ಫೆಮೀನಾ ಮಿಸ್ ಇಂಡಿಯಾ-2022 ಸಿನಿ ಶೆಟ್ಟಿ ಬಗೆಗಿನ ಅಜ್ಞಾತ ಸಂಗತಿಗಳಿವು...

ಫೆಮೀನಾ ಮಿಸ್ ಇಂಡಿಯಾ-2022 ಪ್ರಶಸ್ತಿಗೆ ಕರ್ನಾಟಕದ ಸಿನಿ ಶೆಟ್ಟಿ ಜುಲೈ 3, 2022 ರಂದು ಭಾಜನರಾಗಿದ್ದರು. ಆಕೆಯ ಬಗ್ಗೆ ಹೆಚ್ಚು ಮಂದಿಗೆ ತಿಳಿಯದ ಸಂಗತಿಗಳು ಇಲ್ಲಿವೆ. 
ಮಿಸ್ ಇಂಡಿಯಾ ಸಿನಿ ಶೆಟ್ಟಿ
ಮಿಸ್ ಇಂಡಿಯಾ ಸಿನಿ ಶೆಟ್ಟಿ

ನವದೆಹಲಿ: ಫೆಮೀನಾ ಮಿಸ್ ಇಂಡಿಯಾ-2022 ಪ್ರಶಸ್ತಿಗೆ ಕರ್ನಾಟಕದ ಸಿನಿ ಶೆಟ್ಟಿ ಜುಲೈ 3, 2022 ರಂದು ಭಾಜನರಾಗಿದ್ದರು. ಈ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಿನಿ ಶೆಟ್ಟಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಆಕೆಯ ಬಗ್ಗೆ ಹೆಚ್ಚು ಮಂದಿಗೆ ತಿಳಿಯದ ಸಂಗತಿಗಳು ಇಲ್ಲಿವೆ. 

ಮುಂಬೈ ನಲ್ಲಿ ಜನಿಸಿದ ಸಿನಿ ಶೆಟ್ಟಿ, ಕರ್ನಾಟಕದ ಮೂಲದವರಾಗಿದ್ದು, ಅಕೌಂಟಿಂಗ್ ಮತ್ತು ಫೈನಾನ್ಸ್ ವಿಭಾಗದಲ್ಲಿ ಪದವೀಧರರಾಗಿದ್ದಾರೆ. ಪ್ರಕೃತ ಚಾರ್ಟೆಡ್ ಫೈನಾನ್ಷಿಯಲ್ ಅನಾಲಿಸ್ಟ್ ವೃತ್ತಿ ಪರ ಕೋರ್ಸ್ ಮಾಡುತ್ತಿದ್ದಾರೆ. 

ಮಾಡೆಲಿಂಗ್ ಹೊರತಾಗಿ, 21 ವರ್ಷದ ಮಿಸ್ ಇಂಡಿಯಾ, ನೃತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ನಾಲ್ಕನೇ ವಯಸ್ಸಿನಿಂದಲೇ ಸಿನಿ ಶೆಟ್ಟಿ ನೃತ್ಯ ಅಭ್ಯಾಸ ಪ್ರಾರಂಭಿಸಿದ್ದರು ಹಾಗೂ 14 ವಯಸ್ಸಿನಲ್ಲಿ ಅರಂಗೇಟ್ರಮ್ ಹಾಗೂ ಭರತನಾಟ್ಯವನ್ನು ಪ್ರಾರಂಭಿಸಿದ್ದರು.

ಸಿನಿ ಹಿಂದೂ ಕುಟುಂಬಕ್ಕೆ ಸೇರಿದವರಾಗಿದ್ದು, ಆಕೆಯ ತಾಯಿ ಹೇಮಾ ಶೆಟ್ಟಿ ಹಾಗೂ ಸಹೋದರ ಶಿಕಿನ್ ಶೆಟ್ಟಿ, ಸಿನಿ ಶೆಟ್ಟಿ ಅವರ ಶಿಕ್ಷಣ ಹಾಗೂ ಸೃಜನಾತ್ಮಕ ಆಸಕ್ತಿಗಳಿಗೆ ಪ್ರೋತ್ಸಾಹ ನೀಡಿದ್ದರು.

ಫ್ರೀಸ್ಟೈಲ್ ನಿಂದ ಭರತನಾಟ್ಯಮ್ ವರೆಗೆ ಆಕೆ ತರಬೇತಿ ಪಡೆದ ನೃತ್ಯಗಾರ್ತಿಯಾಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ನೃತ್ಯದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಈ ಪೈಕಿ ಒಂದು ವೀಡಿಯೋಗೆ 1.4 ಮಿಲಿಯನ್ ವೀಕ್ಷಣೆ ದೊರೆತಿದೆ.


ಮಿಸ್ ಇಂಡಿಯಾ 2022 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಿನಿ ಶೆಟ್ಟಿ, ಮುಂದೆ, ಪ್ರತಿಷ್ಠಿತ 71 ನೇ ಮಿಸ್ ವರ್ಲ್ಡ್ ಪೆಜೆಂಟ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com