ಅದಮ್ಯ ಆತ್ಮವಿಶ್ವಾಸ: ಶಿಕ್ಷಕಿಯಾಗುವ ಕನಸು ಹೊತ್ತು ಒಂದೇ ಕಾಲಲ್ಲಿ ನಡೆದು ಶಾಲೆಗೆ ಹೋಗುವ ಬಾಲಕಿ!
ಬಿಹಾರದ ನಕ್ಸಲ್ ಪೀಡಿತ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿನಿ ಸೀಮಾ ಕುಮಾರಿ, ಸಾಮಾನ್ಯ ಬಾಲಕಿಯಲ್ಲ ಆದರೆ, ಇತರ ಅನೇಕ ವಿಕಲಚೇತನ ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ.
Published: 25th May 2022 10:41 PM | Last Updated: 27th May 2022 06:54 PM | A+A A-

ಒಂದೇ ಕಾಲಲ್ಲಿ ಶಾಲೆಗೆ ಹೋಗುತ್ತಿರುವ ಸೀಮಾ ಕುಮಾರಿ
ಪಾಟ್ನಾ: ಬಿಹಾರದ ನಕ್ಸಲ್ ಪೀಡಿತ ಜಿಲ್ಲೆಯ 10ನೇ ತರಗತಿ ವಿದ್ಯಾರ್ಥಿನಿ ಸೀಮಾ ಕುಮಾರಿ ಸಾಮಾನ್ಯ ಬಾಲಕಿಯಲ್ಲ, ಆದರೆ, ಇತರ ಅನೇಕ ವಿಕಲಚೇತನ ಮಕ್ಕಳಿಗೆ ಸ್ಪೂರ್ತಿಯಾಗಿದ್ದಾಳೆ. ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲೊಂದನ್ನು ಕಳೆದುಕೊಂಡಿರುವ ಸೀಮಾ, ತನ್ನ ಅದೃಷ್ಟವನ್ನು ಶಪಿಸುವ ಬದಲು, ಶಿಕ್ಷಕಿಯಾಗುವ ಕನಸನ್ನು ನನಸು ಮಾಡಿಕೊಳ್ಳಲು ನಿರ್ಧರಿಸಿದ್ದಾಳೆ.
ಜಮುಯಿ ಜಿಲ್ಲೆಯ ಖೈರಾ ಬ್ಲಾಕ್ನ ಫತೇಪುರ್ ಗ್ರಾಮದ ಮೂಲದ ಸೀಮಾ, ಒಂದೇ ಕಾಲಿನಲ್ಲೇ ಒಂದು ಕಿಲೋ ಮೀಟರ್ ದೂರ ಶಾಲೆಗೆ ನಡೆದೇ ಹೋಗುತ್ತಾಳೆ. ಆಕೆಯ ಅದಮ್ಯ ಆತ್ಮವಿಶ್ವಾಸ ಕಂಡು ಎಲ್ಲರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. 'ನಾನು ಶಿಕ್ಷಕನಾಗಲು ಬಯಸುತ್ತೇನೆ. ನಾನು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಶಿಕ್ಷಣ ನೀಡಲು ಬಯಸುತ್ತೇನೆ ಎನ್ನುವುದರೊಂದಿಗೆ ಸೀಮಾ ಕಣ್ಣಿನಲ್ಲಿ ಮಿಂಚು ಹರಿಸುತ್ತಾಳೆ.
ಆಕೆಯ ತಂದೆ ಖಿರಣ್ ಮಾಂಝಿ ವಲಸೆ ಕಾರ್ಮಿಕರಾಗಿದ್ದಾರೆ, ಅವರು ಪ್ರತಿ ತಿಂಗಳು ಕಳುಹಿಸುವ ಸಣ್ಣ ಮೊತ್ತದಿಂದ ಅವರ ಕುಟುಂಬವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆರು ಒಡಹುಟ್ಟಿದವರಲ್ಲಿ ಈಕೆ ಎರಡನೆಯವಳು ಎಂದು ಆಕೆಯ ತಾಯಿ ಬೇಬಿ ದೇವಿ ಹೇಳುತ್ತಾರೆ. ಸೀಮಾ ರಸ್ತೆ ಅಪಘಾತದಲ್ಲಿ ತನ್ನ ಕಾಲು ಕಳೆದುಕೊಂಡಿದ್ದಕ್ಕಾಗಿ ಪಶ್ಚಾತ್ತಾಪ ಪಡುವುದನ್ನು ನಾನು ಎಂದಿಗೂ ನೋಡಲಿಲ್ಲ. ಬದಲಿಗೆ ಅವಳು ಯಾವಾಗಲೂ ಸ್ಪೂರ್ತಿಯ ಸೆಳೆಯಾಗಿದ್ದಾಳೆ ಎಂದು ಸೀಮಾ ಅವರ ಶಿಕ್ಷಕ ಶಿವಕುಮಾರ್ ಭಗತ್ ಹೇಳಿದರು.
ಸೀಮಾಳ ಅಧ್ಯಯನವನ್ನು ಮುಂದುವರಿಸುವ ಸಂಕಲ್ಪದಿಂದ ಹರ್ಷಗೊಂಡ ಗ್ರಾಮಸ್ಥರು ತಮ್ಮ ಬೆಂಬಲವನ್ನು ನೀಡಲು ನಿರ್ಧರಿಸಿದ್ದಾರೆ. ಅವಳು ಈಗ ತನ್ನ ವಯಸ್ಸಿನ ಅನೇಕ ಹುಡುಗಿಯರಿಗೆ ಮಾದರಿಯಾಗಿದ್ದಾಳೆ. ನಾವು ಎಲ್ಲಾ ಹಂತಗಳಲ್ಲಿ ಕುಟುಂಬದೊಂದಿಗೆ ಸಹಕರಿಸುತ್ತೇವೆ ಎಂದು ಸ್ಥಳೀಯ ನಿವಾಸಿ ಕರಣ್ ಮಾಂಝಿ ಹೇಳಿದ್ದಾರೆ.