ಪ್ರಧಾನಿ ಮೋದಿ ಜೀವನದಿಂದ ಪ್ರೇರಣೆ: ಬಡ ವ್ಯಾಪಾರಿಗಳಿಗಾಗಿ ಮೊಬೈಲ್ ಟೀ ಡಿಸ್ಪೆನ್ಸರ್ ತಯಾರಿಸಿದ ಹುಬ್ಬಳ್ಳಿ ಸಂಸ್ಥೆ!
ಟೀ ವ್ಯಾಪಾರಿಯಾಗಿದ್ದ ನರೇಂದ್ರ ಮೋದಿಯವರು ಇಂದು ದೇಶದ ಪ್ರಧಾನಮಂತ್ರಿಯಾಗಿ ಸ್ಟಾರ್ಟ್-ಅಪ್ (ನವೋದ್ಯಮ) ಪ್ರೋತ್ಸಾಹ ನೀಡುತ್ತಿದ್ದು, ಇದರಿಂದ ಸ್ಫೂರ್ತಿ ಪಡೆದಿರುವ ಹುಬ್ಬಳ್ಳಿಯ ಸಂಸ್ಥೆಯೊಂದು ಬಡ ವ್ಯಾಪಾರಿಗಳಿಗೆ ಸಹಾಯ ಮಾಡಲು ಟೀ ಡಿಸ್ಪೆನ್ಸರ್ ವೊಂದನ್ನು ಸಿದ್ಧಪಡಿಸಿದೆ.
Published: 23rd May 2022 11:36 AM | Last Updated: 23rd May 2022 02:48 PM | A+A A-

ಮೊಬೈಲ್ ಟೀ ಡಿಸ್ಪೆನ್ಸರ್
ಮೈಸೂರು: ಟೀ ವ್ಯಾಪಾರಿಯಾಗಿದ್ದ ನರೇಂದ್ರ ಮೋದಿಯವರು ಇಂದು ದೇಶದ ಪ್ರಧಾನಮಂತ್ರಿಯಾಗಿ ಸ್ಟಾರ್ಟ್-ಅಪ್ (ನವೋದ್ಯಮ) ಪ್ರೋತ್ಸಾಹ ನೀಡುತ್ತಿದ್ದು, ಇದರಿಂದ ಸ್ಫೂರ್ತಿ ಪಡೆದಿರುವ ಹುಬ್ಬಳ್ಳಿಯ ಸಂಸ್ಥೆಯೊಂದು ಬಡ ವ್ಯಾಪಾರಿಗಳಿಗೆ ಸಹಾಯ ಮಾಡಲು ಟೀ ಡಿಸ್ಪೆನ್ಸರ್ ವೊಂದನ್ನು ಸಿದ್ಧಪಡಿಸಿದೆ.
ಹುಬ್ಬಳ್ಳಿಯ ಸ್ಟೀರಾ ಟೆಕ್ನೋವೇಶನ್ಸ್ ಕಂಪನಿಯು ಟೀ ಡಿಸ್ಪೆನ್ಸರ್'ನ್ನು ಸಿದ್ಧಪಡಿಸಿದ್ದು, ಇದು ಬಸ್ ನಿಲ್ದಾಣಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಭಾರದ ಸ್ಟೀಲ್ ಪಾತ್ರೆಗಳನ್ನು ಹೊತ್ತು ಟೀ ಮಾರಾಟ ಮಾಡುತ್ತಿರುವ ಬಡ ವ್ಯಾಪಾರಿಗಳ ದಣಿವನ್ನು ಕಡಿಮೆ ಮಾಡಲಿದೆ.
5 ಲೀಟರ್ ಸಾಮರ್ಥ್ಯವಿರುವ ಇನ್ಸುಲೇಟೆಡ್ ಕಂಟೇನರ್ ಡಿಸ್ಪೆನ್ಸರ್ಗೆ ಜೋಡಿಸಲಾಗಿದ್ದು, ಹಲವು ಗಂಟೆಗಳ ಕಾಲ ಟೀ-ಕಾಫಿ ಬಿಸಿಯಾಗಿರುವಂತೆ ನೋಡಿಕೊಳ್ಳಲಿದೆ. ಬ್ಯಾಕ್ ಪ್ಯಾಕ್ ನಂತೆ ಇದನ್ನು ಹೊತ್ತುಕೊಂಡು ಟೀ-ಕಾಫಿ ಮಾರಾಟ ಮಾಡಬಹುದು.
ಇದನ್ನೂ ಓದಿ: ತರಕಾರಿ ವ್ಯಾಪಾರಿಗಳಿಗಾಗಿ ಸಂಚಾರಿ ರೆಫ್ರಿಜೆರೇಟರ್ ಕಂಡುಹಿಡಿದ ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು!
ಸ್ಟೀರಾ ಟೆಕ್ನೋವೇಶನ್ಸ್ ಇಂಜಿನಿಯರ್ ಗಣೇಶ ಬಾಳಿಕಾಯಿ ಮಾತನಾಡಿ, ಈ ಡಿಸ್ಪೆನ್ಸರ್ ತಯಾರಿಕೆಯಿಂದ ಕಂಪನಿಗೆ ಯಾವುದೇ ಲಾಭವಾಗುವುದಿಲ್ಲ. ಆದರೆ, ಸಮಾಜದಲ್ಲಿರುವ ಸಮಸ್ಯೆಗಳ ದೂರ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಬಸ್ ಹಾಗೂ ರೈಲು ನಿಲ್ದಾಣಗಳಲ್ಳಿ ಭಾರದ ಪಾತ್ರೆಗಳ ಹೊತ್ತು ಟೀ-ಕಾಫಿ ಮಾರಾಡ ಮಾಡುತ್ತಿರುವ ಬಡ ವ್ಯಾಪಾರಿಗಳಿಗೆ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ. ಡಿಸ್ಪೆನ್ಸರ್ ನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಟೀ-ಕಾಫಿ ಮಾರಾಟ ಮಾಡಬಹುದು. ಟೀ ಡಿಸ್ಪೆನ್ಸರ್ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು, ಇದರಲ್ಲಿ ಟೀ-ಕಾಫಿ 9 ಗಂಟೆಗೂ ಹೆಚ್ಚು ಕಾಲ ಬಿಸಿಯಾಗಿರುತ್ತದೆ. ಹಲವು ಡಿಸ್ಪೆನ್ಸರ್ ಗಳನ್ನು ಈಗಾಗಲೇ ಹುಬ್ಬಳ್ಳಿ ರೈಲ್ನೇ ನಿಲ್ದಾಣದಲ್ಲಿ ಮಾರಾಟವಾಗಿವೆ. ಮೈಸೂರಿನಿಂದ ಹಲವು ಆರ್ಡರ್ ಗಳು ಬರುತ್ತಿವೆ ಎಂದು ಹೇಳಿದ್ದಾರೆ.
ವಿದ್ಯಾರಣ್ಯಪುರದ ಟೀ ಮಾರಾಟಗಾರ ಎಂ.ಗಣೇಶ್ ಎಂಬುವವರು ಮಾತನಾಡಿ, ಮೊಬೈಲ್ ಟೀ ಡಿಸ್ಪೆನ್ಸರ್ ನಮ್ಮ ಗ್ಯಾಸ್ ನ್ನು ಉಳಿತಾಯ ಮಾಡುತ್ತಿದೆ. ಆಗಾಗೆ ಟೀ-ಕಾಫಿ ಬಿಸಿ ಮಾಡುವ ಪ್ರಮೇಯವೇ ಬರುತ್ತಿಲ್ಲ. ಬೆನ್ನಿನ ಮೇಲೆ ಇಟ್ಟುಕೊಂಡು ಸುಲಭವಾಗಿ ಮಾರಾಟ ಮಾಡಬಹುದು ಎಂದು ತಿಳಿಸಿದ್ದಾರೆ.