
ಸಬ್ ಇನ್ಸ್ ಪೆಕ್ಟರ್ ಬಖತ್ ಸಿಂಗ್
ಪನ್ನಾ: ಮಧ್ಯಪ್ರದೇಶದ ಬ್ರಜ್ ಪುರ ಎಂಬ ಗ್ರಾಮದಲ್ಲಿ ಸಬ್ ಇನ್ಸ್ ಪೆಕ್ಟರ್ ಬಖತ್ ಸಿಂಗ್ ಅಪರಾಧಿಗಳನ್ನು ಪತ್ತೆ ಹಚ್ಚುವುದರ ಜೊತೆಗೆ ಬೆಳಿಗ್ಗೆಯ ಹೊತ್ತಿನಲ್ಲಿ ಠಾಣೆಯಲ್ಲಿಯೇ ಮಕ್ಕಳಿಗೆ ಪಾಠ ಮಾಡುವ ಮೂಲಕ ಹೆಸರು ಮಾಡಿದ್ದಾರೆ.
ಇದನ್ನೂ ಓದಿ: ವಲಸೆ ಕಾರ್ಮಿಕ ಮಹಿಳೆ ಈಗ ಕುಂದಾಪುರದ ಗ್ರಾಮ ಪಂಚಾಯತ್ ಅಧ್ಯಕ್ಷೆ!
ಪೊಲೀಸ್ ಠಾಣೆಯ ಆವರಣದಲ್ಲಿಯೇ ಅವರು ಮಕ್ಕಳಿಗಾಗಿ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಬೆಳಿಗ್ಗೆ 7- 10ರ ತನಕ ಅಲ್ಲಿ ಬಖತ್ ಸಿಂಗ್ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡುತ್ತಾರೆ.
ಇದನ್ನೂ ಓದಿ: ಅವಮಾನಕ್ಕೀಡಾಗಿದ್ದ ಪೋಲಿಯೊ ಪೀಡಿತ ಯುವತಿ, ಈಗ ಗ್ರಾಮದ ಮೊದಲ ವೈದ್ಯಕೀಯ ವಿದ್ಯಾರ್ಥಿನಿ
ಬೆಳಿಗ್ಗೆ 10 ಗಂಟೆ ನಂತರ ಅವರು ತಮ್ಮ ಕರ್ತವ್ಯಕ್ಕೆ ಮರಳುತ್ತಾರೆ. ಪೊಲೀಸ್ ನೌಕರಿ ಸೇರುವುದಕ್ಕೂ ಮುನ್ನ ಬಖತ್ ಸಿಂಗ್ ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಸೈಕಲ್ ಪೆಡಲ್ ನಿಂದ ಓಡುವ ನೀರಿನ ಪಂಪ್ ನಿಂದ 2.5 ಎಕರೆ ಭೂಮಿಗೆ ನೀರು: ಜಾರ್ಖಂಡ್ ರೈತನ ಆವಿಷ್ಕಾರ
ಪೊಲೀಸ್ ಠಾಣೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಕಾರ್ಯದಿಂದ ಮಕ್ಕಳಿಗೆ ತಿಳಿವಳಿಕೆ ಹೆಚ್ಚುವುದರ ಜೊತೆಗೆ ಮಕ್ಕಳಲ್ಲಿ ಪೊಲೀಸರ ಭಯವೂ ಹೋಗುತ್ತದೆ ಎನ್ನುತ್ತಾರೆ ಬಖತ್ ಸಿಂಗ್.
ಇದನ್ನೂ ಓದಿ: ಪಬ್ಲಿಕ್ ಗೋಡೆ ಮೇಲೆ ಸ್ವೆಟರ್, ಮಫ್ಲರ್ ಸಂಗ್ರಹ; ನಿರ್ಗತಿಕರನ್ನು ಬೆಚ್ಚಗಿಡಲು ವಿನೂತನ ಮಾರ್ಗ 'ನೇಕಿ ಕಿ ದೀವಾರ್'