ಪಶ್ಚಿಮ ಬಂಗಾಳ: ವೈದ್ಯನ ನಿಸ್ವಾರ್ಥ ಸೇವೆ, ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ!

ಪಶ್ಚಿಮ ಬಂಗಾಳದ ಹಿಂದುಳಿದ ಜಂಗಲ್ಮಹಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಜಾರ್ಗ್ರಾಮ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕ ಸ್ನೇಹಶಿಶ್ ದಾಸ್ ಅರ್ಹ ವೈದ್ಯರಾಗಿದ್ದು ತಮ್ಮ ನಿಸ್ವಾರ್ಥ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಚಿಕಿತ್ಸೆ ನೀಡುತ್ತಿರುವ ವೈದ್ಯ ಸ್ನೇಹಶಿಶ್ ದಾಸ್
ಚಿಕಿತ್ಸೆ ನೀಡುತ್ತಿರುವ ವೈದ್ಯ ಸ್ನೇಹಶಿಶ್ ದಾಸ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹಿಂದುಳಿದ ಜಂಗಲ್ಮಹಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಜಾರ್ಗ್ರಾಮ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕ ಸ್ನೇಹಶಿಶ್ ದಾಸ್ ಅರ್ಹ ವೈದ್ಯರಾಗಿದ್ದು ತಮ್ಮ ನಿಸ್ವಾರ್ಥ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. 

ಕೆಲಸದ ಸಮಯ ಮುಗಿದ ನಂತರ ಅವರು ರೋಗಿಗಳಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಸಾರ್ವಜನಿಕ ಆರೋಗ್ಯದಲ್ಲಿ ಡಿಪ್ಲೊಮಾ ಮತ್ತು ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ಖಾಸಗಿ ಅಭ್ಯಾಸಕ್ಕೆ ಹೋಗದೆ ಬದಲಾಗಿ ಬಡವರ ಸೇವೆಗೆ ತಮ್ಮ ಸಮಯವನ್ನು ಬಳಸಿಕೊಳ್ಳಲು ನಿರ್ಧರಿಸಿದರು.

ದಾಸ್ ಬಡ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಬಿಜೋಯ್ ಕೃಷ್ಣ ದಾಸ್ ಜಾರ್ಗ್ರಾಮ್ನ ಮಾಣಿಕ್ಪಾರಾ ಪ್ರದೇಶದಲ್ಲಿ ಸಣ್ಣ ಖಾಸಗಿ ಸಂಸ್ಥೆಯಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು. 'ನನ್ನ ತಂದೆಗೆ ನನ್ನ ಅಕ್ಕನಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ. ಅವಳು 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಆದರೆ ನಮ್ಮಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಮುಂದಿನ ಶಿಕ್ಷಣವನ್ನು ಮುಂದುವರಿಸುವ ಅವಳ ಬಯಕೆಯು ನಶಿಸಿ ಹೋಗಿತ್ತು. ನನ್ನ ಅಕ್ಕನಿಗೆ ಮದುವೆಯಾಯಿತು ಎಂದು ದಾಸ್ ನೆನಪಿಸಿಕೊಳ್ಳುತ್ತಾರೆ.

ಟೆಂಟುಲಿಯಾದಲ್ಲಿರುವ ಕಿರಿಯ ಪ್ರೌಢಶಾಲೆಯನ್ನು ತಲುಪಲು ದಾಸ್ 2 ಕಿ.ಮೀಗಿಂತ ಹೆಚ್ಚು ನಡೆಯಬೇಕಿತ್ತು. 'ನಾನು ನನ್ನ ತಂದೆಗೆ ಕುಟುಂಬವನ್ನು ನಡೆಸಲು ಸಹಾಯ ಮಾಡಲು ಗದ್ದೆಗಳಲ್ಲಿ ಕೆಲಸ ಮಾಡಿದೆ. ದಿನದಲ್ಲಿ ಒಂದೇ ಒಂದು ಹೊತ್ತಿನ ಊಟ ಮಾಡುವ ದಿನಗಳು ಬಹಳ ಇದ್ದವು. ಆದರೂ ನಾನು ಉನ್ನತ ಶಿಕ್ಷಣವನ್ನು ಪಡೆಯಲು ಬಯಸಿದ್ದೆ ಎಂದು ದಾಸ್ ಹೇಳಿದರು. ಪ್ರೌಢಶಾಲೆಗೆ ಪ್ರವೇಶ ಪಡೆದ ನಂತರ, ಬಿರುಬೇಸಿಗೆ ಮತ್ತು ಭಾರೀ ಮಳೆಯಲ್ಲೂ ಕನಿಷ್ಠ 6 ಕಿಮೀ ನಡೆಯುತ್ತಿದ್ದೆ. 'ನನಗೆ ಸ್ಕಾಲರ್‌ಶಿಪ್ ಸಿಕ್ಕಿತು. ಅದರಲ್ಲಿ ನಾನು ಬೈಸಿಕಲ್ ಖರೀದಿಸಿದೆ. ಅದರಿಂದ ನನ್ನ ಶಾಲೆ ಪ್ರಯಾಣ ಸುಲಭವಾಯಿತು ಎಂದು ದಾಸ್ ಹೇಳುತ್ತಾರೆ.

ನಂತರ ತಾನು ಈಸ್ಟ್ ಮಿಡ್ನಾಪುರದ ಇನ್‌ಸ್ಟಿಟ್ಯೂಟ್‌ಗೆ ದಾಖಲಾಗಿದ್ದು ಅಲ್ಲಿ ತನಗೆ ಹಾಸ್ಟೆಲ್ ಸೌಲಭ್ಯ ಸಿಕ್ಕಿತು. 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಅವರು ತಮ್ಮ ಮಾರ್ಗದರ್ಶಕ ಅಮಲ್ ದಾಸ್ ಅವರನ್ನು ಭೇಟಿಯಾದಾಗ ಅವರು ಸ್ವತಃ ವೈದ್ಯರಂತೆ ಕಂಡರು. 'ಅವರು ನನ್ನಂತಹ ಹತ್ತಾರು ವಿದ್ಯಾರ್ಥಿಗಳನ್ನು ಜಂಗಲ್‌ಮಹಲ್‌ನಲ್ಲಿ ವೈದ್ಯರಾಗಲು ಪ್ರೇರೇಪಿಸಿದ್ದಾರೆ. ಅವರು ನ್ಯಾಷನಲ್ ಆಡಿಟ್ ಫೆಡರೇಶನ್, ಸಿಎಜಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ, ಅವರು ಪ್ರತಿ ವಾರ ಬಡವರಿಗಾಗಿ ಜಂಗಲಮಹಲ್‌ಗೆ ಭೇಟಿ ನೀಡುತ್ತಿದ್ದರು ಎಂದು ದಾಸ್ ಹೇಳುತ್ತಾರೆ.

ವೈದ್ಯರ ಸೇವೆ ಕುರಿತಿಂತೆ ಮಾತನಾಡಿರುವ ಎರಡು ಮಕ್ಕಳ ತಾಯಿಯಾದ ಚಂದನಾ ಮಹತೋ ಅವರು, ನನ್ನ ಮಗ ತೀವ್ರ ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದನು. ನಾನು ತಡರಾತ್ರಿ ವೈದ್ಯರ ಬಳಿಗೆ ಹೋದೆ. ಅವರು ನನ್ನ ಮಗನನ್ನು ಪರೀಕ್ಷಿಸಿ, ಔಷಧಿಗಳನ್ನು ಬರೆದುಕೊಟ್ಟರು. ಎರಡು ದಿನಗಳಲ್ಲಿ ನನ್ನ ಮಗ ಚೇತರಿಸಿಕೊಂಡನು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com