ಸೈಕಲ್ ಪೆಡಲ್ ನಿಂದ ಓಡುವ ನೀರಿನ ಪಂಪ್ ನಿಂದ 2.5 ಎಕರೆ ಭೂಮಿಗೆ ನೀರು: ಜಾರ್ಖಂಡ್ ರೈತನ ಆವಿಷ್ಕಾರ
ನೀರಿನ ಪಂಪ್ ಕೆಟ್ಟು ನಿಂತಿತು. ಅದನ್ನು ರಿಪೇರಿ ಮಾಡಿಸಲು ಮಹೇಶ್ ಮಾಂಜಿ ಅವರಲ್ಲಿ ಸಾಕಷ್ಟು ಹಣವಿರಲಿಲ್ಲ. ಆದರೆ ಅವರ ಕೃಷಿ ಅಗತ್ಯಗಳಿಗೆ ನೀರಿನ ಅವಶ್ಯಕತೆ ಬಹಳವೇ ಇತ್ತು.
Published: 27th January 2022 01:09 PM | Last Updated: 27th January 2022 02:02 PM | A+A A-

ಮಹೇಶ್ ಮಾಂಜಿ
ರಾಂಚಿ: ಜಾರ್ಖಂಡ್ ರಾಜ್ಯದ ಹಜಾರಿಬಾಗ್ ನಿವಾಸಿಯಾದ ಮಹೇಶ್ ಮಾಂಜಿ ಓರ್ವ ರೈತ. ಆರ್ಥಿಕ ಪರಿಸ್ಥಿತಿಯಿಂದಾಗಿ ಶಾಲೆಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಎಳವೆಯಲ್ಲಿಯೇ ಕೃಷಿಯಲ್ಲಿ ತೊಂಡಗಿಕೊಂಡವರು ಮಹೇಶ್.
ಇದನ್ನೂ ಓದಿ: ‘ಆಧುನಿಕ ಭಗೀರಥ’ ಮಹಾಲಿಂಗ ನಾಯ್ಕ ಅವರಿಗೆ ಕೃಷಿ ಕ್ಷೇತ್ರದ ಸಾಧನೆಗೆ ಪದ್ಮ ಪ್ರಶಸ್ತಿ
ಒಮ್ಮೆ ಅವರ ನೀರಿನ ಪಂಪ್ ಕೆಟ್ಟು ನಿಂತಿತು. ಅದನ್ನು ರಿಪೇರಿ ಮಾಡಿಸಲು ಅವರಲ್ಲಿ ಸಾಕಷ್ಟು ಹಣವಿರಲಿಲ್ಲ. ಆದರೆ ಅವರ ಕೃಷಿ ಅಗತ್ಯಗಳಿಗೆ ನೀರಿನ ಅವಶ್ಯಕತೆ ಬಹಳವೇ ಇತ್ತು.
ಇದನ್ನೂ ಓದಿ: ಉಡುಪಿ: ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು 3.5 ಕಿ.ಮೀ ಈಜಿ ದಾಖಲೆ ಬರೆದ 65 ವರ್ಷದ ಗಂಗಾಧರ್!
ಹೀಗಾಗಿ ಕೆಟ್ಟು ನಿಂತ ಪಂಪ್ ಅನ್ನು ಮಾರ್ಪಡು ಮಾಡಿ ಸೈಕಲ್ ಪೆಡಲ್ ನಿಂದ ನೀರು ಮೇಲೇರುವಂತೆ ಮಾಡಿದ್ದಾರೆ. ಸೈಕಲ್ ಪೆಡಲ್ ತುಳಿಯುವ ಮೂಲಕ ಮಹೇಶ್ ಮಾಂಜಿ ಅವರ ನೀರಿನ ಪಂಪ್ ಕೆಲಸ ಮಾಡುತ್ತದೆ. ವಿದ್ಯುತ್ ಅಗತ್ಯ ಈಗ ಬೇಡ.
ಇದನ್ನೂ ಓದಿ: ಟೀಚರ್ ಆಗಿ ಬದಲಾದ ನಿವೃತ್ತ ವಾಯುಪಡೆ ಅಧಿಕಾರಿ: 26 ವರ್ಷಗಳಿಂದ 1500 ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಈ ನೂತನ ಸೈಕಲ್ ಪಂಪ್ ನಿಂದ 2.5 ಎಕರೆ ಕೃಷಿ ಭೂಮಿಗೆ ಮಹೇಶ್ ನೀರು ಹಾಯಿಸುತ್ತಿದ್ದಾರೆ. ಹತ್ತಿರದ ಕೊಳಕ್ಕೆ ಪೈಪನ್ನು ಬಿಟ್ಟು ಸೈಕಲ್ ಪೆಡಲ್ ತುಳಿಯುವ ಮೂಲಕ ಪಂಪ್ ನಿಂದ ನೀರನ್ನು ಅವರು ಮೇಲೆತ್ತುತ್ತಿದ್ದಾರೆ.
ಇದನ್ನೂ ಓದಿ: ಕನ್ನಡಕ್ಕೊಂದು ಹೊಸ ಯೂನಿಕೋಡ್ ಫಾಂಟ್: ಆನೆಯನ್ನು ಹೋಲುವ ಫಾಂಟ್ ಬಂಡೀಪುರ
ಈ ಉಪಕರಣ ಕೊಳದಿಂದ ನೀರನ್ನು ಮೇಲುತ್ತತ್ತದೆಯೇ ಹೊರತು ಆಂತರ್ಜಲ ನೀರನ್ನಲ್ಲ ಎನ್ನುವುದೊಂದೇ ಕೊರತೆ. ಮುಂದಿನ ದಿನಗಳಲ್ಲಿ ಉಪಕರಣವನ್ನು ಮೇಲ್ದರ್ಜೆಗೆ ಏರಿಸಿದರೆ ಅದೂ ಕೂಡಾ ಸಾಧ್ಯವಾಗುತ್ತದೆ ಎನ್ನುವುದು ಮಹೇಶ್ ಅವರ ವಿಶ್ವಾಸದ ನುಡಿ.
ಇದನ್ನೂ ಓದಿ: ಪಾಠ ಹೇಳಲು ವಿನೂತನ ಮಾರ್ಗ: ಜಾರ್ಖಂಡ್ ಸರ್ಕಾರಿ ಶಿಕ್ಷಕನ ಬೆನ್ನು ತಟ್ಟಿದ ಜಪಾನಿನ ಒಸಾಕಾ ವಿವಿ