ಬೆಂಗಳೂರು: ಕಾರ್ಮಿಕರ ದಿನದಂದು ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಿದ ಪೊಲೀಸರು!
31 ವರ್ಷದ ಪೊಲೀಸ್ ಸಬ್ ಇನ್ಸ್ಪೆಕ್ಟರ್, ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳ ತಂಡದೊಂದಿಗೆ ಸೇರಿ ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ಕಾರ್ಮಿಕ ದಿನಾಚರಣೆ ಆಚರಿಸಿದರು.
Published: 04th May 2022 01:43 PM | Last Updated: 04th May 2022 02:15 PM | A+A A-

ಶೌಚಾಲಯ ಸ್ವಚ್ಛಗೊಳಿಸುತ್ತಿರುವ ಪೊಲೀಸರು
ಬೆಂಗಳೂರು: 31 ವರ್ಷದ ಪೊಲೀಸ್ ಸಬ್ ಇನ್ಸ್ಪೆಕ್ಟರ್, ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳ ತಂಡದೊಂದಿಗೆ ಸೇರಿ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು.
ಬಳ್ಳಾರಿಗೆ ತೆರಳಲು ಬಸ್ ಗಾಗಿ ಕಾಯುತ್ತಿದ್ದ ವೇಳೆ ತಮ್ಮ ತಾಯಿ ಶೌಚಾಲಯಕ್ಕಾಗಿ ಪರದಾಡಿದ್ದನ್ನು ನೋಡಿದ ಪೊಲೀಸ್ ಇನ್ಸ್ ಪೆಕ್ಟರ್ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವಂತೆ ಒತ್ತಾಯಿಸಿ ಆನ್ ಲೈನ್ ಅಭಿಯಾನ ಕೂಡ ಆರಂಭಿಸಿದ್ದಾರೆ.
ವಲಸೆ ಕಾರ್ಮಿಕರ ಕುಟುಂಬದವರಾದ ಶಾಂತಪ್ಪ ಜಡೆಮ್ಮನವರ್ ಯಶವಂತಪುರದ ತಾಜ್ ವಿವಂತಾ ಬಳಿ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿ ಆನ್ಲೈನ್ ಅಭಿಯಾನವನ್ನು ಸಹ ಪ್ರಾರಂಭಿಸಿದ್ದಾರೆ. ಈ ಪೊಲೀಸ್ ತಂಡವು ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರನ್ನು ಸ್ಮರಿಸಿತು.
ಬಸವೇಶ್ವರನಗರ, ಅನ್ನಪೂರ್ಣೇಶ್ವರಿನಗರ ಹಾಗೂ ಇತರ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಐವರು ಪೊಲೀಸ್ ಪೇದೆಗಳೊಂದಿಗೆ ವಿಧಾನಸೌಧ ಪೊಲೀಸ್ ಠಾಣೆಯ ಎಸ್ಐ ಅವರು ಶೌಚಾಲಯಗಳನ್ನು ಸ್ವಚ್ಛಗೊಳಿಸಿದರು.
ಸೋಮವಾರ, ತಂಡವು ಅನ್ನಪೂರ್ಣೇಶ್ವರಿನಗರದ ಸುಮನಹಳ್ಳಿ ಮತ್ತು ಕೆಂಗುಂಟೆಯಲ್ಲಿ ಎರಡು ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ್ದು, ಎಸ್ಐ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ನಾನು ಆನ್ಲೈನ್ ಅಭಿಯಾನವನ್ನು ಪ್ರಾರಂಭಿಸಿದ ನಂತರ, ಈ ಐವರು ಪೊಲೀಸ್ ಕಾನ್ಸ್ಟೆಬಲ್ಗಳು ತಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕ ಶೌಚಾಲಯ ಬೇಡಿಕೆ ಮುಂದಿಟ್ಟು ಟ್ವಿಟರ್ ಅಭಿಯಾನ ಆರಂಭಿಸಿದ ಎಸ್ ಐ!
ನಾನು ವಲಸೆ ಕಾರ್ಮಿಕರ ಕುಟುಂಬದವನಾದ್ದರಿಂದ, ಸಾರ್ವಜನಿಕ ಶೌಚಾಲಯಗಳನ್ನು ಹುಡುಕುವಲ್ಲಿನ ತೊಂದರೆಗಳನ್ನು ನನಗೆ ವೈಯಕ್ತಿಕವಾಗಿ ತಿಳಿದಿದೆ. ಸಾರ್ವಜನಿಕ ಶೌಚಾಲಯಗಳಿದ್ದರೂ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ.
ಆದ್ದರಿಂದ ಮೊದಲಿಗೆ, ಹೆಚ್ಚಿನ ಸಂಖ್ಯೆಯ ಜನರು ಬಳಸುವ ಎರಡು ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ನಾನು ಯೋಚಿಸಿದೆ, ”ಎಂದು ಜಡೆಮ್ಮನವರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಪೊಲೀಸರು ಫಿನಾಯಿಲ್ ಲ್ ಬಾಟಲಿಗಳನ್ನು ತೆಗೆದುಕೊಂಡು ಹೋಗಿ ಅಲ್ಲಿರುವ ಬ್ರಷ್ ಗಳ ಮೂಲಕ ಸ್ವಚ್ಛಗೊಳಿಸಿದರು. ಪ್ರತಿ ತಿಂಗಳಲ್ಲಿ ಒಮ್ಮೆ ಶೌಚಾಲಯ ಸ್ವಚ್ಛಗೊಳಿಸಲು ಜಡೆಮ್ಮನವರ್ ನಿರ್ಧರಿಸಿದ್ದಾರೆ.
ತೋಟಗಾರಿಕಾ ಸಚಿವರೂ ಆಗಿರುವ ಸ್ಥಳೀಯ ಶಾಸಕ ಆರ್.ಮುನಿರತ್ನ ಹಾಗೂ ಸಂಬಂಧಿಸಿದ ಇತರ ಪೌರಾಯುಕ್ತರನ್ನು ಟ್ಯಾಗ್ ಮಾಡುವ ಮೂಲಕ ನಿರಂತರವಾಗಿ ಶೌಚಾಲಯಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ.
ಅವರ ನಿರಂತರ ಪ್ರಯತ್ನದ ಹೊರತಾಗಿಯೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಂತಿಮವಾಗಿ, ಅವರು ಸ್ವಂತವಾಗಿ ಪೋರ್ಟಬಲ್ ಶೌಚಾಲಯವನ್ನು ಸ್ಥಾಪಿಸಲು ನಿರ್ಧರಿಸಿದರು. ಆದರೆ ಸಮಾಜದ ವಿವಿಧ ವರ್ಗಗಳ ಒತ್ತಡದಿಂದಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ತಿಳಿಸಿದ್ದಾರೆ.
ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್ನಲ್ಲಿ ತನಗೆ ಶೌಚಾಲಯ ಬೇಕು ಎಂದು ಹೇಳಿದ್ದಾರೆ, ಅಲ್ಲಿ ತನ್ನ ವಯಸ್ಸಾದ ತಾಯಿ ಶೌಚಾಲಯಕ್ಕೆ ಹೋಗಬೇಕೆಂದು ಬಯಸಿದ್ದರು, ಆದರೆ ಅದು ಸಿಗಲಿಲ್ಲ. ಬೇರೆ ಯಾವ ಮಹಿಳೆಯೂ ಈ ರೀತಿಯ ಸಮಸ್ಯೆ ಬರಬಾರದು ಎಂದು ಹೇಳಿದ್ದಾರೆ. ಶಾಂತಪ್ಪ ಜಡೆಮ್ಮನವರ್ ಬಳ್ಳಾರಿಯ ಗ್ರಾಮದಿಂದ ಬಂದವರು. ವಿಜ್ಞಾನ ಪದವೀಧರರಾಗಿರುವ ಅವರು ಈ ಹಿಂದೆ ಅಶೋಕನಗರ ಮತ್ತು ಎಪಿ ನಗರ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡಿದ್ದಾರೆ.