ಬರಿಗಾಲಲ್ಲಿ ಗುಡ್ಡವನ್ನೇರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆ ರಕ್ಷಿಸಿದ ಕೇರಳ ಪೊಲೀಸ್ ಅಧಿಕಾರಿ!

ಪೊಲೀಸರು ಎಂದರೆ ಕೋಪಿಷ್ಠರು, ಮುಂಗೋಪಿಗಳು, ಮಾನವೀಯತೆ ಇಲ್ಲದ ಹೃದಯ ಹೀನರು ಎಂದು ಸಾಕಷ್ಟು ಜನರು ನಿಂದಿಸುವುದುಂಟು. ಆದರೆ, ಕೇರಳದ ಈ ಪೊಲೀಸ್ ಸಿಬ್ಬಂದಿ ಈ ನಿಂದನೆಗಳಿಗೆ ಹೊರತಾಗಿದ್ದಾರೆ.

Published: 10th June 2022 02:04 PM  |   Last Updated: 10th June 2022 02:12 PM   |  A+A-


Sub-inspector K M Santosh trying to dissuade the tribal girl from jumping off the edge of a hill in Kuthiralam Kudi near Adimali.

ಮಹಿಳೆಯ ಮನವೊಲಿಸಿ ರಕ್ಷಣೆ ಮಾಡಿದ ಕೇರಳ ಪೊಲೀಸ್ ಅಧಿಕಾರಿ.

The New Indian Express

ಇಡುಕ್ಕಿ: ಪೊಲೀಸರು ಎಂದರೆ ಕೋಪಿಷ್ಠರು, ಮುಂಗೋಪಿಗಳು, ಮಾನವೀಯತೆ ಇಲ್ಲದ ಹೃದಯ ಹೀನರು ಎಂದು ಸಾಕಷ್ಟು ಜನರು ನಿಂದಿಸುವುದುಂಟು. ಆದರೆ, ಕೇರಳದ ಈ ಪೊಲೀಸ್ ಸಿಬ್ಬಂದಿ ಈ ನಿಂದನೆಗಳಿಗೆ ಹೊರತಾಗಿದ್ದಾರೆ. ತಮ್ಮ ಸಮಯಪ್ರಜ್ಞೆಯಿಂದ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯ ಮನವೊಲಿಸಿ, ಆಕೆಯನ್ನು ರಕ್ಷಿಸಿದ್ದಾರೆ. 

ಕೇರಳದ ಇಡುಕ್ಕಿಯ ಆದಿಮಾಲಿ ಪೊಲೀಸ್​ ಠಾಣೆಯ ಸಬ್​ಇನ್ಸ್​ಪೆಕ್ಟರ್​ ಕೆ.ಎಂ.ಸಂತೋಷ್​ ಆತ್ಮಹತ್ಯೆಗೆ ಮುಂದಾಗಿದ್ದ 26 ವರ್ಷದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.

ಆದಿಮಾಲಿಯ ಕಡಿದಾದ ಪರ್ವತವನ್ನು ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಬಗ್ಗೆ ಮಾಹಿತಿ ತಿಳಿದು ಅಪಾಯಕಾರಿ ಗುಡ್ಡವನ್ನು ಎಸ್​ಐ ಸಂತೋಷ್​ ಅವರ ಸಿಬ್ಬಂದಿ ಜೊತೆ ಹತ್ತಿ ಮಹಿಳೆಯ ಬಳಿ ತೆರಳಿದ್ದಾರೆ.

ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಸಜ್ಜಾಗಿದ್ದ ಮಹಿಳೆಯನ್ನು ಎಸ್​ಐ ಸಂತೋಷ್​ ದೂರದಿಂದಲೇ ಸಂತೈಸಿದ್ದಾರೆ. ಸಾವಿಗೆ ಕಾರಣ ಏನು, ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ. ಹೆದರಬೇಡ ನಾನಿದ್ದೇನೆ. ಸಾವೊಂದೇ ಸಮಸ್ಯೆಗೆ ಪರಿಹಾರ ಅಲ್ಲ ಎಂದು ಮಹಿಳೆಗೆ ಧೈರ್ಯ ತುಂಬಿದ್ದಾರೆ. ಏನೇ ಸಮಸ್ಯೆ ಇದ್ದರೂ ನಾನು ಅದನ್ನು ಬಗೆಹರಿಸಿಕೊಡುತ್ತೇನೆ. ಕೆಟ್ಟ ನಿರ್ಧಾರ ಮಾಡಬೇಡ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.

ಪೊಲೀಸ್​ ಅಧಿಕಾರಿಯ ಮಾತಿನಿಂದ ಆತ್ಮಹತ್ಯೆ ನಿರ್ಧಾರವನ್ನು ಬದಲಿಸಿದ ಆ ಮಹಿಳೆ ಪೊಲೀಸರ ಜೊತೆ ವಾಪಸ್​ ಬಂದಿದ್ದಾಳೆ. ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನು ದೂರದಿಂದಲೇ ಕೂತು ತಮ್ಮ ಮಾತಿನಿಂದಲೇ ಮನಸ್ಸು ಬದಲಿಸುವಂತೆ ಮಾಡಿ ಸುರಕ್ಷಿತವಾಗಿ ಆಕೆಯನ್ನು ಕರೆತಂದ ಎಸ್​ಐ ಸಂತೋಷ್​ರಿಗೆ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮಹಿಳೆ ಜೊತೆ ಪೊಲೀಸ್​ ಅಧಿಕಾರಿ ಮಾತನಾಡುತ್ತಿರುವುದನ್ನು ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದಾರೆ. ಮಹಿಳೆ ಜೊತೆ ಮಾತನಾಡಿದ ರೀತಿ, ಆಕೆಯಲ್ಲಿ ಆತ್ಮವಿಶ್ವಾಸ ಮೂಡಿಸಿದ ಪರಿ ಮತ್ತು ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಿ ಜೀವವನ್ನು ಉಳಿಸಿದ ಎಸ್​ಐ ಸಂತೋಷ್​ ಉಳಿದ ಪೊಲೀಸರಿಗೆ ಮಾದರಿಯಾಗಿದ್ದಾರೆ.

ಸ್ಥಳಕ್ಕೆ ನಾನು ಹೋದಾಗ ಸಾಕಷ್ಟು ಜನರು ತುಂಬಿದ್ದರು, ಮಹಿಳೆಯ ಸ್ನೇಹಿತರು ಹಾಗೂ ಸಂಬಂಧಿಕರು ಆಕೆಯ ಮನವೊಲಿಸಲು ಯತ್ನಿಸುತ್ತಿದ್ದರು. ಈ ವೇಳೆ ಮಹಿಳೆ ಯಾರಾದರು ಹತ್ತಿರ ಬಂದರೆ ಬೆಟ್ಟದಿಂದ ಬಿದ್ದು ಸಾಯುವುದಾಗಿ ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಪಡೆಗಳನ್ನು ಸ್ಥಳಕ್ಕೆ ಬರುವಂತೆ ತಿಳಿಸಿದ್ದೆ. ಬಳಿಕ ನಿಧಾನವಾಗಿ ಬರಿಗಾಲಿನಲ್ಲೇ ಗುಡ್ಡವನ್ನು ಹತ್ತಿ ಮಹಿಳೆ ಬಳಿ ತೆರಳಿದ್ದೆ. ಮಹಿಳೆಯಿಂದ 5 ಅಡಿ ದೂರದಿಂದಲೇ ಇದ್ದು ಮಾತುಕತೆ ನಡೆಸಿದೆ. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಏನೇ ಸಮಸ್ಯೆಯಿದ್ದರೂ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದೆ. 

ಆರಂಭದಲ್ಲಿ ಆಕೆ ನನ್ನ ಮಾತನ್ನು ಕೇಳಲು ನಿರಾಕರಿಸಿದ್ದಳು. ಬಳಿಕ ನಿಧಾನಗತಿಯಲ್ಲಿ ಆಕೆಯ ಮನವೊಲಿಸಿದೆ. ವೈಯಕ್ತಿಕ ಸಮಸ್ಯೆಗಳಿಂದ ಜೀವ ಕಳೆದುಕೊಳ್ಳಲು ಯೋಚನೆ ಮಾಡಿದ್ದಾಗಿ ಕೌನ್ಸಿಲಿಂಗ್ ವೇಳೆ ಮಹಿಳೆ ಹೇಳಿದ್ದಾರೆ. ಇದೀಗ ಆ ನಿರ್ಧಾರದಿಂದ ಹಿಂದೆ ಸರಿದು, ಕುಟುಂಬಸ್ಥರೊಂದಿಗೆ ಇರುವುದಾಗಿ ತಿಳಿಸಿದ್ದಾಳೆಂದು ಸಂತೋಷ್ ಹೇಳಿದ್ದಾರೆ. ಅಲ್ಲದೆ, ತನಗೆ ಮೋಸ ಮಾಡಿದ ಜನರ ಮುಂದೆ ತಲೆಎತ್ತಿ ಬದುಕುವುದಾಗಿ ತಿಳಿಸಿದ್ದಾರೆಂದು ತಿಳಿಸಿದರು.


Stay up to date on all the latest ವಿಶೇಷ news
Poll
BS yediyurappa

ಬಿಜೆಪಿ ಸಂಸದೀಯ ಮಂಡಳಿಗೆ ಬಿ.ಎಸ್. ಯಡಿಯೂರಪ್ಪ ಸೇರ್ಪಡೆಯಿಂದ 2023 ರ ಕರ್ನಾಟಕ ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗುವುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp