ತಮಿಳುನಾಡು: ಅವಮಾನಕ್ಕೀಡಾಗಿದ್ದ ಪೋಲಿಯೊ ಪೀಡಿತ ಯುವತಿ, ಈಗ ಗ್ರಾಮದ ಮೊದಲ ವೈದ್ಯಕೀಯ ವಿದ್ಯಾರ್ಥಿನಿ
ತಮ್ಮ ಆರೋಗ್ಯಸ್ಥಿತಿಯಿಂದಾಗಿ ಹಲವು ಆಸ್ಪತ್ರೆಗಳನ್ನು ಸುತ್ತಿದ್ದಾರೆ ಶಮ್ಸಿಯಾ. ಈ ಸಂದರ್ಭವೇ ಅವರಲ್ಲಿ ತಾವು ಮುಂದೊಂದು ದಿನ ವೈದ್ಯೆಯಾಗಬೇಕೆಂಬ ಕನಸು ಮೊಳೆತಿದ್ದು.
Published: 29th January 2022 12:28 PM | Last Updated: 29th January 2022 12:28 PM | A+A A-

ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಸಂದರ್ಭ ಶಮ್ಸಿಯಾ (ಎರಡನೇಯವರು)
ತಿರುಚ್ಚಿ: ತಮಿಳುನಾಡಿನ ಮೆರ್ಪನಾಯಿಕಾಡು ಎಂಬ ಗ್ರಾಮದಲ್ಲಿ ಇದುವರೆಗೂ ಯಾರೊಬ್ಬರೂ ಮೆಡಿಕಲ್ ವ್ಯಾಸಂಗ ಮಾಡಿದ್ದೇ ಇಲ್ಲ. ಆದರೆ ಈಗ ಆ ಕೊರತೆಯನ್ನು ಶಮ್ಸಿಯಾ ಆಫ್ರೀನ್ ನೀಗಿಸಿದ್ದಾರೆ. ಆಕೆ ಪೋಲಿಯೊ ಪೀಡಿತೆ ಎನ್ನುವುದು ಅಚ್ಚರಿಯ ಸಂಗತಿ.
ಇದನ್ನೂ ಓದಿ: ಅತ್ಯಂತ ವೇಗವಾಗಿ ಮೌಂಟ್ ಎವರೆಸ್ಟ್ ಏರಿದ ಏಕಾಂಗಿ: ಭಾರತೀಯನ ದಾಖಲೆ
ಶಮ್ಸಿಯಾ ಅವರು ಅವರ ತಂದೆಯಂತೆಯೇ ಪೊಲೀಯೊ ಪೀಡಿತೆ. ತಮ್ಮ ಆರೋಗ್ಯಸ್ಥಿತಿಯಿಂದಾಗಿ ಹಲವು ಸಮಸ್ಯೆಗಳನ್ನು, ಅವಮಾನಗಳನ್ನು ನುಂಗಿದ್ದಾರೆ. ಅದಕ್ಕಾಗಿ ಹಲವು ಆಸ್ಪತ್ರೆಗಳನ್ನು ಸುತ್ತಿದ್ದಾರೆ ಶಮ್ಸಿಯಾ. ಈ ಸಂದರ್ಭವೇ ಅವರಲ್ಲಿ ತಾವು ಮುಂದೊಂದು ದಿನ ವೈದ್ಯೆಯಾಗಬೇಕೆಂಬ ಕನಸು ಮೊಳೆತಿದ್ದು. ಇತ್ತೀಚಿಗಷ್ಟೆ ಅವರು ಚೆನ್ನೈನ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಪಡೆದಿದ್ದಾರೆ.
ಇದನ್ನೂ ಓದಿ: ಸೈಕಲ್ ಪೆಡಲ್ ನಿಂದ ಓಡುವ ನೀರಿನ ಪಂಪ್ ನಿಂದ 2.5 ಎಕರೆ ಭೂಮಿಗೆ ನೀರು: ಜಾರ್ಖಂಡ್ ರೈತನ ಆವಿಷ್ಕಾರ
ಶಮ್ಸಿಯಾ ತಮಿಳು ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಎನ್ನುವುದು ವಿಶೇಷ. ತಮಗೆ ಸಿಕ್ಕ ಶಿಕ್ಷಕರ ಪ್ರೋತ್ಸಾಹದಿಂದಲೇ ಶೈಕ್ಷಣಿಕವಾಗಿ ಉತ್ತಮ ಅಂಕಗಳನ್ನು ಹೊಂದಲು ಸಾಧ್ಯವಾಯಿತು ಎಂದು ಶಿಕ್ಷಕರನ್ನು ನೆನೆಯುತ್ತಾರೆ ಶಮ್ಸಿಯಾ. ಇಡೀ ಗ್ರಾಮವೇ ಆಕೆಯ ಬೆನ್ನಿಗೆ ನಿಂತಿದೆ.
ಇದನ್ನೂ ಓದಿ: ಪಾಠ ಹೇಳಲು ವಿನೂತನ ಮಾರ್ಗ: ಜಾರ್ಖಂಡ್ ಸರ್ಕಾರಿ ಶಿಕ್ಷಕನ ಬೆನ್ನು ತಟ್ಟಿದ ಜಪಾನಿನ ಒಸಾಕಾ ವಿವಿ