ಬಿಹಾರ: ತನ್ನ ಜೀಬಿನಿಂದ ಹಣ ನೀಡಿ ವೃದ್ಧರೊಬ್ಬರ ಬಾಕಿ ಸಾಲ ತೀರಿಸಿದ ಜಿಲ್ಲಾ ನ್ಯಾಯಾಧೀಶ!

ಬಿಹಾರದ ಜಿಲ್ಲಾ ನ್ಯಾಯಾಧೀಶರೊಬ್ಬರು, ವಯೋವೃದ್ಧರೊಬ್ಬರ ದುಸ್ಥಿತಿ ಕಂಡು ಮರುಗಿದ್ದು, ಅವರ ಬಾಕಿ ಸಾಲವನ್ನು ತೀರಿಸಿದ್ದಾರೆ. ಕೇಂದ್ರ ಬಿಹಾರದ ಜೆಹಾನಾಬಾದ್ ನಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಈ ಮಾನವೀಯ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ಬಿಹಾರದ ಜಿಲ್ಲಾ ನ್ಯಾಯಾಧೀಶರೊಬ್ಬರು, ವಯೋವೃದ್ಧರೊಬ್ಬರ ದುಸ್ಥಿತಿ ಕಂಡು ಮರುಗಿದ್ದು, ಅವರ ಬಾಕಿ ಸಾಲವನ್ನು ತೀರಿಸಿದ್ದಾರೆ. ಕೇಂದ್ರ ಬಿಹಾರದ ಜೆಹಾನಾಬಾದ್ ನಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಈ ಮಾನವೀಯ ಘಟನೆ ನಡೆದಿದೆ.

ರೂ. 18,000 ಮೊತ್ತದ ಬ್ಯಾಂಕ್ ಸಾಲ ಪಾವತಿಯಲ್ಲಿ ವಿಳಂಬ ವಿಚಾರ ಇತ್ಯರ್ಥಕ್ಕಾಗಿ ರಾಜೀಂದ್ರ ಚೌಹಾನ್ ಲೋಕ ಅದಾಲತ್ ಗೆ ತೆರಳಿದ್ದರು. ಅವರು ಮನೆಯಿಂದ ತೆರಳಿದಾಗ ಅವರ ಬಳಿ ಕೇವಲ ರೂ. 5,000 ಮಾತ್ರ ಇತ್ತು. ಅವರೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬರ ಬಳಿ ರೂ. 3,000 ಇತ್ತು.

ಆದಾಗ್ಯೂ, ಅವರಿಗೆ 10,000 ರೂ. ಕೊರತೆ ಇತ್ತು. ವಯೋವೃದ್ಧರ ಈ ದುಸ್ಥಿತಿ ಗಮನಿಸಿದ ಜಿಲ್ಲಾ ನ್ಯಾಯಾಧೀಶ ರಾಕೇಶ್ ಕುಮಾರ್ ಸಿಂಗ್ ಕೂಡಲೇ ತನ್ನ ಜೀಬಿನಿಂದ ರೂ. 10,000 ಎತ್ತಿಕೊಡುವ ಮೂಲಕ ಬಾಕಿಯನ್ನು ಪೂರ್ಣಗೊಳಿಸಿದ್ದಾರೆ. ನ್ಯಾಯಾಧೀಶರು ದೇವರ ರೀತಿಯಲ್ಲಿ ಬಂದು ನನನ್ನು ಕಾಪಾಡಿದರು ಎಂದು ಚೌಹಾನ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿಕೊಂಡಿದ್ದಾರೆ ಕೊಂಡಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com