ತಾಯಂದಿರ ದಿನ: ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಬದುಕಿ ತೋರಿಸಿಕೊಡುವ ಒಂಟಿ ತಾಯಂದಿರಿಗೊಂದು ಸಲಾಮ್
ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರ ದಿನಕ್ಕೆ ಮುನ್ನ 2019-21ರಲ್ಲಿ ರಾಜ್ಯದಲ್ಲಿ ನಡೆಸಿದ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ-5ರ ಪ್ರಕಾರ, ರಾಜ್ಯದಲ್ಲಿ ಕನಿಷ್ಠ 5 ಪ್ರತಿಶತದಷ್ಟು ಮಕ್ಕಳು ತಮ್ಮ ತಂದೆ ಜೀವಂತವಾಗಿದ್ದರೂ ಒಬ್ಬಂಟಿ ತಾಯಂದಿರೊಂದಿಗೆ ವಾಸಿಸುತ್ತಿದ್ದಾರೆ.
Published: 08th May 2022 01:22 PM | Last Updated: 09th May 2022 02:20 PM | A+A A-

ಸಾಂಕೇತಿಕ ಚಿತ್ರ
ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರ ದಿನಕ್ಕೆ ಮುನ್ನ 2019-21ರಲ್ಲಿ ರಾಜ್ಯದಲ್ಲಿ ನಡೆಸಿದ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ-5ರ ಪ್ರಕಾರ, ರಾಜ್ಯದಲ್ಲಿ ಕನಿಷ್ಠ 5 ಪ್ರತಿಶತದಷ್ಟು ಮಕ್ಕಳು ತಮ್ಮ ತಂದೆ ಜೀವಂತವಾಗಿದ್ದರೂ ಒಬ್ಬಂಟಿ ತಾಯಂದಿರೊಂದಿಗೆ ವಾಸಿಸುತ್ತಿದ್ದಾರೆ. ಶೇಕಡಾ 3.6ರಷ್ಟು ಮಕ್ಕಳು ವಿಧವೆಯರೊಂದಿಗೆ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಒಂಟಿ ತಾಯಂದಿರು ತಮ್ಮ ಮಕ್ಕಳು ಸವಾಲುಗಳ ನಡುವೆ ತಮ್ಮ ಜೀವನವನ್ನು ಪೂರೈಸುತ್ತಿದ್ದಾರೆ. ತಮ್ಮ ಜವಾಬ್ದಾರಿಗಳನ್ನು ಏಕಾಂಗಿಯಾಗಿ ನಿರ್ವಹಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. 11 ವರ್ಷದ ಮಗಳಿಗೆ ಒಂಟಿ ತಾಯಿಯಾದ ಅನರ್ಘ್ಯ (ಹೆಸರು ಬದಲಾಯಿಸಲಾಗಿದೆ), ನನ್ನ ಪತಿ ತನ್ನ ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದನ್ನು ಕಂಡು ನನ್ನ ಕನಸುಗಳು ಮತ್ತು ಜೀವನವು ಛಿದ್ರವಾಯಿತು. ನಾನು ಆರು ವರ್ಷಗಳ ಹಿಂದೆ ಅವನಿಗೆ ವಿಚ್ಛೇದನ ನೀಡಿದ್ದೇನೆ. ಆಗ ನನ್ನ ಮಗಳೇ ನನ್ನ ಪ್ರಪಂಚವಾದಳು. ಪೋಷಕರ ಬೆಂಬಲ, ಸರಿಯಾದ ಯೋಜನೆ, ಮನೆಯಿಂದ ಕೆಲಸ ಮಾಡುವ ಆಯ್ಕೆಯಿಂದ ನಾನು ವೃತ್ತಿ ಮತ್ತು ನನ್ನ ಮಗುವನ್ನು ನೋಡಿಕೊಳ್ಳುವುದರ ನಡುವೆ ಪರಿಪೂರ್ಣ ಸಮತೋಲನವನ್ನು ಸಾಧಿಸಲು ಸಾಧ್ಯವಾಯಿತು. ನಾನು ಅವಳ ಶಿಕ್ಷಣ ಮತ್ತು ಆರೋಗ್ಯವನ್ನು ನೋಡಿಕೊಳ್ಳಲು ಸಾಧ್ಯವಾಯಿತು. ಆರ್ಥಿಕ ಬೆಂಬಲದ ಕೊರತೆ ಮತ್ತು ಮಗುವಿನ ಜವಾಬ್ದಾರಿಯಿಂದ ದುಡಿಯಬೇಕಾದ ಅನಿವಾರ್ಯತೆಯಿದೆ ಎನ್ನುತ್ತಾರೆ.
ನನ್ನ ಪತಿ ನನ್ನನ್ನು ತೊರೆದ ನಂತರ, ನಾನು ನನ್ನ ಮಗುವನ್ನು ನನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ಜ್ಯೂಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತ್ತಿದೆ. ಕೆಲ ವರ್ಷಗಳು ಕಳೆದ ನಂತರ ಅವಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದ ಕಾರಣ ಹಾಸ್ಟೆಲ್‌ಗೆ ಹೋಗಬೇಕಾಯಿತು. ನನ್ನ 26 ವರ್ಷದ ಮಗಳು ಈಗ ಶಿಕ್ಷಕಿಯಾಗಿದ್ದು ಮದುವೆಯಾಗಿದ್ದಾಳೆ ಎಂದು ಒಂಟಿ ತಾಯಿ ನೇತ್ರಾ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ.
ಇದನ್ನೂ ಓದಿ: ವಿಶ್ವ ತಾಯಂದಿರ ದಿನ: ಮನೆ, ಮಕ್ಕಳು, ಜಗವನ್ನು ಪೊರೆವ ಮಾತೆಯಂದಿರ ದಿನ
12 ವರ್ಷದ ಮಗನಿಗೆ ಇನ್ನೊಬ್ಬ ಒಂಟಿ ತಾಯಿ ಶ್ವೇತಾ, "ಅಧಿಕ ರಕ್ತದೊತ್ತಡ ಮತ್ತು ಮೆದುಳಿನ ರಕ್ತಸ್ರಾವದಿಂದ ನನ್ನ ಪತಿ ಹಠಾತ್ ಮರಣ ಹೊಂದಿದ ನಂತರ, ಆರ್ಥಿಕ ದೃಢತೆ ಇದ್ದ ಕಾರಣ ನನ್ನ ಮಗನ ಮೇಲೆ ನಾನು ಸಂಪೂರ್ಣವಾಗಿ ಗಮನ ಹರಿಸಲು ಸಾಧ್ಯವಾಯಿತು ಎನ್ನುತ್ತಾರೆ.
ಆಸಿಡ್ ದಾಳಿಯಿಂದ ಬದುಕುಳಿದವರಾದ ಡಾ.ಮಹಾಲಕ್ಷ್ಮಿ ವೈ.ಎನ್, ನಾನು ಆಸಿಡ್ ದಾಳಿಗೆ ತುತ್ತಾಗಿ ಹೋರಾಡುತ್ತಿದ್ದಾಗ ನನಗೆ 30 ವರ್ಷ ವಯಸ್ಸಾಗಿತ್ತು, ನಾಲ್ಕು ವರ್ಷದ ನನ್ನ ಮಗಳು ನನ್ನ ಭರವಸೆಯ ಕಿರಣವಾಗಿದ್ದಳು ಎನ್ನುತ್ತಾರೆ.
ಉದ್ಯೋಗ, ಪೋಷಕರ ಬೆಂಬಲ, ನಾನು ಎದುರಿಸಿದ ಸವಾಲುಗಳ ಜೊತೆಗೆ ನನ್ನ ಮಗಳನ್ನು ಚೆನ್ನಾಗಿ ಪೋಷಿಸಲು ಸಾಧ್ಯವಾಯಿತು. ನನ್ನ ಮಗಳು ಈಗ ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾಳೆ. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಪ್ರಯತ್ನಿಸುತ್ತಿದ್ದಾಳೆ. ಸಕಾರಾತ್ಮಕ ಮನೋಭಾವದಿಂದ ದೃಢವಾಗಿ ಉಳಿಯುವುದರಿಂದ ಎಲ್ಲವೂ ಸಾಧ್ಯ ಎನ್ನುತ್ತಾರೆ ಮಹಾಲಕ್ಷ್ಮಿ.
ಇದನ್ನೂ ಓದಿ: ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ನಿಲ್ಲದ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು!
ಬೆಂಗಳೂರಿನ ಮನೋವೈದ್ಯ ಸಲಹೆಗಾರರಾದ ಡಾ ಪಲ್ಲವಿ ಜೋಶಿ ಅವರ ಪ್ರಕಾರ, ಈ ಒಂಟಿ ತಾಯಂದಿರಲ್ಲಿ ಹೆಚ್ಚಿನವರು ಎಲ್ಲಾ ಜವಾಬ್ದಾರಿಗಳನ್ನು ಏಕಾಂಗಿಯಾಗಿ ನಿಭಾಯಿಸುವುದರಿಂದ ಆತಂಕ ಮತ್ತು ಅಭದ್ರತೆಗಳನ್ನು ಎದುರಿಸುತ್ತಾರೆ. ನನಗೆ ಏನಾದರೂ ಸಂಭವಿಸಿದರೆ ಏನು ಎಂಬುದು ಅವರ ಮನಸ್ಸಿನಲ್ಲಿ ಉಳಿಯುವ ಪ್ರಶ್ನೆಯಾಗಿರುತ್ತದೆ. ಹೀಗಾಗಿ ಅವರು ತಮ್ಮ ಮತ್ತು ಮಗುವಿನ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ ಎನ್ನುತ್ತಾರೆ.
ಒಂಟಿ ತಾಯಂದಿರಿಗೆ ಹಲವು ಬಾರಿ ಮಾನಸಿಕ ಮತ್ತು ದೈಹಿಕ ನ್ಯೂನತೆಗಳಿರುವ ಮಕ್ಕಳಿರುತ್ತಾರೆ. ಅಂತವರನ್ನು ಸಾಕಿ ಬೆಳೆಸಿ, ಸಮಾಜದ ಜನರ ಮಾತುಗಳನ್ನು ಕೇಳಿಕೊಂಡು ಎಲ್ಲಾ ರೀತಿಯ ಸವಾಲು, ಸಂಕಷ್ಟಗಳನ್ನು ಎದುರಿಸಿ ಬದುಕಿ ತೋರಿಸುತ್ತಿರುವ ಇಂತಹ ತಾಯಂದಿರು ನಿಜಕ್ಕೂ ಮಾದರಿ.