ರಸ್ತೆ ಅಪಘಾತ ತಡೆಯಲು ರಾಜ್ಯದ ಈ ನಾಲ್ವರು ಯುವಕರ ವಿನೂತನ ಅಭಿಯಾನ!

2016ರಲ್ಲಿ ತಮಗೆ ಎದುರಾಗಿದ್ದ ಅಪಘಾತ ಘಟನೆಯೊಂದು ಈ ಯುವಕರ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದೆ. ಅಪಘಾತ ಘಟನೆ ಬಳಿಕ ತಮಗೆ ಎದುರಾದ ಪರಿಸ್ಥಿತಿ ಬೇರೆ ಯಾರಿಗೂ ಎದುರಾಗಬಾರದು ಎಂದು ಈ ನಾಲ್ವರು ಯುವಕರು ರಸ್ತೆ ಅಪಘಾತಗಳ ತಪ್ಪಿಸಲು ವಿನೂತನ ಮಾರ್ಗಗಳನ್ನು ಕಂಡು ಹಿಡಿದು, ಈ ಕುರಿತು ಅಭಿಯಾನವನ್ನೇ ಆರಂಭಿಸಿದ್ದಾರೆ.

Published: 08th May 2022 01:50 PM  |   Last Updated: 10th May 2022 05:14 PM   |  A+A-


Vivek N, a civil engineer, explains the integrated smart ambulance and pubilc transport system during Traffic Infratech Expo Mumbai.

ಮುಂಬೈನಲ್ಲಿ ನಡೆದ ಟ್ರಾಫಿಕ್ ಇನ್ಫ್ರಾಟೆಕ್ ಎಕ್ಸ್‌ಪೋ ವಿವೇಕ್ ಅವರು ತಮ್ಮ ಇಂಟಿಗ್ರೇಟೆಡ್ ಸ್ಮಾರ್ಟ್ ಆ್ಯಂಬುಲೆನ್ಸ್ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕುರಿತು ಅಧಿಕಾರಿಗಳಿಗೆ ವಿವರಿಸುತ್ತಿರುವುದು.

The New Indian Express

ಮೈಸೂರು: 2016ರಲ್ಲಿ ತಮಗೆ ಎದುರಾಗಿದ್ದ ಅಪಘಾತ ಘಟನೆಯೊಂದು ಈ ಯುವಕರ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದೆ. ಅಪಘಾತ ಘಟನೆ ಬಳಿಕ ತಮಗೆ ಎದುರಾದ ಪರಿಸ್ಥಿತಿ ಬೇರೆ ಯಾರಿಗೂ ಎದುರಾಗಬಾರದು ಎಂದು ಈ ನಾಲ್ವರು ಯುವಕರು ರಸ್ತೆ ಅಪಘಾತಗಳ ತಪ್ಪಿಸಲು ವಿನೂತನ ಮಾರ್ಗಗಳನ್ನು ಕಂಡು ಹಿಡಿದು, ಈ ಕುರಿತು ಅಭಿಯಾನವನ್ನೇ ಆರಂಭಿಸಿದ್ದಾರೆ.

ವಿವೇಕ್ ಎನ್, ರಚನ್ ಎಆರ್, ಜೋಯಲ್ ಪ್ರೀತ್ ಮೆಂಜೆಸ್ ಮತ್ತು ಜೋಸೆಫ್ ವಿಲ್ಫ್ರೆಡ್ ಡಯಾಸ್ ಈ ನಾಲ್ವರು ಯವಕರು ರಸ್ತೆ ಅಪಘಾತಗಳ ತಪ್ಪಿಸಲು ಶ್ರಮ ಪಡುತ್ತಿದ್ದಾರೆ. ಇದಕ್ಕಾಗಿ ಕೆರೂಬ್ ಪ್ರೈವೇಟ್ ಲಿಮಿಟೆಡ್'ನ್ನು ಸ್ಥಾಪಿಸಿದ್ದಾರೆ. ಈ ನಾಲ್ವರೂ ಇಂಜಿನಿಯರ್ ಗಳಾಗಿದ್ದಾರೆ.

2016ರಲ್ಲಿ ರಸ್ತೆ ತಿರುವೊಂದರಲ್ಲಿ ಬೆಳ್ಳಂಬೆಳಿಗ್ಗೆ ಅಪಘಾತ ಸಂಭವಿಸಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ 28 ವರ್ಷದ ಟೆಕ್ಕಿಗೆ ಯಾರೊಬ್ಬರೂ ಸಹಾಯ ಮಾಡಿರಲಿಲ್ಲ. ಸಹಾಯಕ್ಕೆ ಬರುವ ಬದಲು ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಬಳಿಕ ನಾನು ಮತ್ತು ನನ್ನ ಸ್ನೇಹಿತರು ಆ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದೆವು. ಟೆಕ್ಕಿ ಕೇರಳ ಮೂಲದ ವ್ಯಕ್ತಿಯಾಗಿದ್ದು, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದ ಹಿನ್ನೆಲೆಯಲ್ಲಿ ಬದುಕುಳಿದಿದ್ದರು. ಈ ಘಟನೆ ನಮಗೆ ಪ್ರೇರಣೆ ನೀಡಿತ್ತು ಎಂದು ವಿವೇಕ್ ಅವರು ಹೇಳಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡುವ ನಾವು, ನಂತರ ಅಲ್ಲಿನ ಟ್ರಾಫಿಕ್ ಪೊಲೀಸರ ನೆರವಿನೊಂದಿಗೆ ಅಪಘಾತಗಳನ್ನು ಅಧ್ಯಯನ ನಡೆಸುತ್ತೇವೆ. ನಂತರ ಆ ಮಾರ್ಗದಲ್ಲಿ ಹಾದುಹೋಗುವ ಚಾಲಕರೊಂದಿಗೆ ಮಾತನಾಡಿ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇವೆ. ನಂತರ ಸಮಸ್ಯೆಗಳ ವಿಶ್ಲೇಷಿಸಿ, ಸೂಕ್ತ ಪರಿಹಾರಗಳನ್ನು ನೀಡುವ ಕೆಲಸ ಮಾಡುತ್ತೇವೆ.

ಈ ನಿಟ್ಟಿನಲ್ಲಿ ನಾವು ಈ ವರೆಗೂ ಚಾಮರಾಜನಗರ, ಕೊಳ್ಳೇಗಾಲ, ಮೈಸೂರು ಮತ್ತು ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೂ ಭೇಟಿ ನೀಡಿದ್ದೇವೆಂದು ತಿಳಿಸಿದ್ದಾರೆ.

2015 ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ವಿವೇಕ್, ಬಳಿಕ ಒಂದು ವರ್ಷ ಐಎಎಸ್ ಕೋಚಿಂಗ್ ಪಡೆದುಕೊಂಡಿದ್ದರು. ಸ್ಥಳೀಯ ಗುತ್ತಿಗೆದಾರರ ಬಳಿ ಸೈಟ್ ಇಂಜಿನಿಯರ್ ಆಗಿ ಮತ್ತು ಮೈಸೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿದ ನಂತರ, ಅಂತಿಮವಾಗಿ ತಮ್ಮದೇ ಆದ ಸ್ಟಾರ್ಟಪ್ ಕೆಲಸ ಆರಂಭಿಸಲು ನಿರ್ಧರಿಸಿ, ಎಲ್ಲಾ ನೌಕರಿಗಳಿಂದ ದೂರ ಉಳಿದಿದ್ದರು.

ರಚನ್, ಮೆಂಜೆಸ್ ಹಾಗೂ ಡಯಾಜ್ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೂ, ಇದರ ಜೊತೆಗೆ ಅಭಿಯಾನಕ್ಕಾಗಿ ತಮ್ಮ ಸ್ವಂತ ಹಣದೊಂದಿಗೆ ರಸ್ತೆ ಅಪಘಾತಗಳ ನಡೆಯಲು ವಿವಿಧ ವಿನ್ಯಾಸಗಳು ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರೆ.

ಈ ವರೆಗೂ ನಾವು ರಿಫ್ಲೆಕ್ಸಿಂಗ್ ಡಿವೈಡರ್ ಬೆಲ್ಟ್‌ಗಳು ಮತ್ತು ರಿಫ್ಲೆಕ್ಟಿವ್ ಪ್ರೊಪೆಲ್ಲರ್ ಟ್ರಾಫಿಕ್ ಸೈನ್'ಗಳು ಅಭಿವೃದ್ಧಿಪಡಿಸಿದ್ದೇವೆ. ಇದಲ್ಲದೆ, ಇಂಟೆಲಿಜೆಂಟ್ ಟ್ರಾಫಿಕ್ ಲೈಟ್ಸ್,ಮೋಟಾರ್ ಸೈಕಲ್ ಗಳಿಗೆ ಸುರಕ್ಷತಾ ನಂಬರ್ ಪ್ಲೇಟ್, ಇಂಟೆಲಿಜೆಂಟ್ ಕಾರ್ ಸೀಟ್ ಸ್ಲೈಡರ್‌ಗಳ ಕುರಿತು ಅಧ್ಯಯನ ನಡೆಯತ್ತಿದೆ. ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸ್ಮಾರ್ಟ್ ಆ್ಯಂಬುಲೆನ್ಸ್ ಯೋಜನೆಯಲ್ಲಿ ಕೆಲಸ ಮಾಡಿದ್ದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಕೆಲಸ ಬಿಟ್ಟೆ. ಬಳಿಕ ಕೆರೂಬ್ ಪ್ರೈವೇಟ್ ಲಿಮಿಟೆಡ್'ನ್ನು ಸ್ಥಾಪಿಸಿದೆ. ನಂತರ ನನ್ನೊಂದಿಗೆ ಸ್ಟಾರ್ಟ್‌ಅಪ್‌ನ ಸಹ-ಸಂಸ್ಥಾಪಕರಾಗಿರುವ ಮೆನೆಜಸ್ ಅವರು ಕೈಜೋಡಿಸಿದರು ಎಂದು ವಿವೇಕ್ ಹೇಳಿದ್ದಾರೆ.

ಮೆನೆಜಸ್ ಅವರು, ಫುಡ್ ಡೆಲಿವರಿ ಆ್ಯಪ್ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದು, ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಮೈಸೂರಿನಲ್ಲಿರುವ ಕೆಂಪನಿಯೊಂದರಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ.

ನನ್ನ ತಾಯಿ ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿದ್ದು, ತಂದೆ ಆಟೋ ಮೊಬೈಲ್ ಕ್ಷೇತ್ರದಲ್ಲಿದ್ದಾರೆ. ನಾನು ಉತ್ತಮ ಭಾಷಾ ಕೌಶಲ್ಯವನ್ನು ಹೊಂದಿರುವುದರಿಂದ, ವಿವೇಕ್ ತಮ್ಮ ಆಲೋಚನೆಗಳು ಮತ್ತು ಪರಿಕಲ್ಪನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಬಳಿಕ ನಾನು ಆ ಆಲೋಚನೆ ಹಾಗೂ ಪರಿಕಲ್ಪನೆಗಳನ್ನು ಕಾಗದದ ಮೇಲೆ ತರುತ್ತೇನೆ ಎಂದು ಮೆನೆಜಸ್ ಹೇಳಿದ್ದಾರೆ.

ಸಿವಿಲ್ ಇಂಜಿನಿಯರಿಂಗ್ ಹಿನ್ನೆಲೆಯುಳ್ಳ ರಚನ್ ಅವರು, ತಮ್ಮ ಉತ್ಪನ್ನಗಳಿಗೆ ಹಣ ಸಂಪಾದಿಸಲು ರಾತ್ರಿ ವೇಳೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ರಚನ್ ಅವರಿಗೆ ರಸ್ತೆ ಸುರಕ್ಷತಾ ಕಾಮಗಾರಿ, ಅಪಘಾತ ವಲಯಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ.

ರಸ್ತೆ ಸುರಕ್ಷತೆ ಪರಿಕಲ್ಪನೆಗಳು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಪ್ರೋಗ್ರಾಮಿಂಗ್ ನ್ನೂ ಕೂಡ ರಚನ್ ನಿರ್ವಹಿಸುತ್ತಿದ್ದಾರೆ. ಕೇರಳದ ಕೊಚ್ಚಿಯಲ್ಲಿರುವ ಇವರು ಸದ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನು ವಿವೇಕ್ ಅವರ ಈ ಕಾರ್ಯಕ್ಕೆ, ಅವರ ತಾಯಿ ಭಾಗ್ಯ ಅವರು ಆರ್ಥಿಕ ನೆರವು ನೀಡಿದ್ದಾರೆ. ಮಗನ ಕನಸು ನನಸು ಮಾಡಲು ತಮ್ಮ ಬಳಿಯಿದ್ದ ಆಭರಣಗಳನ್ನು ಅಡವಿಟ್ಟು ಹಣವನ್ನು ನೀಡಿದ್ದಾರೆ. ಮೆನೆಜಸ್ ಅವರ ತಾಯಿ ಕೂಡ ಸ್ಟಾರ್ಟ್ ಅಪ್ ಕಾರ್ಯ ಆರಂಭಿಸಲು ಹೂಟಗಳ್ಳಿಯಲ್ಲಿದ್ದ ತಮ್ಮ ವಾಣಿಜ್ಯ ಕಚೇರಿಯೊಂದನ್ನು ಉಚಿತವಾಗಿ ನೀಡಿದ್ದಾರೆ. ಈ ನಾಲ್ವರ ಜೊತೆಗೆ 25 ಮಂದಿ ಸ್ವಯಂ ಸೇವಕರೂ ಕೂಡ ಕೈಜೋಡಿಸಿದ್ದು, ರಸ್ತೆ ಅಪಘಾತ ತಡೆಯಲು ಮೈಸೂರು ಹಾಗೂ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳು, ಕಾಲೇಜು, ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಟ್ರಾಫಿಕ್ ನಿಯಮಗಳನ್ನು ಹೇಗೆ ಅನುಸರಿಸಬೇಕು ಮತ್ತು ಅಪಘಾತಗಳಿಂದ ದೂರವಿರುವುದು ಹೇಗೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳುವುದು ಅಗತ್ಯವಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಕೂಡಲೇ ಯಾವ ರೀತಿ ಅಗತ್ಯಕ್ಕೆ ನೆರವಾಗಬೇಕು ಎಂಬುದನ್ನು ಈ ವೇಳೆ ಮಕ್ಕಳಿಗೆ ವಿವರಿಸುತ್ತೇವೆ. ಈ ಮೂಲಕ ರಸ್ತೆ ಅಪಘಾತಗಳು, ಗಾಯ ಹಾಗೂ ಸಾವುಗಳ ತಡೆಗಟ್ಟುವುದು ನಮ್ಮ ಉದ್ದೇಶವಾಗಿದೆ ಎಂದು ವಿವೇಕ್ ತಿಳಿಸಿದ್ದಾರೆ.

ರಸ್ತೆ ಸುರಕ್ಷತೆಯ ಕುರಿತು ನಾವು ಯೂಟ್ಯೂಬ್ ಚಾನೆಲ್ ನ್ನೂ ಕೂಡ ಪ್ರಾರಂಭಿಸಿದ್ದೇವೆ. ಸ್ವಯಂಸೇವಕರ ಮೂಲಕ ಪ್ರತಿ ತಿಂಗಳು ನಾವು ಶಾಲೆಗಳಿಗೆ ಭೇಟಿ ನೀಡುತ್ತೇವೆ. ಈ ವೇಳೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುತ್ತೇವೆ, ತಂಡವು ಪೇಟೆಂಟ್ ಹೊಂದಿರುವ ರಾಪಿಡ್ ಆಂಬ್ಯುಲೆನ್ಸ್ ಸಾರಿಗೆ ವ್ಯವಸ್ಥೆಯನ್ನು ಕೂಡ ವಿನ್ಯಾಸಗೊಳಿಸಿದೆ. "ರಸ್ತೆ ಅಪಘಾತಗಳನ್ನು ತಡೆಯಲು ಸರ್ಕಾರ ನಾವು ವಿನ್ಯಾಸಗಳಿಸಿರುವ ಮತ್ತು ಅಭಿವೃದ್ಧಿಪಡಿಸಿರುವ ವಸ್ತುಗಳನ್ನು ಬಳಸಬೇಕೆನ್ನುವುದು ನಮ್ಮ ಆಸೆಯಾಗಿದೆ ಎಂದಿದ್ದಾರೆ.


Stay up to date on all the latest ವಿಶೇಷ news
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp