ತರಳಬಾಳು ಶಾಲೆಯ ಹೆಣ್ಣುಮಕ್ಕಳ ಚಮತ್ಕಾರ: 'ಮಲ್ಲಿ ಹಗ್ಗ'ದ ಮೂಲಕ ಯೋಗಾಸನ; ಇದು 'ಮಲ್ಲಕಂಬ'ದ ಒಂದು ಭಾಗ
ಇದು ಭಾರತೀಯ ಸಾಂಪ್ರದಾಯಿಕ ಕ್ರೀಡೆ ಹಗ್ಗ ಕುಶಲಕಲೆಯ ಮತ್ತೊಂದು ಆವೃತ್ತಿಯಾಗಿದೆ: ಹಗ್ಗದಲ್ಲಿ ಗಾಳಿಯ ಮಧ್ಯೆ ಆಸನ ಮತ್ತು ಚಮತ್ಕಾರಗಳನ್ನು ತೋರಿಸುತ್ತಿದ್ದರು. ಮಲ್ಲಿ ಹಗ್ಗ ಎಂದರೆ ಮಹಿಳೆಯರು ಹಗ್ಗದಲ್ಲಿ ಆಸನ, ಯೋಗಗಳನ್ನು ಪ್ರದರ್ಶಿಸುವುದಾಗಿದೆ.
Published: 20th March 2022 03:16 PM | Last Updated: 21st March 2022 03:11 PM | A+A A-

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಶಾಲೆಯ ವಿದ್ಯಾರ್ಥಿನಿಯರು ಹಲವು ರಾಷ್ಟ್ರೀಯ ವೇದಿಕೆಗಳಲ್ಲಿ ಮಲ್ಲಿ ಹಗ್ಗದ ಪ್ರದರ್ಶನ ನೀಡಿದ್ದಾರೆ
ಚಿತ್ರದುರ್ಗ: ಇದು ಭಾರತೀಯ ಸಾಂಪ್ರದಾಯಿಕ ಕ್ರೀಡೆ ಹಗ್ಗ ಕುಶಲಕಲೆಯ ಮತ್ತೊಂದು ಆವೃತ್ತಿಯಾಗಿದೆ: ಹಗ್ಗದಲ್ಲಿ ಗಾಳಿಯ ಮಧ್ಯೆ ಆಸನ ಮತ್ತು ಚಮತ್ಕಾರಗಳನ್ನು ತೋರಿಸುತ್ತಿದ್ದರು. ಮಲ್ಲಿ ಹಗ್ಗ ಎಂದರೆ ಮಹಿಳೆಯರು ಹಗ್ಗದಲ್ಲಿ ಆಸನ, ಯೋಗಗಳನ್ನು ಪ್ರದರ್ಶಿಸುವುದಾಗಿದೆ.
ಹಗ್ಗ ಜಿಮ್ನಾಸ್ಟಿಕ್ ಮತ್ತು ಹಗ್ಗ ಬ್ಯಾಲೆಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿದ್ದರೂ ಚಿತ್ರದುರ್ಗದ ಸಿರಿಗೆರೆಯಲ್ಲಿರುವ ತರಳಬಾಳು ಶಾಲೆಯ ಮಕ್ಕಳಿಗೆ ಹೊಸ ಕ್ರೀಡೆ. ಇಲ್ಲಿನ ಮಕ್ಕಳು ಕಳೆದ 5 ವರ್ಷಗಳಿಂದ ಈ ಕ್ರೀಡೆಯನ್ನು ಕಲಿಯುತ್ತಿದ್ದು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಹಲವು ವೇದಿಕೆಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ತೋರಿಸಿದ್ದಾರೆ.
ಕಂಬದ ಮೇಲೆ ಆಡುವ ಕ್ರೀಡೆ ಮಲ್ಲಕಂಬದ ಮತ್ತೊಂದು ಭಾಗ ಮಲ್ಲಿ ಹಗ್ಗ. ಇದು ಹಗ್ಗವನ್ನು ಬಳಸಿ, 10 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಜೋಡಿಸಲಾದ ಅಡ್ಡಪಟ್ಟಿಯ ಮೇಲೆ ಚಮತ್ಕಾರಿಕ ಮತ್ತು ಯೋಗಾಸನಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ. ಹುಡುಗಿಯರು ಕ್ರಾಸ್ಬಾರ್ಗೆ ವೇಗವಾಗಿ ಹತ್ತಿ ಪದ್ಮಾಸನ, ಪರ್ವತಾಸನ, ಶವಾಸನ, ಬಜರಂಗಿ ಪಾಕಡ್ ಮತ್ತು ನಟರಾಜ ಆಸನಗಳಲ್ಲಿ ತಮ್ಮ ಪರಿಣತಿಯನ್ನು ಪ್ರದರ್ಶಿಸುವುದನ್ನು ನೋಡಿ ಪ್ರೇಕ್ಷಕರು ಸ್ತಬ್ಧರಾಗುತ್ತಾರೆ. ಇಂತಹ ತಂತ್ರಗಳಿಗೆ ಕೌಶಲ್ಯ, ಸಮತೋಲನ, ಸಮರ್ಪಣೆ, ಆತ್ಮವಿಶ್ವಾಸ, ದೇಹ ಫಿಟ್ ಆಗಿರಬೇಕು, ಜಾಗೃತ ಮನಸ್ಸು ಬೇಕು.
ಮಲ್ಲಿ ಹಗ್ಗ ಸ್ಪರ್ಧೆಯ ಸಮಯದಲ್ಲಿ, 90 ಸೆಕೆಂಡುಗಳಲ್ಲಿ 10 ವಿವಿಧ ವ್ಯಾಯಾಮಗಳು ಅಥವಾ ಆಸನಗಳನ್ನು ಮೊದಲ ಸುತ್ತಿನಲ್ಲಿ ಮಾಡಬೇಕು. ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳು ತಮ್ಮ ಆಯ್ಕೆಯ ವ್ಯಾಯಾಮಗಳನ್ನು ಆರಿಸಿಕೊಳ್ಳಬಹುದು. ಅವರ ಕಾರ್ಯಕ್ಷಮತೆಯನ್ನು ಮೂರರಿಂದ ಐದು ತೀರ್ಪುಗಾರರ ತಂಡ ನಿರ್ಣಯಿಸುತ್ತದೆ.
ಇಲ್ಲಿ 2017ರಿಂದ 3ರಿಂದ 21 ವರ್ಷದವರೆಗಿನ ಹೆಣ್ಣುಮಕ್ಕಳಿಗೆ ತರಬೇತಿ ನೀಡುತ್ತಿರುವ ಮಂಜುನಾಥ್ ಬಿ ಕೊಲಚಿ, ಈ ಕ್ರೀಡೆಯು ಆಧುನಿಕ ಜಿಮ್ನಾಸ್ಟಿಕ್ಸ್ನ ಎಲ್ಲಾ ಗುಣಗಳನ್ನು ಹೊಂದಿದೆ. ತರಬೇತಿ ಪಡೆದ ಹೆಣ್ಣುಮಕ್ಕಳು ಜಿಮ್ನಾಸ್ಟಿಕ್ಸ್ನಲ್ಲಿ ಮುಂದುವರಿದರೆ, ಅವರು ಅಂತರಾಷ್ಟ್ರೀಯ ವೇದಿಕೆಯಲ್ಲಿ ದೇಶಕ್ಕಾಗಿ ಪದಕಗಳನ್ನು ಗೆಲ್ಲುವ ದೊಡ್ಡ ಸಾಮರ್ಥ್ಯ ಹೊಂದಿದ್ದಾರೆ ಎನ್ನುತ್ತಾರೆ, ಇಲ್ಲಿಯವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಕ್ರೀಡೆಯ ತರಬೇತಿ ಪಡೆದಿದ್ದಾರೆ.
ಈ ಕ್ರೀಡೆಗೆ ಹೆಣ್ಣುಮಕ್ಕಳು ಇಷ್ಟೊಂದು ಶ್ರಮದಿಂದ ಸಾಧನೆ ಮಾಡುತ್ತಿರುವುದು ನೋಡಿ ಮಲ್ಲಿ ಹಗ್ಗ ಎಂದು ತರಳಬಾಳು ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೆಸರಿಟ್ಟರು. ಅಲ್ಲಿಂದ ಹಗ್ಗದಲ್ಲಿ ಈ ರೀತಿ ಜಿಮ್ನಾಸ್ಟಿಕ್, ಯೋಗ, ಆಸನ ಮಾಡುವ ಹೆಣ್ಣು ಮಕ್ಕಳ ಕ್ರೀಡೆಗೆ ಮಲ್ಲಿ ಹಗ್ಗ ಎಂದು ಹೆಸರು ಬಂತು ಎನ್ನುವ ಮಂಜುನಾಥ್ ಅವರು ಈ ಕ್ರೀಡೆಯನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವ, ಕ್ರೀಡಾಪಟುಗಳನ್ನು ಇನ್ನಷ್ಟು ಪ್ರೋತ್ಸಾಹಿಸುವ ಅಗತ್ಯವಿದೆ ಎನ್ನುತ್ತಾರೆ.
ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ಪ್ರೋತ್ಸಾಹ ಸಿಕ್ಕಿದರೆ ರಾಷ್ಟ್ರಮಟ್ಟಕ್ಕೆ ಇದನ್ನು ಜನಪ್ರಿಯ ಮಾಡಬಹುದು ಎಂದು ಮಂಜುನಾಥ್ ಕೊಲಚಿ ಹೇಳುತ್ತಾರೆ.
ಶತಮಾನಗಳ ಹಳೆಯ ಕ್ರೀಡೆ
ಸೋಮೇಶ್ವರ ಚಾಲುಕ್ಯ ಬರೆದ 1135 AD ಸಂಸ್ಕೃತ ಶಾಸ್ತ್ರೀಯ ಮನಸೊಲ್ಲಸದಲ್ಲಿ ಮಲ್ಲಕಂಬ ಕ್ರೀಡೆ ಆರಂಭಿಕ ದಾಖಲಿತ ಉಲ್ಲೇಖವು ಕಂಡುಬರುತ್ತದೆ. ಮೂಲತಃ, ಮಲ್ಲಕಂಬವನ್ನು ಕುಸ್ತಿಪಟುಗಳಿಗೆ ಪೋಷಕ ವ್ಯಾಯಾಮವಾಗಿ ಬಳಸಲಾಗುತ್ತಿತ್ತು. ಪೇಶ್ವೆಗಳ ಆಳ್ವಿಕೆಯಲ್ಲಿ 18 ನೇ ಶತಮಾನದಲ್ಲಿ 2ನೇ ಪೇಶ್ವೆ ಬಾಜಿ ರಾವ್ ರ ದೇಹರ್ದಾಢ್ಯ ಬೋಧಕರಾಗಿದ್ದ ಬಾಳಂಭಟ್ಟ ದಾದಾ ದಿಯೋಧರ್ ಅವರು ಹೇಳಿಕೊಡುವವರೆಗೂ ಕ್ರೀಡೆಯು ಅಷ್ಟೊಂದು ಜನಪ್ರಿಯವಾಗಿರಲಿಲ್ಲ.
ಹೈದರಾಬಾದ್ನ ಇಬ್ಬರು ಕುಸ್ತಿಪಟುಗಳಿಂದ ಸವಾಲು ಪಡೆದ ದಿಯೋಧರ್ ಯೋಗ ಮತ್ತು ಕುಸ್ತಿಯನ್ನು ಅಭ್ಯಾಸ ಮಾಡಲು ಸಪ್ತಗಿರಿ (ನಾಸಿಕ್ ಬಳಿ) ಅರಣ್ಯಕ್ಕೆ ಹೋದರು. ಅಲ್ಲಿ ದೇವಸ್ಥಾನದ ಆವರಣದಲ್ಲಿ ಮಂಗವೊಂದು ದೀಪಸ್ತಂಭದ ಮೇಲೆ ತೂಗಾಡುತ್ತಿರುವುದನ್ನು ಗಮನಿಸಿದರು. ಅದರಿಂದ ಪ್ರೇರಿತರಾಗಿ ಕ್ರೀಡೆಯನ್ನು ಅಭ್ಯಾಸ ಮಾಡಿ ಕುಸ್ತಿಪಟುಗಳನ್ನು ಸೋಲಿಸಿ, ಇಂದು ಪ್ರದರ್ಶನ ಕಲೆಯಾಗಿ, ತರಬೇತಿಯ ವಿಧಾನವಾಗಿ ಮಾರ್ಪಟ್ಟಿದೆ.
ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಮಲ್ಲಕಂಬ ಹಗ್ಗದ ತಂತ್ರಗಳಲ್ಲಿ ಪರಿಣಿತರಾಗಿದ್ದರು. ತನ್ನ ಬಾಲ್ಯದ ಗೆಳೆಯರಾದ ನಾನಾ ಸಾಹಿಬ್ ಮತ್ತು ತಾತ್ಯಾ ಟೋಪೆ ಅವರಿಂದರಿಂದ ಕಲಿತಿದ್ದರು.
ಕೃಷ್ಣದೇವರಾಯ ಮತ್ತು ಛತ್ರಪತಿ ಶಿವಾಜಿ ಕೂಡ ಈ ಕ್ರೀಡೆಯನ್ನು ಕಲಿತಿದ್ದರು. ರಾಣಿಯರು ಮತ್ತು ರಾಜಮನೆತನದ ಸದಸ್ಯರು ತಮ್ಮ ಸುರಕ್ಷತೆಗಾಗಿ ಮಲ್ಲಕಂಬ ಆಡುತ್ತಿದ್ದರು. ಬಹಳ ನಂತರ, ಪ್ರತಿಯೊಂದು ಸಾಂಪ್ರದಾಯಿಕ ಜಿಮ್ ಅಥವಾ 'ಗರಡಿ ಮನೆ' ಯಲ್ಲಿ ಮಲ್ಲಕಂಬ ನಿರ್ಮಿಸಲಾಗುತ್ತಿತ್ತು.