ಸಿಎಂ ಪರಿಹಾರ ನಿಧಿಗೆ 30 ಲಕ್ಷ ರೂ. ದೇಣಿಗೆ ನೀಡಿದ ಕೋವಿಡ್-19 ಸಂತ್ರಸ್ಥನ ಪತ್ನಿ
ಮಾನವೀಯ ಘಟನೆಯೊಂದರಲ್ಲಿ ಕೋವಿಡ್-19 ಸಂತ್ರಸ್ಥನ ಪತ್ನಿಯೊಬ್ಬರು ತನ್ನ ಗಂಡನ ಚಿಕಿತ್ಸೆಗಾಗಿ ಕ್ರೌಡ್ ಸೋರ್ಸಿಂಗ್ ಮೂಲಕ ತಾವು ಸಂಗ್ರಹಿಸಿದ ಸುಮಾರು 30 ಲಕ್ಷ ರೂ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.
Published: 18th January 2022 01:33 PM | Last Updated: 18th January 2022 01:52 PM | A+A A-

ಸಂಗ್ರಹ ಚಿತ್ರ
ಕೋಲ್ಕತಾ: ಮಾನವೀಯ ಘಟನೆಯೊಂದರಲ್ಲಿ ಕೋವಿಡ್-19 ಸಂತ್ರಸ್ಥನ ಪತ್ನಿಯೊಬ್ಬರು ತನ್ನ ಗಂಡನ ಚಿಕಿತ್ಸೆಗಾಗಿ ಕ್ರೌಡ್ ಸೋರ್ಸಿಂಗ್ ಮೂಲಕ ತಾವು ಸಂಗ್ರಹಿಸಿದ ಸುಮಾರು 30 ಲಕ್ಷ ರೂ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.
ಭದ್ರಕ್ನ ನಿವಾಸಿ ಅಭಿಷೇಕ್ ಮೊಹಾಪಾತ್ರ ಎಂಬುವವರು ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಈ ವೇಳೆ ಅವರ ಪತ್ನಿ ಮೌಸುಮಿ ಮೊಹಾಂತಿ ಅವರು ಕ್ರೌಡ್ ಸೋರ್ಸಿಂಗ್ ಮೂಲಕ ಹಣ ಸಂಗ್ರಹಣೆಗೆ ಮುಂದಾಗಿದ್ದರು. ಸ್ನೇಹಿತರು. ಹಿತೈಷಿಗಳು, ಬಂಧುಗಳ ಮೂಲಕ ಹಣ ಸಂಗ್ರಹಣೆ ಮಾಡಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಇದೀಗ ಅದೇ ಹಣವನ್ನು ಮೌಸುಮಿ ಮೊಹಾಂತಿ ಅವರು ಸಮಾಜಕಾರ್ಯಕ್ಕೆ ದೇಣಿಗೆ ನೀಡಿದ್ದಾರೆ. ತಾವು ಸಂಗ್ರಹಿಸಿದ ಹಣದ ಪೈಕಿ ಸುಮಾರು 30 ಲಕ್ಷ ರೂ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (ಸಿಎಂಆರ್ಎಫ್) 30 ಲಕ್ಷ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಸೋಂಕಿಗೆ ಒಳಗಾದ ಜನರ ಬೆಂಬಲಕ್ಕಾಗಿ ಜಿಲ್ಲಾ ರೆಡ್ಕ್ರಾಸ್ ಸೊಸೈಟಿಗೆ 10 ಲಕ್ಷ ರೂ. ಹಣ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ಪ್ರೀತಿಪಾತ್ರರು ಕೋವಿಡ್ ಸೋಂಕಿಗೆ ಒಳಗಾಗುತ್ತಿರುವ ಕುಟುಂಬಗಳಿಗೆ ಸಹಾಯ ಮಾಡಲು ನಾನು ಹಣವನ್ನು CMRF ಮತ್ತು ರೆಡ್ಕ್ರಾಸ್ಗೆ ದಾನ ಮಾಡಿದ್ದೇನೆ" ಎಂದು ಮೌಸುಮಿ ಹೇಳಿದರು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೋಲ್ಕತ್ತಾದಲ್ಲಿ ಸುಮಾರು ಮೂರು ತಿಂಗಳ ಕಾಲ ಎಕ್ಸ್ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಚಿಕಿತ್ಸೆಗೆ ಒಳಗಾದ ನಂತರ ಅಭಿಷೇಕ್ ಕೋವಿಡ್ ಸಮಸ್ಯೆ ಉಲ್ಬಣಗೊಂಡು ಸಾವನ್ನಪ್ಪಿದ್ದರು. ಬಸುದೇವಪುರದವರಾದ ಅವರನ್ನು ಕಳೆದ ವರ್ಷ ಜೂನ್ 7 ರಂದು ಕೋಲ್ಕತ್ತಾಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದಲ್ಲಿ ಕಳುಹಿಸಲಾಯಿತು. ಆದರೆ ಅವರು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸೋತು ಸಾವನ್ನಪ್ಪಿದ್ದರು. ಅವರಿಗೆ ದುಬಾರಿ ECMO ಚಿಕಿತ್ಸೆಗಾಗಿ, ಕುಟುಂಬವು ಕ್ರೌಡ್ಸೋರ್ಸಿಂಗ್ ಮೂಲಕ ಹಣವನ್ನು ಸಂಗ್ರಹಿಸಿತ್ತು. ಪತಿ ಚಿಕಿತ್ಸೆಗೆ ಹಣ ನೀಡಿದ ಜನರಿಗೆ ಮೌಸುಮಿ ಕೃತಜ್ಞತೆ ಸಲ್ಲಿಸಿದ್ದಾರೆ.