ಉತ್ತಮ ಅಂಕಗಳೊಂದಿಗೆ 12ನೇ ತರಗತಿ ಪರೀಕ್ಷೆ ತೇರ್ಗಡೆ ಮಾಡಿದ ಹೈದರಾಬಾದ್‌ನ ಸಂಯೋಜಿತ ಅವಳಿ ಸಹೋದರಿಯರು!

ಕೆಲ ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಹೈದರಾಬಾದ್ ನ ಸಂಯೋಜಿತ ಅವಳಿ ಮಕ್ಕಳ ಬಗ್ಗೆ ಸುದ್ದಿಯಾಗಿತ್ತು. ಇದೀಗ ಅವರು ಎಲ್ಲ ಅಡೆತಡೆಗಳನ್ನು ಮೀರಿ ದ್ವಿತೀಯ ಪಿಯುಸಿ 12ನೇ ತರಗತಿ ಪರೀಕ್ಷೆ ತೇರ್ಗಡೆ ಮಾಡಿದ್ದಾರೆ.
ಹೈದರಾಬಾದ್ ನ ಸಂಯೋಜಿತ ಅವಳಿ ಸೋದರಿಯರು
ಹೈದರಾಬಾದ್ ನ ಸಂಯೋಜಿತ ಅವಳಿ ಸೋದರಿಯರು

ಹೈದರಾಬಾದ್: ಕೆಲ ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ಹೈದರಾಬಾದ್ ನ ಸಂಯೋಜಿತ ಅವಳಿ ಮಕ್ಕಳ ಬಗ್ಗೆ ಸುದ್ದಿಯಾಗಿತ್ತು. ಇದೀಗ ಅವರು ಎಲ್ಲ ಅಡೆತಡೆಗಳನ್ನು ಮೀರಿ ದ್ವಿತೀಯ ಪಿಯುಸಿ 12ನೇ ತರಗತಿ ಪರೀಕ್ಷೆ ತೇರ್ಗಡೆ ಮಾಡಿದ್ದಾರೆ.

ಹೈದರಾಬಾದ್ ನ ಯೂಸುಫ್‌ಗುಡದ ವಾಣಿ ಮತ್ತು ವೀಣಾ ಎಂಬ ಸಂಯೋಜಿತ ಅವಳಿ ಮಕ್ಕಳು ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅರ್ಥಶಾಸ್ತ್ರ, ವಾಣಿಜ್ಯ ಮತ್ತು ರಾಜ್ಯಶಾಸ್ತ್ರವನ್ನು ಮುಖ್ಯ ವಿಷಯಗಳನ್ನಾಗಿ ತೆಗೆದುಕೊಂಡು ಪ್ರತ್ಯೇಕವಾಗಿ ಪರೀಕ್ಷೆ ಬರೆದಿದ್ದ ಸಹೋದರಿಯರಿಬ್ಬರೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿ 712 ಅಂಕ ಪಡೆದರೆ, ವೀಣಾ 707 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಇಬ್ಬರೂ ಇಂಗ್ಲಿಷ್ ಮತ್ತು ತೆಲುಗು ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಇಬ್ಬರು ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಮಾತನಾಡಿದ ಬುಡಕಟ್ಟು ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್, ಅವರ ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ. ವಾಣಿ ಮತ್ತು ವೀಣಾ ಅವರಿಗೆ ಯಾವಾಗಲೂ ರಾಜ್ಯ ಸರ್ಕಾರದ ಬೆಂಬಲವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com