ಸ್ವಾತಂತ್ರ್ಯ ದಿನಾಚರಣೆ 2023: ಭಾರತದ ಸ್ವಾತಂತ್ರ್ಯವನ್ನು ಗುರುತಿಸುವ ದಿನದ ಬಗ್ಗೆ ನೀವು ತಿಳಿಯಲೇ ಬೇಕಾದ ಅಂಶಗಳು
ಇಂದು ದೇಶಾದ್ಯಂತ ಎಪ್ಪತ್ತೇಳನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು, ಭಾರತದ ಸ್ವಾತಂತ್ರ್ಯವನ್ನು ಗುರುತಿಸುವ ದಿನದ ಬಗ್ಗೆ ನೀವು ತಿಳಿಯಲೇ ಬೇಕಾದ ಅಂಶಗಳು ಇಲ್ಲಿವೆ.
Published: 15th August 2023 06:17 PM | Last Updated: 16th August 2023 02:17 PM | A+A A-

ಸಂಗ್ರಹ ಚಿತ್ರ
ಇಂದು ದೇಶಾದ್ಯಂತ ಎಪ್ಪತ್ತೇಳನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು, ಭಾರತದ ಸ್ವಾತಂತ್ರ್ಯವನ್ನು ಗುರುತಿಸುವ ದಿನದ ಬಗ್ಗೆ ನೀವು ತಿಳಿಯಲೇ ಬೇಕಾದ ಅಂಶಗಳು ಇಲ್ಲಿವೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಷ್ಟ್ರಗೀತೆಯೇ ಇರಲಿಲ್ಲ
15 ಆಗಸ್ಟ್ 1947ರಂದು, ಸ್ವಾತಂತ್ರ್ಯಕ್ಕಾಗಿ ಸುದೀರ್ಘ ಹೋರಾಟದ ನಂತರ ಭಾರತವು ಅಂತಿಮವಾಗಿ ಸ್ವಾತಂತ್ರ್ಯವನ್ನು ಸಾಧಿಸಿತು. ಬ್ರಿಟೀಷ್ ಸಾಮ್ರಾಜ್ಯಶಾಹಿ ದಬ್ಬಾಳಿಕೆಯ ಅಂತ್ಯವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಅಚರಿಸಲಾಯಿತು. ನಿರ್ಣಾಯಕ ಸ್ವಾತಂತ್ರ್ಯದೊಂದಿಗೆ ನಮ್ಮದೇ ಆದ ಗುರುತು ಮತ್ತು ಅಸ್ತಿತ್ವವನ್ನು ರೂಪಿಸುವ ಅಗತ್ಯವು ಬಂದಿತು. ಇದು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ರಚನೆಯ ಅಗತ್ಯವನ್ನು ಉಂಟುಮಾಡಿತು. ನಮ್ಮದೇ ಆದ ಜನ ಗಣ ಮನ ಅಸ್ತಿತ್ವಕ್ಕೆ ಬಂದಿತು.
ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಬರೆದಿರುವ ಜನಗಣಮನ ಹಾಡು, ಬಹುತ್ವದ ಮನೋಭಾವವನ್ನು ಒತ್ತಿಹೇಳುತ್ತದೆ. ಹೆಚ್ಚು ಸಾಮಾನ್ಯ ಭಾಷೆಯಲ್ಲಿ, ಭಾರತದ ಸಾಂಸ್ಕೃತಿಕ ಪರಂಪರೆಯ ಹೃದಯಭಾಗದಲ್ಲಿರುವ "ವೈವಿಧ್ಯತೆಯಲ್ಲಿ ಏಕತೆ" ಎಂಬ ಕಲ್ಪನೆಯನ್ನು ಒತ್ತಿಹೇಳುತ್ತದೆ. ಶತಕೋಟಿ ಭಾರತೀಯರಿಗೆ ಇದು ಕೇವಲ ಗೀತೆಗಿಂತ ಹೆಚ್ಚು. ಇದು ಭಾರತದ ಇತಿಹಾಸ, ಸಂಪ್ರದಾಯಗಳು ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಸೆರೆಹಿಡಿಯುವ ಭಾವನೆ ಮತ್ತು ಗುರುತಿನ ಅಭಿವ್ಯಕ್ತಿಯಾಗಿದೆ.
ಮೊದಲ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಾತ್ಮ ಗಾಂಧಿ ಇರಲಿಲ್ಲ
ದೆಹಲಿಯಲ್ಲಿ ನಡೆದ ಮೊದಲ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಾತ್ಮ ಗಾಂಧಿ ಭಾಗವಹಿಸಿರಲಿಲ್ಲ. ಈ ದಿನಾಂಕದಂದು, ಜವಾಹರಲಾಲ್ ನೆಹರು ಅವರು ಸ್ವತಂತ್ರ್ಯ ಭಾರತದಲ್ಲಿ ತಮ್ಮ ಮೊದಲ ಸಾರ್ವಜನಿಕ ಭಾಷಣವನ್ನು ಮಾಡಿದರು. ಆದಾಗ್ಯೂ, ಆ ನಿರ್ದಿಷ್ಟ ದಿನದಂದು ಮಹಾತ್ಮ ಗಾಂಧಿ ಗೈರಾಗಿದ್ದರು. ಅಂದು ದೇಶ ವಿಭಜನೆಯ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಹಿಂಸಾಚಾರವನ್ನು ನಿಲ್ಲಿಸಲು ಗಾಂಧೀಜಿ ಪಶ್ಚಿಮಬಂಗಾಳದ ಕೋಲ್ಕತಾದಲ್ಲಿ ಉಪವಾಸ ಮಾಡುತ್ತಿದ್ದರು.
1947ರಲ್ಲೇ ಸ್ವಾತಂತ್ರ್ಯ ಸಿಕ್ಕರೂ ಬ್ರಿಟೀಷರಿಂದ ಅಧಿಕಾರ ವರ್ಗಾವಣೆ ಮಾತ್ರ 1948ರಲ್ಲಿ
ಭಾರತಕ್ಕೆ ಬ್ರಿಟೀಷರು ಸ್ವಾತಂತ್ರ್ಯ ಘೋಷಣೆ ಮಾಡಿದರೂ ಅಧಿಕಾರ ವರ್ಗಾವಣೆಯಾಗಿದ್ದು ಮಾತ್ರ 1948ರ ಜೂನ್ 30ರಂದು. ಜೂನ್ 30, 1948ರೊಳಗೆ ಅಧಿಕಾರವನ್ನು ವರ್ಗಾಯಿಸಲು ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೆ ಬ್ರಿಟಿಷ್ ಸಂಸತ್ತು ಆದೇಶ ನೀಡಿತ್ತು. ಜುಲೈ 1945ರಲ್ಲಿ ಲೇಬರ್ ಪಾರ್ಟಿಯ ಕ್ಲೆಮೆಂಟ್ ಅಟ್ಲೀ ಹೊಸ ಬ್ರಿಟಿಷ್ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದರು.
ಬ್ರಿಟಿಷ್ ಸಂಸತ್ತು ಜೂನ್ 30 1948ರಂದು ಬ್ರಿಟನ್ ಸ್ವತಂತ್ರ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸಲು ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಅಟ್ಲಿ ಅಧಿಕಾರ ವಹಿಸಿಕೊಂಡಾಗ, ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಿರ್ಧರಿಸಿದರು.
ಇದನ್ನೂ ಓದಿ: ದೇಶದ ಜನರನ್ನು 'ಪರಿವಾರಜನ್' ಎನ್ನುವ ಮೂಲಕ ಸ್ವಾತಂತ್ರ್ಯೋತ್ಸವದ ಭಾಷಣ ಆರಂಭಿಸಿದ ಪ್ರಧಾನಿ
ಹಿಂದಿ ಅಧಿಕೃತ ಭಾಷೆಯಾಗಿ ಸ್ವೀಕಾರ
ಸೆಪ್ಟೆಂಬರ್ 14, 1949ರಂದು ಹಿಂದಿಯನ್ನು ಭಾರತದ ಒಕ್ಕೂಟದ ಅಧಿಕೃತ ಭಾಷೆಯಾಗಿ ಸ್ವೀಕರಿಸಲಾಯಿತು. ನಂತರ 1950ರಲ್ಲಿ, ಭಾರತದ ಸಂವಿಧಾನವು ದೇವನಾಗರಿ ಲಿಪಿಯಲ್ಲಿರುವ ಹಿಂದಿಯನ್ನು ಭಾರತದ ಅಧಿಕೃತ ಭಾಷೆ ಎಂದು ಘೋಷಿಸಿತು. ಹಿಂದಿಯನ್ನು ಹೊರತುಪಡಿಸಿ, ಇಂಗ್ಲಿಷ್ ಅನ್ನು ಭಾರತದ ಅಧಿಕೃತ ಭಾಷೆಯಾಗಿ ಗುರುತಿಸಲಾಗಿದೆ. ಭಾರತದ ವಿವಿಧ ರಾಜ್ಯಗಳು ಶಾಸನದ ಮೂಲಕ ತಮ್ಮದೇ ಆದ ಅಧಿಕೃತ ಭಾಷೆಗಳನ್ನು ಗುರುತಿಸಿವೆ.
ಭಾರತೀಯ ಸ್ವಾತಂತ್ರ್ಯ ಮಸೂದೆಯು ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಸ್ವಾತಂತ್ರ್ಯದ ದಿನಾಂಕವಾಗಿ ಆಗಸ್ಟ್ 15 ಅನ್ನು ನೀಡಿತು. ಭಾರತದ ಮೊದಲ ಅನಧಿಕೃತ ಧ್ವಜವನ್ನು ಆಗಸ್ಟ್ 7, 1906 ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಗಿತ್ತು. ವಂದೇ ಮಾತರಂ, ಭಾರತದ ರಾಷ್ಟ್ರೀಯ ಗೀತೆಯನ್ನು ಬಂಕಿಮ್ ಚಂದ್ರ ಚಟರ್ಜಿಯವರು ಸಂಯೋಜಿಸಿದ್ದು, ಇದು 1982ರಲ್ಲಿ ಅವರು ರಚಿಸಿದ್ದ ಕಾದಂಬರಿ ಆನಂದಮಠದ ಭಾಗವಾಗಿತ್ತು.