾಗಿದೆ.
ಇದನ್ನೂ ಓದಿ: ದೇಹದ ಅತಿ ಹೆಚ್ಚು ಅಂಗಗಳನ್ನು ದಾನ ಮಾಡಿದ ದಾಖಲೆ: ಕೇರಳ ಕುಟುಂಬಕ್ಕೆ ಪ್ರಶಂಸೆಯ ಮಹಾಪೂರ