ಥೈಲ್ಯಾಂಡ್: ಈ ಕೆಫೆಯಲ್ಲಿ ಎಲ್ಲವೂ ಕಾಂಡೋಮ್ ಗಳಿಂದಲೇ ಮಾಡಿರೋದು! ವಿಲಕ್ಷಣಕ್ಕೆ ಕಾರಣ ಏನು ಗೊತ್ತಾ?
ಬ್ಯಾಂಕಾಂಗ್ ನಲ್ಲಿನ ಸ್ಥಳವೊಂದು ಬ್ಯಾಚುಲರ್ ಗಳ ಪಾಲಿನ ಸ್ವರ್ಗ ಎಂದೇ ಹೆಸರಾಗಿದೆ. ಪ್ರವಾಸಿಗರು ವಿಶಿಷ್ಟವಾದ ಮತ್ತು ಸ್ಮರಣೀಯ ಅನುಭವಗಳನ್ನು ಹೊಂದಬಹುದಾದ ಬೋಲ್ಡ್ ಮತ್ತು ಮೋಜಿನ ತಾಣವಾಗಿದೆ.
Published: 05th May 2022 05:27 PM | Last Updated: 05th May 2022 07:06 PM | A+A A-

ಕಾಫಿ ಕಾಂಡೋಮ್
ಥೈಲ್ಯಾಂಡ್ : ಬ್ಯಾಂಕಾಂಗ್ ನಲ್ಲಿನ ಸ್ಥಳವೊಂದು ಬ್ಯಾಚುಲರ್ ಗಳ ಪಾಲಿನ ಸ್ವರ್ಗ ಎಂದೇ ಹೆಸರಾಗಿದೆ. ಪ್ರವಾಸಿಗರು ವಿಶಿಷ್ಟವಾದ ಮತ್ತು ಸ್ಮರಣೀಯ ಅನುಭವಗಳನ್ನು ಹೊಂದಬಹುದಾದ ಬೋಲ್ಡ್ ಮತ್ತು ಮೋಜಿನ ತಾಣವಾಗಿದೆ.
ಥೈಲ್ಯಾಂಡ್ನಲ್ಲಿರುವ ಈ ಕೆಫೆ, ವಿಶ್ವದ ಬಹುದೊಡ್ಡ ಸಮಸ್ಯೆಯಾದ ಜನಸಂಖ್ಯೆ ಬೆಳವಣಿಗೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ವಿಲಕ್ಷಣವಾದ ವಿಧಾನವನ್ನು ತೆಗೆದುಕೊಂಡಿದೆ. ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಮೊಹ್ನಿಶ್ ದೌಲ್ತಾನಿ ಇತ್ತೀಚಿಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಫೋಸ್ಟ್ ಮಾಡಿದ್ದು, ಈ ಸ್ಥಳದ ಬಗ್ಗೆ ವಿವರಣೆ ನೀಡಿದ್ದಾರೆ.
ಬ್ಯಾಂಕಾಂಕ್ 'ಕಾಫಿ ಅಂಡ್ ಕಾಂಡೋಮ್ಸ್' ಹೆಸರಿನ ಕೆಫೆಯಲ್ಲಿರುವ ಪ್ರತಿಮೆ ಡ್ರೆಸ್, ಹೂಗಳು, ಸಂತ ಕ್ಲಾಸ್ ಗಡ್ಡ ಎಲ್ಲವನ್ನೂ ವಿಭಿನ್ನ ಬಣ್ಣದ ಕಾಂಡೋಮ್ ಗಳಿಂದ ರಚಿಸಲಾಗಿದೆ. ಈ ವಿಶಿಷ್ಠ ಪರಿಕಲ್ಪನೆ ಹಿಂದಿರುವ ಕಾರಣ ವಿವರಿಸಿರುವ ಮೊಹ್ನಿಶ್, ಕುಟುಂಬ ನಿಯಂತ್ರಣ, ರೋಗಗಳ ಮತ್ತಿತರ ಸಮಸ್ಯೆಗಳ ಬಗ್ಗೆ ಜನರಲ್ಲಿನ ನಿರ್ಲಕ್ಷ್ಯದಿಂದ ಹೊರಬರುವಂತೆ ಅರಿವು ಮೂಡಿಸಲು ಕೆಫೆ, ಈ ರೀತಿಯ ವಿಧಾನ ಅನುಸರಿಸಿದೆ ಎಂದು ಹೇಳಿದ್ದಾರೆ.
ಟೇಬಲ್ ಸೇರಿದಂತೆ ಕೆಫೆ ಒಳಗಡೆಯ ಬಹುತೇಕ ವಸ್ತುಗಳನ್ನು ಕಾಂಡೋಮ್ ಗಳಿಂದಲೇ ಮಾಡಲಾಗಿದೆ. ಗೋಡೆ ಮೇಲಿನ ಫೋಸ್ಟರ್ ಕೂಡಾ ಕಾಂಡೋಮ್ ಬಳಸುವಂತೆ ಉತ್ತೇಜಿಸುತ್ತದೆ.