
ಗ್ರಾಮಸ್ಥರೇ ನಿರ್ಮಿಸಿದ ಸೇತುವೆ
ರಾಂಚಿ: ಜಾರ್ಖಂಡ್ ನ ಗ್ರಾಮವೊಂದರ ಮಕ್ಕಳು ಶಾಲೆ ಕಾಲೇಜುಗಳಿಗೆ ತೆರಳಲು ತುಂಬಾ ತೊಡಕಾಗುತ್ತಿತ್ತು. ಅದಕ್ಕೆ ಕಾರಣ ವಿದ್ಯಾಸಂಸ್ಥೆಗಳ ಕೊರತೆಯಂತೂ ಅಲ್ಲ. ಶಾಲೆ ಕಾಲೇಜುಗಳಿಗೆ ತೆರಳಲು ನದಿ ದಾಟಿ ಹೋಗಬೇಕಿತ್ತು.
ಇದನ್ನೂ ಓದಿ: ಅಂಗವಿಕಲ ಪ್ರಯಾಣಿಕ ಬಿಟ್ಟುಹೋಗಿದ್ದ 1.5 ಲಕ್ಷ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಡ್ರೈವರ್
ಗ್ರಾಮದಲ್ಲಿ ಸೇತುವೆ ಇಲ್ಲದ ಕಾರಣ ಮಕ್ಕಳು ಓದಿನಿಂದ ವಂಚಿತರಾಗುತ್ತಿದ್ದರು. ಇದೀಗ ಗ್ರಾಮಸ್ಥರೇ ಅದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಈ ಭಾರತೀಯ ರೆಸ್ಟೋರೆಂಟ್ ನಿರಾಶ್ರಿತರಿಗೆ ಆಶ್ರಯ, ಉಚಿತ ಆಹಾರ ನೀಡುತ್ತಿದೆ
ಕ್ರೌಡ್ ಫಂಡಿಂಗ್ ಮೂಲಕ ಬಿದಿರಿನ ಸೇತುವೆಯನ್ನು ನಿರ್ಮಿಸಿ ಮಕ್ಕಳ ಬದುಕಿಗೆ ದಾರಿ ಮಾಡಿದ್ದಾರೆ. ಕಸ್ತಾ ಎನ್ನುವ ಗ್ರಾಮದ ಜನರು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಕಾಶಿ ವಿಶ್ವನಾಥನಿಗೆ 60 ಕೆ.ಜಿ ಚಿನ್ನ ದಾನ ನೀಡಿದ ದಕ್ಷಿಣ ಭಾರತೀಯ
ಸರ್ಕಾರಕ್ಕೆ ಸೇತುವೆ ಕಟ್ಟಿಸಿಕೊಡುವಂತೆ ಮಾಡಿದ ಮನವಿಯೆಲ್ಲವೂ ವ್ಯರ್ಥವಾಗಿತ್ತು. ಹೀಗಾಗಿ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಅದರಂತೆ ಮನೆ ಮನೆಯಿಂದ ಹಣ ಸಂಗ್ರಹಿಸಿ ಬಿದಿರಿನ ಸೇತುವೆ ನಿರ್ಮಿಸಿದ್ದಾರೆ.
ಇದನ್ನೂ ಓದಿ: ಜಾಗಿಂಗ್ ಮಾಡಲು ಪ್ರಶಸ್ತವಾದ ನಗರಗಳ ಪೈಕಿ ಬೆಂಗಳೂರಿಗೆ ಅಗ್ರ ಸ್ಥಾನ