ಕೊಡಲಿ ಬೀಳುವಿಕೆಯಿಂದ ಮರಗಳ ರಕ್ಷಿಸಲು ಮ್ಯಾಪಿಂಗ್: ಮೈಸೂರಿನ ಪ್ರಾಜೆಕ್ಟ್ ವೃಕ್ಷ ಫೌಂಡೇಶನ್ ಕ್ರಮ!

ಮೈಸೂರಿನ 8 ಮಂದಿಯಿರುವ ಯುವಕರ ಗುಂಪೊಂದು ಕೊಡಲಿ ಬೀಳುವಿಕೆಯಿಂದ ಮರಗಳ ರಕ್ಷಿಸಲು ಕೈಗೊಂಡಿರುವ ಕ್ರಮ ಇದೀಗ ಎಲ್ಲರ ಗಮನ ಸೆಳೆದಿದೆ. 

Published: 05th June 2022 01:57 PM  |   Last Updated: 06th June 2022 03:16 PM   |  A+A-


ಮರಗಳ ರಕ್ಷಣೆಯಲ್ಲಿ ತೊಡಗಿರುವ ಮೈಸೂರು ಯುವಕರು.

The New Indian Express

ಬೆಂಗಳೂರು: ಮರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮರಗಳ ಉಳಿವಿಗೆ ಶ್ರಮಿಸುವುದು ನಮ್ಮ ಕರ್ತವ್ಯವೂ ಹೌದು. ಮರ ಗಿಡಗಳಿದ್ದರಷ್ಟೇ ನಾವು. ಹೀಗಾಗಿ, ಮರಗಳ ಮಹತ್ವ ಖಂಡಿತಾ ಎಲ್ಲರಿಗೂ ಅರಿತಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಈಗೀನ ಗಂಭೀರ ಚರ್ಚೆಯ ವಿಷಯ. ಹೀಗಾಗಿ, ಮರಗಳ ರಕ್ಷಣೆಗೆ ಎಲ್ಲಾ ಕಡೆ ಬಹಳಷ್ಟು ಪ್ರಯತ್ನಗಳು ನಡೆಯುತ್ತಿವೆ. ಅಂತೆಯೇ, ಮೈಸೂರಿನ 8 ಮಂದಿಯಿರುವ ಯುವಕರ ಗುಂಪೊಂದು ಕೊಡಲಿ ಬೀಳುವಿಕೆಯಿಂದ ಮರಗಳ ರಕ್ಷಿಸಲು ಕೈಗೊಂಡಿರುವ ಕ್ರಮ ಇದೀಗ ಎಲ್ಲರ ಗಮನ ಸೆಳೆದಿದೆ. 

ಸುಮಾರು ಎರಡು ವರ್ಷಗಳ ಹಿಂದೆ ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಗಾಗಿ ಶ್ರೀರಂಗಪಟ್ಟಣದ ಬಳಿ ಸುಮಾರು 200 ಮರಗಳನ್ನು ಕಡಿದು ಹಾಕಲಾಗಿತ್ತು. ಮರಗಳ ಹೊದಿಕೆಯ ಕ್ಷಿಪ್ರ ನಷ್ಟದಿಂದ ಈ ಯುವಕರು ಆತಂಕಕ್ಕೊಳಗಾಗಿದ್ದರು. ಈ ಬೆಳವಣಿಗೆ ಬಳಿಕ ಮರಗಳ ರಕ್ಷಣೆ ಮಾಡಲು ಯುವಕರ ತಂಡ ಮುಂದಾಗಿತ್ತು. ಇದರಂತೆ ಕೊಡಲಿ ಬೀಳುವಿಕೆಯಿಂದ ಮರಗಳ ರಕ್ಷಿಸಲು ವೃಕ್ಷಗಳ ಗಣತಿ ಹಾಗೂ ಪ್ರತಿಭಟನೆಗಳನ್ನು ಆರಂಭಿಸಿದ್ದಾರೆ. 

ಮರಗಳ ಕಡಿಯುವ ಮೂಲಕ ಪರಿಸರಕ್ಕಾಗಿರುವ ಹಾನಿಯನ್ನು ಅಧಿಕಾರಿಗಳಿಗೆ ಮನವಿ ಮಾಡಲು ಬೆಂಗಳೂರಿನ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ನಡೆಸುತ್ತಿರುವ ಕಾರ್ಯಗಳಿಂದ ಈ ಯುವಕರು ಸ್ಫೂರ್ತಿ ಪಡೆದುಕೊಂಡಿದ್ದು, ಮರಗಳ ರಕ್ಷಣೆಗೆ ಮುಂದಾಗಿದ್ದಾರೆ. 

ಇದನ್ನೂ ಓದಿ: ಪ್ರಕೃತಿಯೊಂದಿಗೆ ಸಾಮರಸ್ಯ: ಸಿದ್ಧಿ ಜನರ ನೆಮ್ಮದಿಯ ಬದುಕು!

ಬೆಂಗಳೂರು-ಮೈಸೂರು ಕಾರಿಡಾರ್‌ಗಾಗಿ ಮರಗಳನ್ನು ಕಡಿಯಲಾಗುತ್ತಿತ್ತು. ಇದು ಚಿಂತೆಯನ್ನುಂಟು ಮಾಡಿತ್ತು. ಹೀಗಾಗಿ ಮರಗಳನ್ನು ಉಳಿಸಲು ನಿರ್ಧರಿಸಿದೆವು. ಮೈಸೂರು ಹಳೆಯ ಪ್ರಾಚೀನ ಪರಿಸರವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದ ನಾವು ಮರದ ಗಣತಿಯನ್ನು ಪ್ರಾರಂಭಿಸಿದ್ದೇವೆ ”ಎಂದು ಯೋಜನೆಗೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿರುವ ಪರಿಸರ ಎಂಜಿನಿಯರ್ ತೇಜಸ್ವಿ ಬಿ ಅವರು ಹೇಳಿದ್ದಾರೆ.

ಆರಂಭಿಕ ಹಂತವಾಗಿ ಮೈಸೂರಿನ ಕುವೆಂಪು ನಗರದಲ್ಲಿ ಮರಗಳನ್ನು ಮ್ಯಾಪಿಂಗ್ ಮಾಡಲು ಪ್ರಾರಂಭಿಸಲಾಗಿದೆ. ಇದೂವರೆಗೆ ಕೊಡಲಿ ಬೀಳಲಿರುವ 3000 ಮರಗಳ ಎಣಿಕೆ ಮಾಡಲಾಗಿದೆ. ಪರಿಸರ ದಿನದಂದು ವಾರ್ಡ್ ಮಟ್ಟದಲ್ಲಿ ಮರಗಳ ಏಣಿಕೆ ಪುನರಾರಂಭಗೊಳ್ಳಲಿದೆ. ಮೈಸೂರಿನ ಎಲ್ಲಾ 46 ವಾರ್ಡ್ ಗಳಲ್ಲಿ ಮರಗಳ ಏಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಯುವಕರ ಈ ಯೋಜನೆಯು ಮೈಸೂರು ರಾಜವಂಶಸ್ಥರ ಗಮನವನ್ನೂ ಸೆಳೆದಿದೆ. ಜೂನ್ 5 ರಂದು ಕಾರ್ಯಕ್ರಮವೊಂದು ನಡೆಯಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯದುವೀರ್ ಒಡೆಯರ್ ಅವರು ವಹಿಸಲಿದ್ದಾರೆ. ಯೋಜನೆ ಪೂರ್ಣಗೊಳ್ಳುತ್ತಿದ್ದಂತೆಯೇ ಪ್ರತಿ ವಾರ್ಡ್ ಹಾಗೂ ಎಲ್ಲಾ ವಾರ್ಡ್ ಗಳಲ್ಲಿಯೂ ಎಷ್ಟು ಮರಗಳಿವೆ ಎಂಬ ಸ್ಪಷ್ಟ ಮಾಹಿತಿಗಳು ಲಭ್ಯವಾಗಲಿದೆ ಎಂದು ತೇಜಸ್ವಿ ಹೇಳಿದ್ದಾರೆ. 

ಇದನ್ನೂ ಓದಿ: ಜೇನುಗೂಡು ಆಶ್ರಯ ತಾಣವಾಗುತ್ತಿರುವ ನಗರದ 3ಡಿ ವಾಸ್ತುಶಿಲ್ಪದ ರಚನೆಯ ಕಟ್ಟಡಗಳು!

ಪ್ರಾಜೆಕ್ಟ್ ವೃಕ್ಷ ಫೌಂಡೇಶನ್‌ನ ಸದಸ್ಯ ವಿಜಯ್ ನಿಶಾಂತ್ ಮಾತನಾಡಿ, ಉಕ್ಕಿನ ಸೇತುವೆ ಯೋಜನೆ ವಿರುದ್ಧ ಬೆಂಗಳೂರು ಅತೀ ದೊಡ್ಡ ವಿರೋಧವನ್ನು ವ್ಯಕ್ತಪಡಿಸಿತ್ತು. ತೀವ್ರ ವಿರೋಧಕ್ಕೆ ಮಣಿದಿದ್ದ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಬಳಿಕ ನಮ್ಮ ಸ್ವಯಂಸೇವಕರು ಮರಗಳ ಗಣತಿಯನ್ನು ಆರಂಭಿಸಿದ್ದರು. ಪ್ರಾಜೆಕ್ಟ್ ವೃಕ್ಷ ಅಡಿಯಲ್ಲಿ ಬೆಂಗಳೂರಿನಲ್ಲಿ 40,000 ಮರಗಳನ್ನು ಎಣಿಕೆ ಮಾಡಲಾಗಿದೆ. ಆದರೆ, ಕೊರೋನಾ ಸಾಂಕ್ರಾಮಿಕ ರೋಗ ಎಣಿಕೆ ಕಾರ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಿದ್ದಾರೆ. 

ಬೇರೆಡೆಯಿಂದ ಬರುವ ನಾಗರೀಕರು ತಮ್ಮ ಪ್ರದೇಶದಲ್ಲಿನ ಮರಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿರುವುದು ಸಂತಸ ತಂದಿದೆ, ಸ್ವಯಂಸೇವಕರ ಕ್ರಿಯಾಶೀಲತೆಯಿಂದ ಮರಗಳನ್ನು ಕಡಿಯುವ ಮುನ್ನವೇ ಸಮಿತಿ ಮುಂದೆ ಪ್ರಸ್ತಾವನೆ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.


Stay up to date on all the latest ವಿಶೇಷ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp