ಧಾರವಾಡ: ವರ್ಷದಲ್ಲಿ 3 ದಿನ ಮಾತ್ರ ಈ ದೇವಾಲಯ ಓಪನ್!

ದೇವಸ್ಥಾನ ಅಂದ್ರೆ ಅಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ, ಭಕ್ತರಿಗೆ ದರ್ಶನ, ಇನ್ನೂ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತದೆ. ಆದರೆ ವರ್ಷವಿಡೀ ದೇವಸ್ಥಾನದ ಬಾಗಿಲು ಮುಚ್ಚಿ ವರ್ಷದಲ್ಲಿ ಕೇವಲ 3 ದಿನ ಮಾತ್ರ ಭಕ್ತರಿಗೆ ದರ್ಶನ ಕೊಡುವ ದೇವಾಲಯದ ಬಗ್ಗೆ ಎಲ್ಲಾದ್ರೂ ಕೇಳಿದ್ದೀರಾ?
ಹೊಳಮ್ಮಾ ದೇವಿ ದೇವಾಲಯ
ಹೊಳಮ್ಮಾ ದೇವಿ ದೇವಾಲಯ

ಧಾರವಾಡ: ದೇವಸ್ಥಾನ ಅಂದ್ರೆ ಅಲ್ಲಿ ಪ್ರತಿನಿತ್ಯ ತ್ರಿಕಾಲ ಪೂಜೆ, ಭಕ್ತರಿಗೆ ದರ್ಶನ, ಇನ್ನೂ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತದೆ. ಆದರೆ ವರ್ಷವಿಡೀ ದೇವಸ್ಥಾನದ ಬಾಗಿಲು ಮುಚ್ಚಿ ವರ್ಷದಲ್ಲಿ ಕೇವಲ 3 ದಿನ ಮಾತ್ರ ಭಕ್ತರಿಗೆ ದರ್ಶನ ಕೊಡುವ ದೇವಾಲಯದ ಬಗ್ಗೆ ಎಲ್ಲಾದ್ರೂ ಕೇಳಿದ್ದೀರಾ? ಹೌದು ಧಾರವಾಡದ ತಬಕದಹೊನ್ನಳ್ಳಿಯಲ್ಲಿರುವ ದೇವಸ್ಥಾನವು ದೀಪಾವಳಿ ಸಂದರ್ಭದಲ್ಲಿ ವರ್ಷದಲ್ಲಿ ಮೂರು ದಿನ ಮಾತ್ರ ಭಕ್ತರಿಗಾಗಿ ತೆರೆದಿರುತ್ತದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ತಬಕದಹೊನ್ನಳ್ಳಿಯಲ್ಲಿರುವ ಹೊಳಮ್ಮಾ ದೇವಿ ದೇವಾಲಯವನ್ನು ಮೂರು ದಿನಗಳ ಕಾಲ ತೆರೆಯಲಾಗಿರುತ್ತದೆ. ವರ್ಷದಲ್ಲಿ 3 ದಿನ ತೆರೆಯುವ ಹಿನ್ನೆಲೆಯಲ್ಲಿ ದೇವಿಯ ದರ್ಶನ ಪಡೆದುಕೊಳ್ಳಲು ವಿವಿಧೆಡೆಗಳಿಂದ ಭಕ್ತ ಸಾಗರವೇ ದೇವಾಲಯಕ್ಕೆ ಹರಿದು ಬರುತ್ತದೆ. 

ದೇವಿಯ ದರ್ಶನ ಪಡೆಯಲು ಬರುವ ಭಕ್ತರು ಹೊಸ ದೀಪಗಳ ಬದಲಿಗೆ ವರ್ಷಾನುಗಟ್ಟಲೆ ಇಟ್ಟುಕೊಂಡು ಬಂದಿರುವ ದೀಪಗಳನ್ನು ಬೆಳಗಿಸುತ್ತಾರೆ. 

ಈ ದೇವಾಲಯದ ಬಗ್ಗೆ ಗ್ರಾಮಸ್ಥರು ವಿಭಿನ್ನ ಕಥೆಗಳನ್ನು ಹೇಳುತ್ತಾರೆ. ದೇವಿಯನ್ನು ಆರಾಧಿಸುವವರ ಇಚ್ಛೆಯನ್ನು ದೇವಿ ಈಡೇರಿಸುತ್ತಾಳೆಂಬ ನಂಬಿಕೆಯಿದೆ. ಮಕ್ಕಳನ್ನು ಕರುಣಿಸುವ ದೇವಿಯೆಂದೂ ಕೂಡ ಕರೆಯಲಾಗುತ್ತದೆ. ಈ ದೇವಾಲಯವು ಕಳೆದ ಹಲವು ಶತಮಾನಗಳಿಂದ ಅಸ್ತಿತ್ವದಲ್ಲಿದೆ ಎಂದು ಹಲವರು ಹೇಳಿದ್ದಾರೆ. ಆದರೆ, ಇತಿಹಾಸದ ಬಗ್ಗೆ ನಿಖರವಾದ ಮಾಹಿತಿಗಳು ತಿಳಿದುಬಂದಿಲ್ಲ.

ಇಲ್ಲಿ ಕೆಲವು ವಿಶಿಷ್ಟ ಆಚರಣೆಗಳಿವೆ. ಭಕ್ತನೊಮ್ಮೆ ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿದರೆ ಮತ್ತು ಅವನ ಅಥವಾ ಅವಳ ಇಷ್ಟಾರ್ಥಗಳು ಈಡೇರಿದರೆ, ಹೊತ್ತೂಕೊಂಡ ಹರಕೆಯನ್ನು ಈ ವಿಶೇಷ ಮೂರು ದಿನಗಳಲ್ಲಿ ಕಡ್ಡಾಯವಾಗಿ ತೀರಿಸಬೇಕೆಂಬ ನಿಯಮವಿದೆ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

"ನಾವು ಕಳೆದ ಮೂರು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇವೆ. ಇಲ್ಲಿಗೆ ಬಂದ ನಂತರ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇವೆ. ನಮ್ಮ ಆಸೆಗಳು ಈಡೇರಿವೆ. ಬಂಜೆತನದಿಂದ ಬಳಲುತ್ತಿರುವ ಬಹುಪಾಲು ಜನರು ಇಲ್ಲಿಗೆ ಬಂದ ನಂತರ ಉತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ ಎಂದು ಭಕ್ತರೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com