
ಸಾಂದರ್ಭಿಕ ಚಿತ್ರ
ನಾಗ್ಪುರ: ರಿಕ್ಷಾದಲ್ಲಿ ಪ್ರಯಾಣಿಸಿದ್ದ ಅಂಗವಿಕಲ ವ್ಯಕ್ತಿಯೊಬ್ಬರು 1.5 ಲಕ್ಷ ರೂ. ಇದ್ದ ಬ್ಯಾಗನ್ನು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು. ಅದೇ ರಿಕ್ಷಾಗೆ ಮತ್ತೊಬ್ಬರು ಪ್ರಯಾಣಿಕರು ಹತ್ತಿದ್ದರು.
ಇದನ್ನೂ ಓದಿ: ಉಕ್ರೇನ್ನಲ್ಲಿರುವ ಈ ಭಾರತೀಯ ರೆಸ್ಟೋರೆಂಟ್ ನಿರಾಶ್ರಿತರಿಗೆ ಆಶ್ರಯ, ಉಚಿತ ಆಹಾರ ನೀಡುತ್ತಿದೆ
ಈ ಸಂದರ್ಭದಲ್ಲಿ ರಿಕ್ಷಾ ಡ್ರೈವರ್ ಸುಶೀಲ್ ಪುಂಡಲೀಕ್ ಅವರಿಗೆ ತಮ್ಮ ರಿಕ್ಷಾದಲ್ಲಿ 1.5 ಲಕ್ಷ ಇರುವ ಸಂಗತಿ ಗೊತ್ತಾಗಿತ್ತು. ಕೂಡಲೆ ಈ ಹಣ ಅಂಗವಿಕಲ ಪ್ರಯಾಣಿಕನದು ಎನ್ನುವುದು ಹೊಳೆಯಿತು.
ಇದನ್ನೂ ಓದಿ: ಕಾಶಿ ವಿಶ್ವನಾಥನಿಗೆ 60 ಕೆ.ಜಿ ಚಿನ್ನ ದಾನ ನೀಡಿದ ದಕ್ಷಿಣ ಭಾರತೀಯ
ಆದರೆ ಆ ಪ್ರಯಾಣಿಕನ ವಿಳಾಸ ತಿಳಿದಿರಲಿಲ್ಲ. ಹೀಗಾಗಿ ಆ ಹಣವನ್ನು ಸುಶೀಲ್ ಪುಂಡಲೀಕ್ ಸಮೀಪದ ಪೊಲೀಸ್ ಠಾಣೆಗೆ ತಲುಪಿಸಿದ್ದರು. ಪೊಲೀಸರು ಆ ಹಣದ ವಾರಸುದಾರರನ್ನು ಪತ್ತೆಹಚ್ಚಿ ಹಣವನ್ನು ಮರಳಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ಸೌರಚಾಲಿತ ಹಾಲು ಕರೆಯುವ ಯಂತ್ರಗಳ ಬಳಕೆಯಿಂದ ರೈತರ ಲಾಭ ಹೆಚ್ಚಳ