ಉತ್ತರ ಪ್ರದೇಶ: ಬಡವರ ಸಹಾಯಕ್ಕಾಗಿ 600 ಕೋಟಿ ರೂ. ಮೌಲ್ಯದ ಆಸ್ತಿ ದಾನ ಮಾಡಿದ ವೈದ್ಯ!

ಮೊರಾದಾಬಾದ್ ನ ವೈದ್ಯ ಅರವಿಂದ್ ಗೋಯಲ್ ಅವರು ಬಡವರ ಸಹಾಯಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನು ದಾನ ಮಾಡಿದ್ದಾರೆ.
ಅರವಿಂದ್ ಗೋಯಲ್
ಅರವಿಂದ್ ಗೋಯಲ್

ಲಖನೌ: ಮೊರಾದಾಬಾದ್ ನ ವೈದ್ಯ ಅರವಿಂದ್ ಗೋಯಲ್ ಅವರು ಬಡವರ ಸಹಾಯಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನು ದಾನ ಮಾಡಿದ್ದಾರೆ.

ಇಡೀ ಆಸ್ತಿಯ ಮೌಲ್ಯ ಸುಮಾರು 600 ಕೋಟಿ ರೂ. ಆಗಿದ್ದು, ಅವರು ಕಳೆದ 50 ವರ್ಷಗಳಿಂದ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಮೊರಾದಾಬಾದ್‌ನ 50 ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅರವಿಂದ್ ಕುಮಾರ್ ಗೋಯಲ್ ಅವರು, ಜನರಿಗೆ ಉಚಿತ ಸೌಲಭ್ಯಗಳನ್ನು ಒದಗಿಸಿದ್ದರು. ಅವರು ರಾಜ್ಯದಲ್ಲಿ ಬಡವರಿಗೆ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆಯನ್ನು ಸಹ ಏರ್ಪಡಿಸಿದ್ದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಮತ್ತು ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ನಾಲ್ಕು ಬಾರಿ ರಾಷ್ಟ್ರಪತಿಗಳು ಡಾ.ಗೋಯಲ್ ಅವರನ್ನು ಗೌರವಿಸಿದ್ದಾರೆ.

ಪತ್ನಿ ರೇಣು ಗೋಯಲ್ ಹೊರತುಪಡಿಸಿ, ಅರವಿಂದ್ ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com