ಸಾವಯವ ಕೃಷಿ ಮೂಲಕ ಉದ್ಯಮಶೀಲತೆ ಮೆರೆದು ಮಾದರಿಯಾದ ದಾವಣಗೆರೆ ಮಹಿಳೆ
ಸರಿಯಾಗಿ ಕಾಲಕಾಲಕ್ಕೆ ಬೆಳೆ ಫಸಲು ಬಾರದೆ, ಹಾಕಿದ ಬಂಡವಾಳ ಕೂಡ ಸಿಗದೆ ಕೈ ಸುಟ್ಟುಕೊಂಡು ಪರಿತಪಿಸುವ ಹಲವು ರೈತರನ್ನು ನಾವು ಕಾಣುತ್ತೇವೆ, ಕೇಳುತ್ತೇವೆ, ತೆಗೆದುಕೊಂಡ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರು ಕೂಡ ಸಾಕಷ್ಟು ಮಂದಿ ಇದ್ದಾರೆ.
Published: 30th January 2022 09:23 AM | Last Updated: 31st January 2022 01:01 PM | A+A A-

ಸರೋಜ ನಾಗೇಂದ್ರಪ್ಪ ಪಾಟೀಲ್
ದಾವಣಗೆರೆ: ಸರಿಯಾಗಿ ಕಾಲಕಾಲಕ್ಕೆ ಬೆಳೆ ಫಸಲು ಬಾರದೆ, ಹಾಕಿದ ಬಂಡವಾಳ ಕೂಡ ಸಿಗದೆ ಕೈ ಸುಟ್ಟುಕೊಂಡು ಪರಿತಪಿಸುವ ಹಲವು ರೈತರನ್ನು ನಾವು ಕಾಣುತ್ತೇವೆ, ಕೇಳುತ್ತೇವೆ, ತೆಗೆದುಕೊಂಡ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವವರು ಕೂಡ ಸಾಕಷ್ಟು ಮಂದಿ ಇದ್ದಾರೆ.
ಅಂತವರ ಮಧ್ಯೆ ಈ ಕೃಷಿಕ ಮಹಿಳೆ ಮಾದರಿಯಾಗಿದ್ದಾರೆ. 63 ವರ್ಷದ ಸರೋಜ ನಾಗೇಂದ್ರಪ್ಪ ಪಾಟೀಲ್ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ನಿಟ್ಟೂರು ಗ್ರಾಮದವರು. ಇವರು ತಮ್ಮ ಜಮೀನಿನಲ್ಲಿ ಬೆಳೆಗಳನ್ನು ಸಾವಯವ ಮಾದರಿಯಲ್ಲಿ ಬೆಳೆಸಿ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಆ ಪ್ರದೇಶದಲ್ಲಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇಂದು ಸಾವಯವ ಕೃಷಿಯಲ್ಲಿ ಮಹಿಳಾ ಉದ್ಯಮಶೀಲರಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ತದವನಮ್ ಕುಗ್ರಾಮದಲ್ಲಿ ಇವರು ಬೆಳೆದ ಬೆಳೆಗಳು ದೇಶದ ಮೂಲೆಮೂಲೆಗಳಿಗೂ ತಲುಪಿದೆ. ಕೊರೋನಾ ಸೋಂಕಿನ ಸಮಯದಲ್ಲಿಯೂ ಇವರ ಬೆಳೆಗಳಿಗೆ ಗ್ರಾಹಕರು ಸಿಕ್ಕಿ ಕೈತುಂಬಾ ಸಂಪಾದನೆ ಮಾಡಿದ್ದಾರೆ.
ಸರೋಜ ರೋಚಕ ಪಯಣ: 1987 ರಲ್ಲಿ ಸರೋಜಾ ಅವರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಅದನ್ನು ಮತ್ತೆ ಸುಸ್ಥಿತಿಗೆ ತರಲು ಡೈರಿ ಫಾರ್ಮ್ ಅನ್ನು ಪ್ರಾರಂಭಿಸಿದರು. ನಂತರ ತೆಂಗಿನಕಾಯಿ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು, ಕೀಟ ನಿರ್ವಹಣೆಯನ್ನು ಪ್ರಾರಂಭಿಸುವ ಮೂಲಕ ಉದ್ಯಮಶೀಲತೆಯ ಸಣ್ಣ ಹೆಜ್ಜೆಯನ್ನು ಇಟ್ಟರು.
ಇದನ್ನೂ ಓದಿ: ಕೃಷಿ ಕ್ಷೇತ್ರದತ್ತ ಎಂಬಿಎ ಪದವೀಧರೆ ಒಲವು; ಕುರಿ ಸಾಕಣೆ, ಸಾವಯವ ಹಣ್ಣುಗಳ ಮಾರಾಟ
ಕೃಷಿ ಇಲಾಖೆಯ ಅಭಿಯಾನ ಮೂಲಕ ತಮ್ಮೂರಿನ ಮಹಿಳೆಯರಿಗೆ ಕಲಿಸಿಕೊಡುವ ಕಾರ್ಯವನ್ನು ಕೂಡ ಆರಂಭಿಸಿದರು. ತಮ್ಮ ಸುತ್ತುಮುತ್ತ ಇರುವ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ಕಲಿಸಿಕೊಟ್ಟರು. ಬೆಳೆಗಳನ್ನು ಸಾವಯವ ಮಾದರಿಯಲ್ಲಿ ಬೆಳೆಯುವ ಕ್ರಮ ಕಲಿಸಿದರು. ಬೇರೆ ರೈತ ಮಹಿಳೆಯರಿಗೆ ಕಲಿಸುತ್ತಾ ತಾವು ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುತ್ತಾ ಸರೋಜ ಅವರು ಕೃಷಿಯಲ್ಲಿ ಬೆಳೆಯುತ್ತಾ ಹೋದರು. ಆರಂಭದಲ್ಲಿ ಅವರ ಜೀವನ ಹೋರಾಟದ ಬದುಕಾಗಿತ್ತು. ನಿರಂತರ ಪ್ರಯತ್ನದಿಂದ ತಮ್ಮ ಕುಟುಂಬದ 30 ಎಕರೆ ಜಮೀನಿನಲ್ಲಿ ಇಂದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಕೃಷಿ ಇಲಾಖೆಯು ಕೀಟ ನಿರ್ವಹಣೆಯನ್ನು ಪ್ರಾರಂಭಿಸಿ ನನ್ನನ್ನು ಶಿಕ್ಷಕನನ್ನಾಗಿ ಸೇರಿಸಿತು. ನನ್ನ ತೋಟವನ್ನು ಸಹಾಯಕ ಪ್ರದೇಶವಾಗಿ ಆಯ್ಕೆ ಮಾಡಲಾಯಿತು. ನಾವು ಹರಿಹರ ಮತ್ತು ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳನ್ನು ಪ್ರತಿದಿನ ಸುತ್ತಲು ಪ್ರಾರಂಭಿಸಿದೆವು. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ನಾನು ಆ ಸಮಯದಲ್ಲಿ ಸಾವಯವ ಮತ್ತು ನೈಸರ್ಗಿಕ ಕೃಷಿಯ ಪರಿಚಯವಾಯಿತು ಎಂದು ಸರೋಜ ಹೇಳುತ್ತಾರೆ.