ದುಬಾರಿ ಶುಲ್ಕ ಭಯ: ನೀಟ್ ಪಾಸಾದರೂ ಸೀಟು ತ್ಯಜಿಸಿದ ವಿದ್ಯಾರ್ಥಿನಿ ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ವಿ!

ತಂಗಪೆಚ್ಚಿ ನೀಟ್ ಪರೀಕ್ಷೆಯಲ್ಲಿ 155 ಅಂಕ ಗಳಿಸಿ ಪಾಸಾಗಿದ್ದಳು. ಆದರೆ ದುಬಾರಿ ಶುಲ್ಕದ ಭಯದಿಂದ ಸೀಟನ್ನು ತ್ಯಜಿಸಿದ್ದಳು.

Published: 31st January 2022 01:18 PM  |   Last Updated: 31st January 2022 07:08 PM   |  A+A-


NEET2020 results

ನೀಟ್ ಫಲಿತಾಂಶ

The New Indian Express

ಮದುರೈ: 18 ವರ್ಷದ ತಂಗಪೆಚ್ಚಿ ಎನ್ನುವ ವಿದ್ಯಾರ್ಥಿನಿ ಪಾನಮೂಪನ್ ಪತ್ತಿ ಕುಗ್ರಾಮದ ನಿವಾಸಿ. 2020ರಲ್ಲಿ ಆಕೆ ನೀಟ್ ಪರೀಕ್ಷೆ ಬರೆದಿದ್ದಳು. ಹಿಂದುಳಿದ ವರ್ಗದಿಂದ ಹಿನ್ನೆಲೆಯ ಆಕೆಗೆ ಡಾಕ್ಟರ್ ಆಗಬೇಕು ಎನ್ನುವ ಕನಸು. ಅದಕ್ಕಾಗಿ ಎಂಬಿಬಿಎಸ್ ಓದಲು ಅವಳಿಗಾಸೆ.

ಇದನ್ನೂ ಓದಿ: ವಲಸೆ ಕಾರ್ಮಿಕ ಮಹಿಳೆ ಈಗ ಕುಂದಾಪುರದ ಗ್ರಾಮ ಪಂಚಾಯತ್ ಅಧ್ಯಕ್ಷೆ!

ತಂಗಪೆಚ್ಚಿ ನೀಟ್ ಪರೀಕ್ಷೆಯಲ್ಲಿ 155 ಅಂಕ ಗಳಿಸಿ ಪಾಸಾಗಿದ್ದಳು. ಆದರೆ ದುಬಾರಿ ಶುಲ್ಕದ ಭಯದಿಂದ ಸೀಟನ್ನು ತ್ಯಜಿಸಿದ್ದಳು. ನಂತರ ಸರ್ಕಾರ ಹಿಂದುಳಿದ ವರ್ಗಕ್ಕೆ ಶೇ. 7.5 ಮೀಸಲಾತಿ ಘೋಷಿಸಿತ್ತು. ಆದರೆ ಅಷ್ಟರಲ್ಲಿ ತಂಗಪೆಚ್ಚಿ ಸೀಟು ತ್ಯಜಿಸಿಯಾಗಿತ್ತು.

ಇದನ್ನೂ ಓದಿ: ಮಹೀಂದ್ರ ಶೋರೂಂನಿಂದ ಅವಮಾನಕ್ಕೊಳಗಾದ ತುಮಕೂರಿನ ರೈತ ಕೆಂಪೇಗೌಡ ಕೈ ಸೇರಿತು ಬೊಲೆರೊ ಪಿಕ್ ಅಪ್ ಟ್ರಕ್!

2021ರಲ್ಲಿ ತಂಗಪೆಚ್ಚಿ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆದಳು. ಈ ಬಾರಿ ಆಕೆ 256 ಅಂಕ ಗಳಿಸಿದಳು. ಕಳೆದ ಬಾರಿಗಿಂತ 100 ಅಂಕ ಹೆಚ್ಚು. ಕನ್ಯಾಕುಮಾರಿಯ ಶ್ರೀ ಮೂಕಾಂಬಿಕಾ ಮೆಡಿಕಲ್ ಕಾಲೇಜಿನಲ್ಲಿ ಆಕೆಗೆ ಮೆಡಿಕಲ್ ಸೀಟು ಸಿಕ್ಕಿದೆ.

ಇದನ್ನೂ ಓದಿ: ಪಾಠ ಹೇಳಲು ವಿನೂತನ ಮಾರ್ಗ: ಜಾರ್ಖಂಡ್ ಸರ್ಕಾರಿ ಶಿಕ್ಷಕನ ಬೆನ್ನು ತಟ್ಟಿದ ಜಪಾನಿನ ಒಸಾಕಾ ವಿವಿ

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತಂಗಪೆಚ್ಚಿ ತಮಿಳು ಮಾಧ್ಯಮ ಹಿನ್ನೆಲೆಯಿಂದ ಬಂದ ಕಾರಣ ಇಂಗ್ಲಿಷ್ ಪದಗಳ ಬಳಕೆ ಸವಾಲಿನದ್ದಾಗಿತ್ತು. ಆದರೆ ಶಿಕ್ಷಕರ ನೆರವಿನಿಂದ ಆ ಸವಾಲನ್ನು ಮೀರುವಂತಾಯಿರು ಎಂದಿದ್ದಾರೆ.

ಇದನ್ನೂ ಓದಿ: ಅವಮಾನಕ್ಕೀಡಾಗಿದ್ದ ಪೋಲಿಯೊ ಪೀಡಿತ ಯುವತಿ, ಈಗ ಗ್ರಾಮದ ಮೊದಲ ವೈದ್ಯಕೀಯ ವಿದ್ಯಾರ್ಥಿನಿ


Stay up to date on all the latest ವಿಶೇಷ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp