ಟೀಚರ್ ಆಗಿ ಬದಲಾದ ನಿವೃತ್ತ ವಾಯುಪಡೆ ಅಧಿಕಾರಿ: 26 ವರ್ಷಗಳಿಂದ 1500 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ನಮ್ಮ ನಡುವೆ ಅದೆಷ್ಟೋ ಮಂದಿಗೆ ಸ್ಪರ್ಧಾತ್ಮಕ ಪರೀಕ್ಷೆ, ಸರ್ಕಾರದ ಉನ್ನತ ಹುದ್ದೆಗಳಿಗೆ ಹೇಗೆ ಏರುವುದು ಹೇಗೆ ಕುರಿತು ತಿಳಿದೇ ಇರುವುದಿಲ್ಲ. ಹೀಗಾಗಿ ಅವರಿಗೆ ಮಾರ್ಗದರ್ಶನ ಮಾಡಲು ಮುಂದಾದೆ ಎನ್ನುತ್ತಾರೆ ಗಣೇಶ್.
Published: 23rd January 2022 01:10 PM | Last Updated: 24th January 2022 06:57 PM | A+A A-

ಪಾಠ ಹೇಳುತ್ತಿರುವ ಗಣೇಶ್
ಕೊಯಮತ್ತೂರು: ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಕೆ. ಗಣೇಶ್ ಇಂದು ಶಿಕ್ಷಕರಾಗಿ ಸಾವಿರಾರು ಮಂದಿಗೆ ಮಾರ್ಗದರ್ಶಕರಾಗಿದ್ದಾರೆ.
ಇದನ್ನೂ ಓದಿ: ಅತ್ಯಂತ ವೇಗವಾಗಿ ಮೌಂಟ್ ಎವರೆಸ್ಟ್ ಏರಿದ ಏಕಾಂಗಿ: ಭಾರತೀಯನ ದಾಖಲೆ
ಕೊಯಮತ್ತೂರು ನಿವಾಸಿ ಗಣೇಶ್ ಅವರು 20 ವರ್ಷಗಳ ಕಾಲ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2006ರಲ್ಲಿ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದರು.
ನಿವೃತ್ತಿ ಬಳಿಕ ವಿಶ್ರಾಂತ ಜೀವನ ನಡೆಸಲು ಇಚ್ಛಿಸದೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಶಿಕ್ಷಕ ಹುದ್ದೆಯನ್ನು ಅಲಂಕರಿಸಿದರು.
ಇದನ್ನೂ ಓದಿ: ಪಾಠ ಹೇಳಲು ವಿನೂತನ ಮಾರ್ಗ: ಜಾರ್ಖಂಡ್ ಸರ್ಕಾರಿ ಶಿಕ್ಷಕನ ಬೆನ್ನು ತಟ್ಟಿದ ಜಪಾನಿನ ಒಸಾಕಾ ವಿವಿ
ಇಂದು ನಮ್ಮ ನಡುವೆ ಅದೆಷ್ಟೋ ಮಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತಿಳಿದೇ ಇರುವುದಿಲ್ಲ. ಸೇನೆ ಮತ್ತು ಸರ್ಕಾರದ ಉನ್ನತ ಹುದ್ದೆಗಳಿಗೆ ಹೇಗೆ ಏರುವುದು ಹೇಗೆ ಎಂಬುದೂ ಗೊತ್ತಿರುವುದಿಲ್ಲ. ಹೀಗಾಗಿ ಅವರಿಗೆ ಮಾರ್ಗದರ್ಶನ ಮಾಡಲು ಮುಂದಾದೆ ಎನ್ನುತ್ತಾರೆ ಗಣೇಶ್.
ಇಂದು ಉದ್ಯೋಗ ಮತ್ತು ತರಬೇತಿ ಇಲಾಖೆಯ ಸಹಯೋಗದಲ್ಲಿ ಗಣೇಶ್ ಾವರು ಶಾಲೆ, ಕಾಲೇಜುಗಳಿಗೆ ತೆರಳಿ ಮಾರ್ಗದರ್ಶನ ನೀಡುತ್ತಾರೆ. ಇದುವರೆಗೂ 1500೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುರಿ ತೋರಿಸಿರುವ ಹೆಗ್ಗಳಿಕೆ ಅವರದು.
ಇದನ್ನೂ ಓದಿ: ಭರ್ಜರಿ ಊಟ: ಭಾವಿ ಅಳಿಯನಿಗೆ 365 ಬಗೆಯ ಭಕ್ಷ್ಯಗಳು; ಆಂಧ್ರ ಕುಟುಂಬದ ಅದ್ಧೂರಿ ಉಪಚಾರ