ಹುಲಿ ಮುಖದ ಈ ವಿಶೇಷ ಜೆಟ್ ನಲ್ಲಿ ಭಾರತಕ್ಕೆ ಬರಲಿವೆ 8 ಚೀತಾಗಳು!
ನಮಿಬಿಯಾ ರಾಜಧಾನಿ ವಿಂಡ್ಹೋಕ್ ನಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಿ747 ಜಂಬೋ ಜೆಟ್ ನಿಂದ 8 ಚೀತಾಗಳನ್ನು ಭಾರತದ ಮಧ್ಯಪ್ರದೇಶದ ಕುನೊ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗುತ್ತಿದೆ.
Published: 15th September 2022 09:19 PM | Last Updated: 16th September 2022 08:29 PM | A+A A-

ವಿಶೇಷ ಜೆಟ್
ನವದೆಹಲಿ: ನಮಿಬಿಯಾ ರಾಜಧಾನಿ ವಿಂಡ್ಹೋಕ್ ನಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಿ747 ಜಂಬೋ ಜೆಟ್ ನಿಂದ 8 ಚೀತಾಗಳನ್ನು ಭಾರತದ ಮಧ್ಯಪ್ರದೇಶದ ಕುನೊ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗುತ್ತಿದೆ.
ಈ ವಿಶೇಷ ವಿಮಾನ ವಿಂಡ್ಹೋಕ್ ನಲ್ಲಿ ಬುಧವಾರ ಲ್ಯಾಂಡ್ ಆಗುತ್ತಿದ್ದಂತೆಯೇ ಅಲ್ಲಿರುವ ಭಾರತದ ಹೈ ಕಮೀಷನ್ ಟ್ವೀಟ್ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ. ಐದು ಹೆಣ್ಣು ಮತ್ತು ಮೂರು ಗಂಡು ಚೀತಾ ಸೇರಿದಂತೆ ಒಟ್ಟು ಎಂಟು ಚೀತಾಗಳನ್ನು ಸೆಪ್ಟೆಂಬರ್ 17 ರಂದು ರಾಜಸ್ಥಾನದ ಜೈಪುರಕ್ಕೆ ಕಾರ್ಗೋ ವಿಮಾನದಲ್ಲಿ ಕರೆತರಲಾಗುತ್ತದೆ. ನಂತರ ಜೈಪುರದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಹೆಲಿಕಾಪ್ಟರ್ ನಲ್ಲಿ ಅವುಗಳನ್ನು ಕರೆದೊಯ್ಯಲಾಗುತ್ತದೆ.
A special bird touches down in the Land of the Brave to carry goodwill ambassadors to the Land of the Tiger.#AmritMahotsav #IndiaNamibia pic.twitter.com/vmV0ffBncO
— India In Namibia (@IndiainNamibia) September 14, 2022
ಸೆಪ್ಟೆಂಬರ್ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಹುಟ್ಟಹುಬ್ಬದ ಸಂದರ್ಭದಲ್ಲಿ ಈ ಚೀತಾಗಳನ್ನು ಪರಿಚಯಿಸಲಿದ್ದಾರೆ. ಭಾರತಕ್ಕೆ ಚೀತಾಗಳನ್ನು ಕರೆತರುತ್ತಿರುವ ಜೆಟ್ ಗೆ ಹುಲಿಯ ಬಣ್ಣದೊಂದಿಗೆ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಈ ಜೆಟ್ 16 ಗಂಟೆಗಳವರೆಗೆ ಹಾರಾಟ ನಡೆಸುವ ಸಾಮರ್ಥ್ಯವಿರುವ ಅಲ್ಟ್ರಾ-ಲಾಂಗ್ ರೇಂಜ್ ಜೆಟ್ ಆಗಿದ್ದು, ನಮೀಬಿಯಾದಿಂದ ನೇರವಾಗಿ ಭಾರತಕ್ಕೆ ಬರುತ್ತಿದೆ. ಚಿರತೆಗಳು ವಾಯು ಸಾರಿಗೆ ಅವಧಿಯಲ್ಲಿ ಖಾಲಿ ಹೊಟ್ಟೆಯಲ್ಲಿ ಇರಬೇಕಾಗುತ್ತದೆ ಎಂದು ಭಾರತೀಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.