ಮೈಸೂರು ವಿವಿಯಲ್ಲಿ ತೃತೀಯ ಲಿಂಗಿಯಿಂದ ಪಿಹೆಚ್​​ಡಿ ವ್ಯಾಸಂಗ; ಇದು ರಾಜ್ಯದಲ್ಲೇ ಮೊದಲು!

ಸಮಾಜದಲ್ಲಿ ಲೈಗಿಂಕ ಅಲ್ಪಸಂಖ್ಯಾತರನ್ನು ಕೀಳಾಗಿ ನೋಡುತ್ತಿರುವ ಬೆಳವಣಿಗೆಗಳು ಮುಂದುವರೆದಿದ್ದರೂ ಕೂಡ ಇದಾವುದಕ್ಕೂ ಗಮನಕೊಡದೆ ಇತರರಿಗಿಂತ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ದೀಪಾ ಬುದ್ಧೆ ಎಚ್.ಜಿ.(32) ತೋರಿಸಿಕೊಟ್ಟಿದ್ದಾರೆ.

Published: 05th May 2022 12:06 PM  |   Last Updated: 05th May 2022 05:41 PM   |  A+A-


Deepa_Buddhe_HG

ದೀಪಾ ಬುದ್ಧೆ

The New Indian Express

ಮೈಸೂರು: ಸಮಾಜದಲ್ಲಿ ಲೈಗಿಂಕ ಅಲ್ಪಸಂಖ್ಯಾತರನ್ನು ಕೀಳಾಗಿ ನೋಡುತ್ತಿರುವ ಬೆಳವಣಿಗೆಗಳು ಮುಂದುವರೆದಿದ್ದರೂ ಕೂಡ ಇದಾವುದಕ್ಕೂ ಗಮನಕೊಡದೆ ಇತರರಿಗಿಂತ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ದೀಪಾ ಬುದ್ಧೆ ಎಚ್.ಜಿ. (32) ತೋರಿಸಿಕೊಟ್ಟಿದ್ದಾರೆ.

ತಾನು 'ತೃತೀಯ ಲಿಂಗಿ' ಎಂದೇ ಘೋಷಿಸಿಕೊಂಡಿರುವ ದೀಪಾ ಬುದ್ಧೆಯವರು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯಾಗಿಯೇ ಪಿಹೆಚ್​​ಡಿ ಆರಂಭಿಸಿದ್ದಾರೆ. ಜತೆಗೆ ಪಿಹೆಚ್​ಡಿ ಮಾಡುತ್ತಿರುವ 'ಕರ್ನಾಟಕದ ಮೊದಲ‌ ಲೈಂಗಿಕ ಅಲ್ಪಸಂಖ್ಯಾತೆ' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಾರ್ಮಿಕರ ದಿನದಂದು ಸಾರ್ವಜನಿಕ ಶೌಚಾಲಯ ಸ್ವಚ್ಛಗೊಳಿಸಿದ ಪೊಲೀಸರು!

ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಪುರ ಗ್ರಾಮದಲ್ಲಿ ಕೂಲಿ ಮಾಡುವ ದಂಪತಿಯ ಐವರು ಮಕ್ಕಳಲ್ಲಿ ದೀಪಾ  ಒಬ್ಬರು. ಪಿಯು ಮುಗಿಸುವ ಹೊತ್ತಿಗೆ ಮನೆ ಬಿಟ್ಟ ಅವರು, 2015ರಲ್ಲಿ ಪದವಿ ಪಡೆದು ಕೆಲಕಾಲ ವಿದ್ಯಾಭ್ಯಾಸ ನಿಲ್ಲಿಸಿದರು. 2016ರಲ್ಲಿ ಅರ್ಜಿ ತುಂಬಲು ತೃತೀಯ ಲಿಂಗಿ ಕಾಲಂ ಬೇಕೆಂದು ಹಟ ಹಿಡಿದು, ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಂಬೇಡ್ಕರ್ ಅಧ್ಯಯನ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದರು. ಶೇ 84ರಷ್ಟು ಅಂಕಗಳೊಂದಿಗೆ ಎಂ.ಎ ಪೂರೈಸಿದರು.

ತೃತೀಯಲಿಂಗಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಮತಾ ಸೊಸೈಟಿಯಲ್ಲಿ ಅರೆಕಾಲಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಲೇ ಸಂತೆಮರಹಳ್ಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ದೀಪಾ ಅವರು ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಇದಾದ, ಕೆಲವೇ ವರ್ಷಗಳಲ್ಲಿ, ಅವರು ಸೊಸೈಟಿಯ ಪ್ರಾಜೆಕ್ಟ್ ಮ್ಯಾನೇಜರ್ ಆದರು ಮತ್ತು 2018 ರಲ್ಲಿ ಅದರ ಅಧ್ಯಕ್ಷರೂ ಆದರು. ಬಳಿಕ ಕರ್ನಾಟಕ ರಾಜ್ಯ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಮರಗಳಿಂದ ಬೀಳುವ ಬೀಜಗಳ ಸಂಗ್ರಹ: ಪರಿಸರ ಸಂರಕ್ಷಣೆಗೆ ಎಸ್ಐಟಿ ಕಾಲೇಜು ವಿದ್ಯಾರ್ಥಿಗಳ ಮಹತ್ತರ ಕೊಡುಗೆ!

ಇದೀಗ ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಜೆ.ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ, ಮೈಸೂರು-ಚಾಮರಾಜನಗರ ಜಿಲ್ಲೆಗಳ ಅಲ್ಪಸಂಖ್ಯಾತ ಸಮುದಾಯಗಳು: ಜೀವನ ಮತ್ತು ಹೋರಾಟದ ಕುರಿತು ವಿಮರ್ಶಾತ್ಮಕ ಅಧ್ಯಯನ’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.

ಕುಟುಂಬ ಬಿಟ್ಟು ಹೋಗಿ ಅಲ್ಪಸಂಖ್ಯಾತರ ಸಮುದಾಯ ಸೇರಿದ್ದ ದೀಪಾ ಅವರನ್ನು ಕುಟುಂಬಸ್ಥರು ತಿರಸ್ಕರಿಸಿದ್ದರು, 12 ವರ್ಷಗಳಾದರೂ ಇನ್ನೂ ದೀಪಾ ಅವರು ಕುಟುಂಬಸ್ಥರನ್ನು ಭೇಟಿ ಮಾಡಿಲ್ಲ.

ಇದನ್ನೂ ಓದಿ: ಖಾನಾಪುರದ ದಟ್ಟ ಚಾಪೋಲಿ ಅರಣ್ಯದೊಳಗೆ ಹುಲಿ, ಚಿರತೆ, ಕರಡಿಗಳಿಂದ ಬಚಾವಾಗಿ ಬಂದ ಎರಡೂವರೆ ವರ್ಷದ ಮಗು!

ನಾನು ಕುದೇರು ನಲ್ಲಿರುವ ಪದವಿ ಕಾಲೇಜಿಗೆ ಸೇರಿಕೊಂಡೆ, ಆದರೆ ನಾನು ಟ್ರಾನ್ಸ್ಜೆಂಡರ್ ಸಮುದಾಯದೊಂದಿಗೆ ಗುರುತಿಸಿಕೊಂಡಿದ್ದರಿಂದ ಸಮಾಜದಲ್ಲಿ ಅವಮಾನ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಬಳಿಕ ಈ ಕಾರಣದಿಂದ 2015 ರಲ್ಲಿ ಶಿಕ್ಷಣವನ್ನು ನಿಲ್ಲಿಸಬೇಕಾಗಿ ಬಂದಿತ್ತು. ಆದರೆ, ನಂತರ ಮತ್ತೆ ಶಿಕ್ಷಣ ಮುಂದುವರೆಸಿದ್ದ. 2018 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಂಬೇಡ್ಕರ್ ಅಧ್ಯಯನ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಎಂಎಗೆ ಸೇರಿದ್ದೆ, ಅಲ್ಲಿ ಶೇ 84ರಷ್ಟು ಅಂಕಗಳೊಂದಿಗೆ ಎಂಎ ಪೂರ್ಣಗೊಳಿಸಿದ್ದೆ. ಬಳಿಕ ಪಿಹೆಚ್'ಡಿ ಮಾಡಲು ನಿರ್ಧರಿಸಿದ್ದೆ. ಇದರಂತೆ ಕಳೆದ ಏಪ್ರಿಲ್ ನಿಂದ ಸಂಶೋಧನೆ ನಡೆಸುತ್ತಿದ್ದೇನೆಂದು ದೀಪಾ ಅವರು ಹೇಳಿದ್ದಾರೆ.

ದೀಪಾ ಅವರ ಚಾಮರಾಜನಗರದಲ್ಲಿದ್ದು, ವಿದ್ಯಾಭ್ಯಾಸಕ್ಕಾಗಿ ಪ್ರತೀನಿತ್ಯ 60 ಕಿ.ಮೀ ಪ್ರಯಾಣಿಸುತ್ತಿದ್ದಾರೆ. ಮೂರು ವರ್ಷದಲ್ಲಿ ಪಿಹೆಚ್'ಪಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ಇದು ಪೂರ್ಣಗೊಂಡ ಬಳಿಕ, ಶಿಕ್ಷಕಿಯಾಗಿ ನನ್ನ ಸಮುದಾಯದ ಜನರಿಗೆ ಸಹಾಯ ಮಾಡಲು ಬಯಸುತ್ತೇನೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಬೋಧನೆಗಳನ್ನು ನಾನು ನಂಬುತ್ತೇನೆಂದು ದೀಪಾ ತಿಳಿಸಿದ್ದಾರೆ.


Stay up to date on all the latest ವಿಶೇಷ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Gouse Sahib Mulimani

    Great work, Big salutes,
    1 month ago reply
flipboard facebook twitter whatsapp