ದೆಹಲಿ: 16 ತಿಂಗಳ ಮಗು ಸಾವು; ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು
ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 16 ತಿಂಗಳ ಪುಟ್ಟ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಆದರೆ ಪೋಷಕರು ತಮ್ಮ ಮಗುವಿನ ಅಂಗಾಂಗ ದಾನ ಮಾಡುವ ಮೂಲಕ ಇಬ್ಬರು ಮಕ್ಕಳ ಜೀವ ಉಳಿಸಿ ಸಾರ್ಥಕತೆ ಮೆರೆದಿದ್ದಾರೆ.
Published: 16th September 2022 04:44 PM | Last Updated: 16th September 2022 05:33 PM | A+A A-

ಮಗುವಿನೊಂದಿಗೆ ಪೋಷಕರು
ನವದೆಹಲಿ: ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 16 ತಿಂಗಳ ಪುಟ್ಟ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಆದರೆ ಪೋಷಕರು ತಮ್ಮ ಮಗುವಿನ ಅಂಗಾಂಗ ದಾನ ಮಾಡುವ ಮೂಲಕ ಇಬ್ಬರು ಮಕ್ಕಳ ಜೀವ ಉಳಿಸಿ ಸಾರ್ಥಕತೆ ಮೆರೆದಿದ್ದಾರೆ.
ಅಗಸ್ಟ್ 17 ರಂದು ಗಾಯಗೊಂಡಿದ್ದ 16 ತಿಂಗಳ ಮಗು ರಿಶಾಂತ್ ನನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಗಸ್ಟ್ 25 ರಂದು ವೈದ್ಯರು ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದರು. ಪೋಷಕರು ಮಗುವಿನ ಮೂತ್ರಪಿಂಡ ಮತ್ತು ಯಕೃತ್ತನ್ನು ಇತರ ಎರಡು ಮಕ್ಕಳಿಗೆ ದಾನ ಮಾಡಿದ್ದಾರೆ. ಆದರೆ ಮಗುವಿನ ಹೃದಯದ ಕವಾಟಗಳು ಮತ್ತು ಕಾರ್ನಿಯಾಗಳನ್ನು ಅಂಗ ಬ್ಯಾಂಕ್‌ನಲ್ಲಿ ಸಂರಕ್ಷಿಸಲಾಗಿದೆ. ಅದೇ ದಿನ ಆತನ ಅಂಗಾಂಗಗಳನ್ನು ಕಸಿ ಮಾಡಲಾಯಿತು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ನಂತರ ಡಯಾಲಿಸಿಸ್‌ಗೆ ಒಳಗಾಗಿದ್ದ 5 ವರ್ಷದ ಬಾಲಕನಿಗೆ ಮೂತ್ರಪಿಂಡಗಳನ್ನು ನೀಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನು ಓದಿ: ಬ್ರೈನ್ ಸ್ಟ್ರೋಕ್ ನಿಂದ ಮೃತಪಟ್ಟ ಮಹಿಳೆ: 8 ಜನರ ಬಾಳಿಗೆ ಬೆಳಕಾದ ಅಂಗಾಂಗ ದಾನ
ಈ ಮಗು ಏಮ್ಸ್ ನಲ್ಲಿ ಇದುವರೆಗೆ ಅಂಗಾಂಗ ದಾನ ಮಾಡಿದ ಅತಿ ಕಿರಿಯ ದಾನಿಯಾಗಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಈ ಮಗು ಎಂಟು ದಿನಗಳ ಕಾಲ ಜೀವನ್ಮರಣದ ಸ್ಥಿತಿಯಲ್ಲಿ ಹೋರಾಡಿತು. ತಲೆಗೆ ವಿಪರೀತ ಏಟಾಗಿತ್ತು. ಇಡೀ ಮಿದುಳಿಗೆ ಸರಿಪಡಿಸಲಾರದಷ್ಟು ಹಾನಿಯಾಗಿರುವುದು ಸಿಟಿ ಸ್ಕ್ಯಾನ್‌ನಿಂದ ತಿಳಿದುಬಂದಿತ್ತು. ಆ ಮಗು ದಾನ ಮಾಡುವುದಕ್ಕಾಗಿಯೇ ಹುಟ್ಟಿತ್ತೇನೋ ಎಂದು ಏಮ್ಸ್‌ನ ನ್ಯೂರೋಸರ್ಜರಿ ವಿಭಾಗದ ಪ್ರಾಧ್ಯಾಪಕ ದೀಪಕ್ ಗುಪ್ತ ಅವರು ಹೇಳಿದ್ದಾರೆ.