ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆದ ಮ್ಯಾರೇಜ್ ಸ್ಟ್ರೈಕ್ #Marriagestrike ಏನಿದು, ಜನರು ಏನು ಹೇಳುತ್ತಾರೆ?
ಇಂದು ಬೆಳಗ್ಗೆಯಿಂದ ಟ್ವಿಟ್ಟರ್ ನಲ್ಲಿ #MarriageStrike ಎಂಬ ಹ್ಯಾಶ್ ಟಾಗ್ ಟ್ರೆಂಡಿಂಗ್ ನಲ್ಲಿದೆ. 2014ರಲ್ಲಿ ದೆಹಲಿ ಮಹಿಳಾ ಆಯೋಗವು ವರದಿಯೊಂದನ್ನು ಸಲ್ಲಿಸಿ ಇದರಲ್ಲಿ ಆಘಾತಕಾರಿ ಅಂಶವೊಂದನ್ನು ಬಹಿರಂಗಪಡಿಸಿತ್ತು. ಏಪ್ರಿಲ್ 2013ರಿಂದ ಜುಲೈ 2014 ರ ನಡುವೆ ದಾಖಲಾದ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 53.2ರಷ್ಟು ಸುಳ್ಳು ಎಂದು ಹೇಳಿತ್ತು.
Published: 19th January 2022 01:03 PM | Last Updated: 19th January 2022 01:32 PM | A+A A-

ಸಾಂದರ್ಭಿಕ ಚಿತ್ರ
ಇಂದು ಬೆಳಗ್ಗೆಯಿಂದ ಟ್ವಿಟ್ಟರ್ ನಲ್ಲಿ #MarriageStrike ಎಂಬ ಹ್ಯಾಶ್ ಟಾಗ್ ಟ್ರೆಂಡಿಂಗ್ ನಲ್ಲಿದೆ. 2014ರಲ್ಲಿ ದೆಹಲಿ ಮಹಿಳಾ ಆಯೋಗವು ವರದಿಯೊಂದನ್ನು ಸಲ್ಲಿಸಿ ಇದರಲ್ಲಿ ಆಘಾತಕಾರಿ ಅಂಶವೊಂದನ್ನು ಬಹಿರಂಗಪಡಿಸಿತ್ತು. ಏಪ್ರಿಲ್ 2013ರಿಂದ ಜುಲೈ 2014 ರ ನಡುವೆ ದಾಖಲಾದ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 53.2ರಷ್ಟು ಸುಳ್ಳು ಎಂದು ಹೇಳಿತ್ತು.
ಭಾರತದಲ್ಲಿ, 2013ರಲ್ಲಿ ಅತ್ಯಾಚಾರ ಕಾನೂನಿಗೆ ಹೊಸ ತಿದ್ದುಪಡಿ ತಂದ ನಂತರ ಒಂದಲ್ಲ ಒಂದು ನೆಪದಲ್ಲಿ ಸುಳ್ಳು ಅತ್ಯಾಚಾರ ಪ್ರಕರಣಗಳ ಬೆದರಿಕೆ ಹೆಚ್ಚುತ್ತಿದೆ. ದೇಶಾದ್ಯಂತ ತ್ವರಿತ ನ್ಯಾಯಾಲಯಗಳ ತೀರ್ಪುಗಳು ಮತ್ತು ಮಾಧ್ಯಮ ವರದಿಗಳ ಅಧ್ಯಯನದಿಂದ ಈ ಸತ್ಯಾಂಶ ಹೊರಬಂದಿದೆ ಎಂದು ದೆಹಲಿ ಮಹಿಳಾ ಆಯೋಗ ಹೇಳಿತ್ತು.
ಸುಳ್ಳು ಅತ್ಯಾಚಾರ ಕೇಸುಗಳು (Fake rape case): ಕಳೆದ ಜನವರಿ 21ರಂದು ಇಂದೋರ್ ಪೊಲೀಸರು ಅತ್ಯಾಚಾರ ಕೇಸ್ ವೊಂದನ್ನು ದಾಖಲಿಸಿದ್ದರು. ಅದರಲ್ಲಿ 19 ವರ್ಷದ ಯುವತಿ ಐವರು ಪುರುಷರ ಗ್ಯಾಂಗ್ ತನ್ನನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ರೈಲ್ವೆ ಹಳಿ ಮೇಲೆ ಎಸೆದು ಹೋಗಿದ್ದರು ಎಂದು ಆರೋಪಿಸಿದ್ದಳು. ಆಕೆ ನೀಡಿದ್ದ ದೂರಿನ ಆಧಾರದ ಮೇಲೆ ಯುವತಿ ವಾಸವಿದ್ದ ಮನೆಯ ಬಾಡಿಗೆದಾರನೊಬ್ಬನನ್ನು ಪೊಲೀಸರು ಬಂಧಿಸಿದ್ದರು.
India in no more गणतंत्र....
— iAtulp (@IM_atulp) January 18, 2022
It becomes the kanuntantra...
Reason........
Excessive interference of judiciary in the peaceful family culture of India.
Now time to declare #MarriageStrike#MaritalRape
Don't ignore the present condition of India pic.twitter.com/VErXSluQGD
ನಂತರ ತನಿಖೆಯುದ್ದಕ್ಕೂ ಯುವತಿ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಲೇ ಬಂದಿದ್ದಳು. ಆಳವಾಗಿ ತನಿಖೆ ನಡೆಸಿದ ನಂತರ ಆಕೆಯ ಮತ್ತು ಆಕೆಯ ಸ್ನೇಹಿತ ಸೇರಿಕೊಂಡು ಹೆಣೆದ ನಾಟಕ ಇದು ಎಂದು ಪೊಲೀಸರಿಗೆ ಗೊತ್ತಾಯಿತು. ಈ ಹಿಂದೆ ಇದೇ ರೀತಿ ಕಥೆ ಹೆಣೆದು ಆಕೆ ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರ ಗಿಟ್ಟಿಸಿಕೊಂಡಿದ್ದಳಂತೆ, ಸುಲಭವಾಗಿ ಹಣ ಗಳಿಸಲು ಆಕೆ ಹೆಣೆದ ಸುಳ್ಳು ಕಥೆಯಾಗಿತ್ತು!
ಸುಳ್ಳು ಅತ್ಯಾಚಾರ ಆರೋಪಕ್ಕೆ 20 ವರ್ಷ ಜೈಲಿನಲ್ಲಿ ಕಳೆದಿದ್ದ ವ್ಯಕ್ತಿ: ಲಲಿತ್ಪುರದ ವಿಷ್ಣು ತಿವಾರಿ ಅವರು ಎಂದಿಗೂ ಮಾಡದ ತಪ್ಪಿಗಾಗಿ ಎರಡು ದಶಕಗಳನ್ನು ಜೈಲಿನಲ್ಲಿ ಕಳೆದಿದ್ದರು. ಅದು ಸೆಪ್ಟೆಂಬರ್ 2000ದಲ್ಲಿ, ಪೊಲೀಸರು ವಿಷ್ಣುವನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿದರು, ಇದರಲ್ಲಿ ಮಹಿಳೆ, ಆಕೆಯ ಪತಿ ಮತ್ತು ಆಕೆಯ ಮಾವ ವಿಷ್ಣುವು ಮಹಿಳೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಸಾಕ್ಷ್ಯ ನೀಡಿದರು. ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಾಗ ವಿಷ್ಣು ಮೇಲೆ ಲೈಂಗಿಕ ಮತ್ತು ದೈಹಿಕ ದೌರ್ಜನ್ಯದ ಆರೋಪ ಹೊರಿಸಲಾಗಿತ್ತು. 20 ವರ್ಷಗಳ ನಂತರ, ಅಲಹಾಬಾದ್ ಹೈಕೋರ್ಟ್, ಸತ್ಯಾಂಶ ತಿಳಿದು ವಿಷ್ಣು ತಿವಾರಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿತು.
When Legend’s warn you , what’s is your responsibility : follow the advice #MarriageStrike pic.twitter.com/h5SAqzGGsS
— Jo Ash liverio,ג'ו אש ליבריו (@AnsonLiverio) January 19, 2022
ಮ್ಯಾರೇಜ್ ಸ್ಟ್ರೈಕ್ (Marriage Strike) ಭಾರತದಲ್ಲಿ ಇಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದೇಕೆ?
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಭಾರತದಲ್ಲಿ ಒಟ್ಟು 38,947 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 10,068 ಪ್ರಕರಣಗಳಲ್ಲಿ - ಸುಮಾರು ಕಾಲು ಭಾಗ - ಮಹಿಳೆಯರು ಮದುವೆಯ ಮಾತುಕತೆಯ ಸುಳ್ಳು ಭರವಸೆಯ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಅವಿವಾಹಿತ ಮಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಅವಮಾನವನ್ನು ಮರೆಮಾಚಲು ಪೋಷಕರು ಅತ್ಯಾಚಾರ ಆರೋಪ ಮಾಡಿರುವುದಾಗಿದೆ.
ಟ್ವಿಟರ್ನಲ್ಲಿ ಇಂದು ಮ್ಯಾರೇಜ್ ಸ್ಟ್ರೈಕ್(Marriage Strike) ಟ್ರೆಂಡಿಂಗ್ ಆಗಿದೆ. ಟ್ವಿಟ್ಟರ್ ಬಳಕೆದಾರರು, ಭಾರತದಲ್ಲಿ ಪುರುಷರ ಮಾನವ ಹಕ್ಕುಗಳನ್ನು ರಕ್ಷಿಸಲು ಮದುವೆ ಸ್ಟ್ರೈಕ್ ಮಾಡುವುದೊಂದೇ ಪರಿಹಾರ ಎಂದು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಹಾಗಾದರೆ ಈ ಮ್ಯಾರೇಜ್ ಸ್ಟ್ರೈಕ್ ಎಂದರೆ ಏನಿದು?
ಮದುವೆ ನಂತರ ನಡೆಯುವ ವಿಚ್ಛೇದನ ಪ್ರಕರಣಗಳು ಮತ್ತು ಪತ್ನಿಯರು ಹಲವು ಪ್ರಕರಣಗಳಲ್ಲಿ, ಸಂದರ್ಭಗಳಲ್ಲಿ ಮಾಡುವ ಸುಳ್ಳು ಆರೋಪಗಳಿಂದ ಬೇಸತ್ತು, ಭಯ-ಆತಂಕಕ್ಕೊಳಗಾಗಿ, ಹಣಕಾಸು ಮುಗ್ಗಟ್ಟಿನ ಭೀತಿಯಿಂದ ಮದುವೆಯಾಗುವುದೇ ಬೇಡ ಎಂದು ಯುವಕರು ನಡೆಸುವ ಚಳವಳಿ ಅಥವಾ ಆಂದೋಲನವಾಗಿದೆ.
Be a warrior, not a victim!!! #MarriageStrike pic.twitter.com/8cj8awh4r1
— Speak Up (@Shout_Out_Loud3) January 18, 2022
ವಿವಾಹವಾದ ಮೇಲೆ ಪತಿ-ಪತ್ನಿ ಹೊಂದಾಣಿಕೆಯಿಂದ ಅರ್ಥಮಾಡಿಕೊಂಡು ಸಂಸಾರ ನಡೆಸಿದರೆ ಚೆಂದ. ಇಲ್ಲದಿದ್ದರೆ ಡಿವೋರ್ಸ್ ಕೊಡುವ ಪರಿಸ್ಥಿತಿ ಬಂದಾಗ ಹೆಂಡತಿ ಮುಂದಿಡುವ ಜೀವನಾಂಶ ಪರಿಹಾರ ಮೊತ್ತವನ್ನು ನೀಡಲು ಸಾಧ್ಯವಾಗದಿದ್ದರೆ, ಹಣದ ಮುಗ್ಗಟ್ಟು ಬಂದರೆ ಏನು ಮಾಡುವುದು ಎಂಬ ಭಯವೇ ಇಂದಿನ ಮ್ಯಾರೇಜ್ ಸ್ಟ್ರೈಕ್ ಟ್ರೆಂಡಿಂಗ್ ಗೆ ಕಾರಣವಾಗಿದೆ.
ಈ ಬಗ್ಗೆ ಹಲವರು ತಮ್ಮದೇ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಹಲವು ಮಹಿಳೆಯರು ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ನಮಗೆ ಕೂಡ ಮದುವೆಯಾಗಲು ಭಯವಾಗುತ್ತಿದೆ. ಮದುವೆಯಾದ ಮೇಲೆ ನಮ್ಮನ್ನು ಗಂಡಂದಿರು ಹೇಗೆ ನೋಡಿಕೊಳ್ಳುತ್ತಾರೋ, ಕಾನೂನು ಏನು ಹೇಳುತ್ತದೋ ಎಂಬ ಭಯ ಶುರುವಾಗಿದೆ ಎಂದು ಒಬ್ಬ ಮಹಿಳೆ ಬರೆದರೆ ಮತ್ತೊಬ್ಬರು ಪ್ರತಿಯೊಬ್ಬರಿಗೂ ತಮ್ಮದೇ ಆದ ಭಯವಿರುತ್ತದೆ. ನೀವು ಒಬ್ಬರನ್ನು ಪ್ರೀತಿಸುತ್ತೀರಿ, ಅವರ ಮೇಲೆ ನಂಬಿಕೆಯಿದೆ ಎಂದಾದರೆ ಮದುವೆಯಾಗಿ ಎನ್ನುತ್ತಾರೆ.
ಸೆಲೆಬ್ರಿಟಿಗಳಲ್ಲಿ ಹೆಚ್ಚಿದ ವಿಚ್ಛೇದನ: ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳು ಒಬ್ಬೊಬ್ಬರೇ 10-15 ವರ್ಷ ಸಂಸಾರ ನಡೆಸಿದವರು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾರವರು ಸೆಲೆಬ್ರಿಟಿ ಜೋಡಿಗಳಾಗಿದ್ದ ನಾಗ ಚೈತನ್ಯ-ಸಮಂತಾ, ಈಗ ಧನುಷ್-ಐಶ್ವರ್ಯ ವಿಚ್ಛೇದನ ನಂತರ ಟ್ವಿಟ್ಟರ್ ನಲ್ಲಿ ಹೇಳಿಕೆ ನೀಡಿದ್ದಾರೆ.
#MarriageStrike
— Thor's Hammer (@smartadis) January 18, 2022
Hit like if you agree with below pic.twitter.com/G0vTdFryLv
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್: ''ಅತೃಪ್ತಿ ಮತ್ತು ದುಃಖದ ನಿರಂತರ ಒತ್ತಡವನ್ನು ನಮ್ಮ ಅಸಹ್ಯ ಪೂರ್ವಜರು ಸಮಾಜದ ಮೇಲೆ ಹೇರಿದ ಅತ್ಯಂತ ಕೆಟ್ಟ ಪದ್ಧತಿಯೇ ಮದುವೆಯಾಗಿದೆ'' ಎಂಬ ಹೇಳಿಕೆಯನ್ನು ನಿನ್ನೆ ನೀಡಿದ ಮೇಲಂತೂ ಅದು ಬಹಳ ವೈರಲ್ ಆಗಿ ಚರ್ಚೆಯಾಗುತ್ತಿದೆ. ಹಲವರು ಅದಕ್ಕೆ ಸಹಮತಿ ಸೂಚಿಸಿದ್ದಾರೆ.
ಬಂಧನ, ಮುಕ್ತಿಯನ್ನು ಪಡೆಯುವ ಕಾರಣದಿಂದ ವಿಚ್ಛೇದನಗಳನ್ನು ಸಂಗೀತದೊಂದಿಗೆ ಆಚರಿಸಬೇಕು. ಪರಸ್ಪರರ ಅಪಾಯಕಾರಿ ಗುಣಗಳನ್ನು ಪರೀಕ್ಷಿಸುವ ಪ್ರಕ್ರಿಯೆಯೇ ವಿವಾಹಗಳು, ಬುದ್ಧಿವಂತರು ಮಾತ್ರ ಪ್ರೀತಿಸುತ್ತಾರೆ, ದಡ್ಡರು ಮದುವೆಯಾಗುತ್ತಾರೆ, ಸ್ಟಾರ್ ದಂಪತಿಗಳ ವಿಚ್ಛೇದನಗಳು ವಿವಾಹದ ಅಪಾಯಗಳ ಬಗ್ಗೆ ಇಂದಿನ ಯುವಜನತೆಗೆ ನೀಡುವ ಎಚ್ಚರಿಕೆಗಳಾಗಿವೆ ಎಂಬ ಕಠಿಣ ಮಾತುಗಳನ್ನು ಕೂಡ ಅವರು ಹೇಳಿರುವುದು ಬಹಳ ಸುದ್ದಿಯಾಗಿದೆ.
Just woke up and I’m seeing #MarriageStrike all over my timeline. I believe it’ll help innocent men. pic.twitter.com/01yf7KyzqV
— Road Runner