ಸಾಧನೆಗೆ ವಯಸ್ಸಿನ ಮಿತಿ ಇಲ್ಲ: 94, 85 ರ ವಯಸ್ಸಿನಲ್ಲೂ ಕ್ರೀಡೆಯಲ್ಲಿ ತೊಡಗಿ ಸಾಧನೆ ಮಾಡುತ್ತಿರುವ ಕೊಡಗಿನ ಸಹೋದರರು!
ಸಾಧನೆ ಮಾಡಲು ವಯಸ್ಸಿನ ಮಿತಿಯಿಲ್ಲ. ಅದಕ್ಕೆ ಕೇವಲ ಛಲ, ಬಲ ಗುರಿ ಇರಬೇಕು ಎಂಬ ಮಾತನ್ನು ಕೊಡಗು ಮೂಲದ ಈ ಇಬ್ಬರು ವಯೋವೃದ್ಧರು ತೋರಿಸಿಕೊಟ್ಟಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
Published: 03rd June 2022 12:25 PM | Last Updated: 03rd June 2022 01:05 PM | A+A A-

ಪಾಲೇಕಂಡ ಪಿ ಬೋಪಯ್ಯ ಮತ್ತು ಪಾಲೇಕಂಡ ಬೆಳಿಯಪ್ಪ
ಮಡಿಕೇರಿ: ಸಾಧನೆ ಮಾಡಲು ವಯಸ್ಸಿನ ಮಿತಿಯಿಲ್ಲ. ಅದಕ್ಕೆ ಕೇವಲ ಛಲ, ಬಲ ಗುರಿ ಇರಬೇಕು ಎಂಬ ಮಾತನ್ನು ಕೊಡಗು ಮೂಲದ ಈ ಇಬ್ಬರು ವಯೋವೃದ್ಧರು ತೋರಿಸಿಕೊಟ್ಟಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಕುಟ್ಟಂಡಿ ಗ್ರಾಮದ ನಿವಾಸಿಗಳಾದ ಪಾಲೇಕಂಡ ಪಿ ಬೋಪಯ್ಯ (94) ಮತ್ತು ಪಾಲೇಕಂಡ ಬೆಳಿಯಪ್ಪ (85) ಸಹೋದರರು, ದೇಶಾದ್ಯಂತ ಹಿರಿಯ ನಾಗರಿಕರಿಗಾಗಿ ನಡೆಯುವ ವಿವಿಧ ಕ್ರೀಡಾ ಚಾಂಪಿಯನ್ಶಿಪ್ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಜಿಲ್ಲೆ ಮತ್ತು ರಾಜ್ಯ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ಯಾನ್ ಇಂಡಿಯಾ ಮಾಸ್ಟರ್ ಗೇಮ್ಸ್ನಲ್ಲಿಯೂ ಇಬ್ಬರೂ ಸಹೋದರರು ಭಾಗವಹಿಸಿದ್ದರು. ಕ್ರೀಡೆಯಲ್ಲಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರು.
ಇದನ್ನೂ ಓದಿ: ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿ ಪ್ರಧಾನಿ ಮೋದಿ ಮನಗೆದ್ದ ಆಂಧ್ರ ಪ್ರದೇಶದ ನಿವೃತ್ತ ಮುಖ್ಯೋಪಾಧ್ಯಾಯ!
ಜಾವೆಲಿನ್ ಥ್ರೋ, ರಿಲೇ ರೇಸ್, 1,500 ಮೀಟರ್ ಓಟದ ಓಟ, ವಾಕಥಾನ್, 100 ಮೀಟರ್ ಓಟದಲ್ಲಿ ಇಬ್ಬರೂ ಸಹೋದರರು ಭಾಗವಹಿಸಿದ್ದು, ಈ ಮೂಲಕ ತಮ್ಮನ್ನು ತಾವು ಆಲ್ ರೌಂಡರ್ ಎಂದು ಕರೆದುಕೊಂಡಿದ್ದಾರೆ.
ನಾವಿಬ್ಬರೂ ನಮ್ಮ ಹಳ್ಳಿಯಲ್ಲಿ ಒಟ್ಟಿಗೆ ಇರುತ್ತೇವೆ. ಚಿಕ್ಕವನಾಗಿದ್ದಾಗಿನಿಂದ ನಾನು ಕ್ರೀಡೆಗಳ ಬಗ್ಗೆ ಉತ್ಸುಕನಾಗಿದ್ದೆ. ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಶಾಲಾ ಸಹಪಾಠಿಗಳು ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ನನ್ನ ವೇಗವನ್ನು ಮುಟ್ಟಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ. ನನ್ನ ಅಣ್ಣ ನಿವೃತ್ತ ಸೇನಾ ಅಧಿಕಾರಿ. ನಾವಿಬ್ಬರೂ ಮೂರು ವರ್ಷಗಳ ಹಿಂದೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದವು. ಅಂದಿನಿಂದಲೂ ನಮ್ಮ ಕ್ರೀಡಾ ಚಟುವಟಿಕೆಗಳು ಮುಂದುವರೆಯುತ್ತಲೇ ಇದೆ ಎಂದು ಪಾಲೇಕಂಡ ಬೆಳಿಯಪ್ಪ (85) ಅವರು ಹೇಳಿದ್ದಾರೆ.
ಕ್ರೀಡಾ ಚಾಂಪಿಯನ್ಶಿಪ್ನಲ್ಲಿ ಹಿರಿಯ ನಾಗರಿಕನಾಗಿ ನಾನು ಮೊದಲ ಬಾರಿಗೆ ಭಾಗವಹಿಸಿದ್ದು ಬರೋಡದಲ್ಲಿ. ನ್ಯಾಷನಲ್ ಮಾಸ್ಟರ್ಸ್ ಗೇಮ್ ನಲ್ಲಿ ಮೂರನೇ ಸ್ಥಾನ ಗಳಿಸಿದ್ದೆ. ಅಂದಿನಿಂದ, ದೇಶದಾದ್ಯಂತ ಹಿರಿಯ ನಾಗರಿಕರಿಗಾಗಿ ನಡೆಯುವ ಎಲ್ಲಾ ಚಾಂಪಿಯನ್ಶಿಪ್ಗಳಲ್ಲಿ ನಾನು ಭಾಗವಹಿಸುತ್ತೇನೆಂದು ತಿಳಿಸಿದ್ದಾರೆ.
ಇದನ್ನೂ ಓದಿ: 62ನೇ ವಯಸ್ಸಿನಲ್ಲಿ ಪಿಹೆಚ್ ಡಿ ಪಡೆದ ಕೇರಳದ ಮ್ಯಾನೇಜ್ಮೆಂಟ್ ಶಿಕ್ಷಕ; ಘಟಿಕೋತ್ಸವದಲ್ಲಿ ತಂದೆ-ಮಗ ಒಟ್ಟಿಗೆ ಭಾಗಿ!
ಇಬ್ಬರೂ ಸಹೋದರರು ಕೊಡಗಿನಲ್ಲಿ ಹಿರಿಯ ನಾಗರಿಕರಿಗಾಗಿ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಅನ್ನು ಕೂಡ ಸ್ಥಾಪಿಸಿದ್ದು, ಹಿರಿಯ ನಾಗರಿಕರು ಅದರ ಸದಸ್ಯರಾಗಲು ವಿಧಾನಗಳನ್ನು ರೂಪಿಸುತ್ತಿದ್ದಾರೆ.
ಮುಂದಿನ ವರ್ಷ ಸಿಡ್ನಿ ಮತ್ತು ಜಪಾನ್ನಲ್ಲಿ ನಡೆಯಲಿರುವ ಅಥ್ಲೆಟಿಕ್ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಲು ಇಬ್ಬರೂ ಸಹೋದರರು ಎದುರು ನೋಡುತ್ತಿದ್ದು, ಅಂತರರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಇಬ್ಬರಿಗೆ ಕನಿಷ್ಠ ರೂ.2 ಲಕ್ಷದಿಂದ 3 ಲಕ್ಷ ಹಣಕಾಸಿನ ಅಗತ್ಯವಿದೆ. ಹೀಗಾಗಿ ಇಬ್ಬರೂ ಪ್ರಾಯೋಜಕತ್ವಕ್ಕಾಗಿ ಎದುರು ನೋಡುತ್ತಿದ್ದಾರೆ.