3 ಮಕ್ಕಳ ತಾಯಿ ಇದೀಗ ಜಮ್ಮು ಮತ್ತು ಕಾಶ್ಮೀರದ ಮೊದಲ ಮಹಿಳಾ ಇ-ರಿಕ್ಷಾ ಚಾಲಕಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹಿಣಿಯೊಬ್ಬರು ಇ-ರಿಕ್ಷಾ ಓಡಿಸಿದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂವರು ಮಕ್ಕಳ ತಾಯಿಯಾಗಿರುವ ಸೀಮಾ ದೇವಿ ಕಳೆದ ನಾಲ್ಕು ತಿಂಗಳಿಂದ ನಗ್ರೋಟಾ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಇ-ರಿಕ್ಷಾ ಓಡಿಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇ-ರಿಕ್ಷಾ ಓಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಸೀಮಾ
ಜಮ್ಮು ಮತ್ತು ಕಾಶ್ಮೀರದಲ್ಲಿ ಇ-ರಿಕ್ಷಾ ಓಡಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಸೀಮಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗೃಹಿಣಿಯೊಬ್ಬರು ಇ-ರಿಕ್ಷಾ ಓಡಿಸಿದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂವರು ಮಕ್ಕಳ ತಾಯಿಯಾಗಿರುವ ಸೀಮಾ ದೇವಿ ಕಳೆದ ನಾಲ್ಕು ತಿಂಗಳಿಂದ ನಗ್ರೋಟಾ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಇ-ರಿಕ್ಷಾ ಓಡಿಸುತ್ತಿದ್ದಾರೆ.

ನನ್ನ ಗಂಡನ ಸಂಪಾದನೆ ಸಾಕಾಗದ ಕಾರಣ ನಾನು ಈ ಕೆಲಸವನ್ನು ಕೈಗೆತ್ತಿಕೊಂಡೆ. ಸಾಕಷ್ಟು ಹಣದುಬ್ಬರವಿದೆ ಮತ್ತು ನಾನು ನನ್ನ ಪತಿಯನ್ನು ಬೆಂಬಲಿಸಲು ಬಯಸುತ್ತೇನೆ. ಇದರಿಂದ ನಾವು ನಮ್ಮ ಕುಟುಂಬಕ್ಕೆ ಉತ್ತಮವಾದ ಜೀವನವನ್ನು ಮತ್ತು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬಹುದು' ಎಂದು ಹೇಳುತ್ತಾರೆ.

40 ವರ್ಷದ ಆಸುಪಾಸಿನಲ್ಲಿರುವ ಸೀಮಾ ಅವರಿಗೆ 15 ವರ್ಷದ ಮಗ ಮತ್ತು 14 ಮತ್ತು 12 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಟಿಎನ್ಐಇ ಜೊತೆ ಮಾತನಾಡಿದ ಸೀಮಾ, 'ಕುಟುಂಬವನ್ನು ಪೋಷಿಸಲು ಬೇರೆ ಕೆಲಸ ಸಿಗದ ಕಾರಣ ಇ-ರಿಕ್ಷಾ ಓಡಿಸಲು ಮುಂದಾದೆ. ನಾನು ಮತ್ತು ನನ್ನ ಪತಿ ರೂ 30,000 ಸಾಲವನ್ನು ತೆಗೆದುಕೊಂಡಿದ್ದೇವೆ ಮತ್ತು 3,000 ರೂ. ಇಎಂಐ ಮೂಲಕ ಇ-ರಿಕ್ಷಾವನ್ನು ಖರೀದಿಸಿದ್ದೇವೆ. ನನ್ನ ಪತಿ ನನಗೆ ಇ-ರಿಕ್ಷಾವನ್ನು ಹೇಗೆ ಓಡಿಸಬೇಕೆಂದು ಕಲಿಸಿದರು ಮತ್ತು ನಾನು ಅದನ್ನು ತ್ವರಿತವಾಗಿ ಕಲಿತಿದ್ದೇನೆ' ಎಂದು ಅವರು ಹೇಳಿದರು.

'ಮಹಿಳೆಯರು ರೈಲುಗಳು ಮತ್ತು ವಿಮಾನಗಳನ್ನು ಓಡಿಸಲು ಸಾಧ್ಯವಾದರೆ, ಇ-ರಿಕ್ಷಾವನ್ನು ಏಕೆ ಓಡಿಸಬಾರದು? ಇದು ನನ್ನನ್ನು ಪ್ರೇರೇಪಿಸಿತು ಎನ್ನುವ ಅವರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರಿಂದ ಸ್ಫೂರ್ತಿ ಪಡೆದಿದ್ದಾರೆ. ಅವರ ಕುಟುಂಬ ಬೆಂಬಲ ನೀಡುತ್ತಿದೆಯೇ ಎಂಬ ಪ್ರಶ್ನೆಗೆ, 'ನನ್ನ ಪತಿ ತುಂಬಾ ಬೆಂಬಲ ಮತ್ತು ಸಹಾಯ ಮಾಡುತ್ತಿದ್ದಾರೆ' ಎನ್ನುತ್ತಾರೆ ಸೀಮಾ.
ಮಹಿಳೆಯರು ಸುರಕ್ಷಿತ

‘ನನ್ನ ಇ-ರಿಕ್ಷಾದಲ್ಲಿ ಪ್ರಯಾಣಿಸುವ ಮಹಿಳೆಯರು ಸುರಕ್ಷಿತವಾಗಿರುತ್ತಾರೆ. ಅನೇಕರು ಹುಡುಗಿಯರನ್ನು ಶಾಲೆಗೆ ಬಿಡುತ್ತಾರೆ’ ಎಂದು ನನ್ನನ್ನು ನಂಬುತ್ತಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com