ಕ್ಯಾಪ್ಟನ್ ಅಭಿಲಾಷಾ ಬಾರಕ್ ಭಾರತೀಯ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್!
ಭಾರತೀಯ ವಾಯುಪಡೆಯ ಯುದ್ಧ ವಿಮಾನವನ್ನು ಚಲಾಯಿಸುವ ಮುಖಾಂತರ ಕ್ಯಾಪ್ಟನ್ ಅಭಿಲಾಷಾ ಬಾರಕ್ ಅವರು ಭಾರತೀಯ ಸೇನೆಯ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
Published: 26th May 2022 01:06 PM | Last Updated: 26th May 2022 01:18 PM | A+A A-

ಅಭಿಲಾಷಾ ಬಾರಕ್
ನವದೆಹಲಿ: ಭಾರತೀಯ ವಾಯುಪಡೆಯ ಯುದ್ಧ ವಿಮಾನವನ್ನು ಚಲಾಯಿಸುವ ಮುಖಾಂತರ ಕ್ಯಾಪ್ಟನ್ ಅಭಿಲಾಷಾ ಬಾರಕ್ ಅವರು ಭಾರತೀಯ ಸೇನೆಯ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಸೇನಾ ಏವಿಯೇಷನ್ ಟ್ರೇನಿಂಗ್ ಸ್ಕೂಲ್'ನಲ್ಲಿ ಒಂದು ವರ್ಷದ ಕೋರ್ಸ್ ಪಡೆದ ನಂತರ ಬುಧವಾರ ಹೆಲಿಕಾಪ್ಟರ್ ಚಲಾಯಿಸಿದ್ದಾರೆ. ಈ ಮೂಲಕ ಮೂವತ್ತು ವರ್ಷಗಳ ನಂತರ ಭಾರತೀಯ ವಾಯುಪಡೆ ಸರಿದ ಮೊದಲ ಮಹಿಳೆಯಾಗಿದ್ದಾರೆ.
ನಾಸಿಕದ ಯುದ್ಧ ವಿಮಾನ ತರಬೇತಿ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಇತರ 36 ಸೇನಾ ಪೈಲಟ್ಗಳ ಜೊತೆ ಯುದ್ಧ ವಿಮಾನ ಪೈಲಟ್ ಆಗಿ ಪದವಿ ಪಡೆದರು.
ಕ್ಯಾ. ಅಭಿಲಾಶಾ ಅವರು ಮೂಲತಃ ಹರಿಯಾಣಾದವರು. ನಿವೃತ್ತ ಕರ್ನಲ್ ಓಮ್ ಸಿಂಗ್ ಅವರ ಮಗಳು. 2018ರ ಸೆಪ್ಟೆಂಬರ್ನಲ್ಲಿ ಅವರು ಸೇನಾ ವಾಯು ರಕ್ಷಣಾ ಕಾರ್ಪ್ಸ್ಗೆ ಸೇರಿದರು. ಸೇನಾ ವಾಯು ರಕ್ಷಣಾ ಕಾರ್ಪ್ಸ್ಗೆ ಸೇರ್ಪಡೆಯಾಗುವ ಮೊದಲು ಅವರು ಸೇನೆಯ ಹಲವಾರು ತರಬೇತಿಗಳನ್ನು ಪಡೆದಿದ್ದಾರೆ.
ನವೆಂಬರ್ 1986 ರಲ್ಲಿ ತಯಾರಾದ, ಆರ್ಮಿ ಏವಿಯೇಷನ್ ಕಾರ್ಪ್ಸ್ ಎಎಲ್'ಹೆಚ್, ರುದ್ರ ಹೆಲಿಕಾಪ್ಟರ್, ಚೇತಕ್, ಚೀತಾಗಳು ಮತ್ತು ಚೀಟಲ್ ಹೆಲಿಕಾಪ್ಟರ್ಗಳು ಸಿಯಾಚಿನ್ ಗಡಿಯನ್ನು ಕಾಯುತ್ತಿರುತ್ತವೆ. 2015 ರಲ್ಲಿ ಐಎಎಫ್ ನ ಫೈಟರ್ ಸ್ಟ್ರೀಮ್ಗೆ ಮಹಿಳೆಯರನ್ನು ಸೇರಿಸಿಕೊಳ್ಳಲಿ ನಿರ್ಧರಿಸಲಾಗಿತ್ತು. ಹೀಗಾಗಿ ಕಳೆದ ವರ್ಷ, ಭಾರತೀಯ ನೌಕಾಪಡೆಯು ಸುಮಾರು 25 ವರ್ಷಗಳ ನಂತರ 4 ಮಹಿಳಾ ಅಧಿಕಾರಿಗಳನ್ನು ಯುದ್ಧನೌಕೆಗಳಲ್ಲಿ ನಿಯೋಜನೆಗೊಂಡರು.
ಮೇ 2021 ರಲ್ಲಿ, ಸೈನ್ಯವು ಮಹಿಳೆಯರು ಮಿಲಿಟರಿ ಪೊಲೀಸ್ ಕಾರ್ಪ್ಸ್ಗೆ ಸೇರಿದರು. ಅವರು ಮೊದಲ ಬಾರಿಗೆ ಅಧಿಕಾರಿಯೇತರ ಕೇಡರ್ನಲ್ಲಿ ಮಿಲಿಟರಿಗೆ ಸೇರ್ಪಡೆಗೊಂಡರು.
1990 ರ ದಶಕದ ಆರಂಭದಿಂದಲೂ ಮೂರು ಸೇನೆಗಳ ಆಯ್ದ ಶಾಖೆಗಳಲ್ಲಿ ಮಹಿಳೆಯರು ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1992 ರಲ್ಲಿ ಮೊದಲ ಬಾರಿಗೆ ವೈದ್ಯಕೀಯ ಸ್ಟ್ರೀಮ್ನಲ್ಲಿ ಮಹಿಳೆಯರು ಸೇರ್ಪಡೆಗೊಂಡರು. ಆದರೆ, ಪದಾತಿಸೈನ್ಯದ ಟ್ಯಾಂಕ್ಗಳು ಮತ್ತು ಯುದ್ಧ ಸ್ಥಾನಗಳು ಇನ್ನೂ ಮಹಿಳೆಯರಿಗೆ ನಿಷೇಧಿತ ವಲಯಗಳಾಗಿವೆ.