ಸ್ಪಾ, ಜಿಮ್, ಶಬ್ದಮಾಲೀನ್ಯ ನಿಯಂತ್ರಕ ತಂತ್ರಜ್ಞಾನ: ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ನ ವಿಶೇಷತೆಗಳು!

ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸ್ ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದು, ಈ ಕ್ರೂಸ್ ನ ವಿಶೇಷತೆಗಳು ಇಲ್ಲಿವೆ.
ಎಂವಿ ಗಂಗಾ ವಿಲಾಸ್
ಎಂವಿ ಗಂಗಾ ವಿಲಾಸ್

ವಾರಣಾಸಿ: ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸ್ ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದು, ಈ ಕ್ರೂಸ್ ನ ವಿಶೇಷತೆಗಳು ಇಲ್ಲಿವೆ.

ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸ್ ಎಂದೇ ಹೇಳಲಾಗುತ್ತಿರುವ ಎಂವಿ ಗಂಗಾ ವಿಲಾಸ್ ಕ್ರೂಸ್ 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ. ಈ ಕ್ರೂಸ್‌ನಲ್ಲಿ ಸ್ಪಾ, ಸಲೂನ್ ಮತ್ತು ಜಿಮ್‌ನಂತಹ ಸೌಲಭ್ಯಗಳನ್ನು ಸಹ ಅಳವಡಿಸಲಾಗಿದ್ದು, ಈ ಪಂಚತಾರಾ ಚಲಿಸುವ ಹೋಟೆಲ್ 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನು ಹೊಂದಿದೆ. ಇದಲ್ಲದೆ, ಇದು 40 ಸಿಬ್ಬಂದಿಗೆ ವಸತಿ ಹೊಂದಿದೆ. 

ವಾರಾಣಸಿಯಿಂದ ತನ್ನ ಯಾತ್ರೆಯನ್ನು ಆರಂಭಿಸುವ ‘ಎಂವಿ ಗಂಗಾ ವಿಲಾಸ್’, ಬಾಂಗ್ಲಾದೇಶದ ಮೂಲಕ ಸಾಗಿ 51 ದಿನಗಳ ಬಳಿಕ ಅಸ್ಸಾಂನ ದಿಬ್ರೂಗಢ ತಲುಪಲಿದೆ. ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಢಾಕಾ ತಲುಪಲಿರುವ ಕ್ರೂಸ್‌ ಒಟ್ಟು 3,200 ಕಿ.ಮೀಗಳನ್ನು ಕ್ರಮಿಸಲಿದೆ. ಮಾರ್ಗ ಮಧ್ಯೆ, ಪಾರಂಪರಿಕ ಸ್ಥಳಗಳು, ರಾಷ್ಟ್ರೀಯ ಉದ್ಯಾನಗಳು, ಘಾಟ್‌ಗಳು ಹಾಗೂ ಪ್ರಮುಖ ನಗರಗಳು ಸೇರಿದಂತೆ ಒಟ್ಟು 50 ಪ್ರವಾಸಿ ತಾಣಗಳಿಗೆ ಕ್ರೂಸ್‌ ಭೇಟಿ ನೀಡಲಿದೆ. ಈ ಯಾತ್ರೆಯು ಪ್ರವಾಸಿಗರಿಗೆ ಭಾರತ ಹಾಗೂ ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಹಾಗೂ ಅಧ್ಯಾತ್ಮ ಕುರಿತು ಮಾಹಿತಿ ಒದಗಿಸಲಿದೆ.

ಅಂಟಾರಾ ಕ್ರೂಸಸ್‌ ಸಂಸ್ಥೆ ‘ಎಂವಿ ಗಂಗಾ ವಿಲಾಸ್’ ಕ್ರೂಸ್‌ ಅನ್ನು ನಿರ್ವಹಿಸುತ್ತದೆ. ಮೂರು ಡೆಕ್‌ಗಳನ್ನು ಹೊಂದಿರುವ ಹಡಗು 62 ಮೀಟರ್ ಉದ್ದ, 12 ಮೀಟರ್‌ ಆಗಲವಿದೆ. ತನ್ನ ಯಾನದಲ್ಲಿ ಕ್ರೂಸ್ ಒಟ್ಟು 27 ನದಿ ವ್ಯವಸ್ಥೆಗಳನ್ನು ದಾಟಲಿದೆ. ಎಲ್ಲಾ ಬಗೆಯ ಐಷಾರಾಮಿ ಸೌಕರ್ಯಗಳನ್ನು ಹೊಂದಿರುವ ಕ್ರೂಸ್‌, 36 ಪ್ರವಾಸಿಗರ ಸಾಮರ್ಥ್ಯವನ್ನು ಹೊಂದಿದೆ. 18 ಸೂಟ್‌ಗಳನ್ನು ಹೊಂದಿದೆ. ಸೂಟ್‌ಗಳು ಹಿತವಾದ ಒಳಾಂಗಣಗಳನ್ನು ಹೊಂದಿದ್ದು, ಫ್ರೆಂಚ್ ಬಾಲ್ಕನಿಗಳು, ಎಲ್‌ಇಡಿ ಟಿವಿಗಳು, ಸ್ಮೋಕ್ ಡಿಟೆಕ್ಟರ್‌ಗಳು ಮತ್ತು ಐಷಾರಾಮಿ ಬೆಡ್‌ಗಳಂತಹ ಹಲವಾರು ಸೌಕರ್ಯಗಳಿವೆ. ಕ್ರೂಸ್‌ನ ಮುಖ್ಯ ಡೆಕ್‌ನಲ್ಲಿ 40 ಆಸನಗಳ ರೆಸ್ಟೋರೆಂಟ್, ಸ್ಪಾ ಮತ್ತು ಸನ್ ಡೆಕ್ ಅನ್ನು ಒಳಗೊಂಡಿದೆ. ಮೇಲಿನ ಡೆಕ್‌ನಲ್ಲಿ ಬಾರ್ ಕೂಡ ಇದೆ.

ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರು ಇದರ ಮೊದಲ ಪ್ರಯಾಣದ ಲಾಭ ಪಡೆದುಕೊಂಡಿದ್ದಾರೆ. ಕ್ರೂಸ್ ಜನವರಿ 6 ರಂದು ವಾರಣಾಸಿ ತಲುಪಬೇಕಿತ್ತು ಆದರೆ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಜನವರಿ 8 ರಂದು ವಾರಾಣಸಿಯಿಂದ 65 ಕಿಮೀ ದೂರದಲ್ಲಿರುವ ಗಾಜಿಪುರಕ್ಕೆ ಆಗಮಿಸಿದೆ. ಈ ಐಷಾರಾಮಿ ಹಡಗಿನಲ್ಲಿ ಪ್ರವಾಸ ಕೈಗೊಳ್ಳಲು ಪ್ರವಾಸಿಗರು ದಿನವೊಂದಕ್ಕೆ 25,000 ರಿಂದ 50,000 ರೂ ಪಾವತಿಸಬೇಕು. 51 ದಿನಗಳ ಪ್ರಯಾಣದ ಒಟ್ಟು ವೆಚ್ಚ ಪ್ರತಿ ಪ್ರಯಾಣಿಕರಿಗೆ ಸುಮಾರು ₹20 ಲಕ್ಷ ಆಗಲಿದೆ. ಭಾರತೀಯರು ಮತ್ತು ವಿದೇಶಿಯರೆಲ್ಲರಿಗೂ ಒಂದೇ ಬಗೆಯ ಶುಲ್ಕ ವಿಧಿಸಲಾಗುತ್ತದೆ ಎಂದು ಕ್ರೂಸ್‌ನ ನಿರ್ದೇಶಕ ರಾಜ್‌ ಸಿಂಗ್‌ ಹೇಳಿದ್ದಾರೆ.

ಕ್ರೂಸ್‌ನಲ್ಲಿ ಒಳಚರಂಡಿ ಸಂಸ್ಕರಣಾ ಘಟಕವೂ ಇದ್ದು, ಮಲಿನ ನೀರನ್ನು ಸಂಸ್ಕರಿಸಿ ನದಿಗೆ ಬಿಡಲಾಗುತ್ತದೆ ಎಂದು ತಿಳಿದು ಬಂದಿದೆ.

ವಿಶ್ವದ ಅತಿ ಉದ್ದದ ಕ್ರೂಸ್ ಐದು ರಾಜ್ಯಗಳು ಮತ್ತು ಬಾಂಗ್ಲಾದೇಶದ ಮೂಲಕ ಹಾದುಹೋಗುತ್ತದೆ. ಮೇಡ್ ಇನ್ ಇಂಡಿಯನ್ ಕ್ರೂಸ್‌ನಲ್ಲಿ ಪ್ರವಾಸಿಗರಿಗೆ ಸಿಗುವ ಸೌಲಭ್ಯಗಳು ಯಾವುದೇ ಪಂಚತಾರಾ ಹೋಟೆಲ್‌ಗಿಂತ ಕಡಿಮೆಯಿಲ್ಲ. ಈ ಕ್ರೂಸ್‌ನಲ್ಲಿ ಈಜುಕೊಳದಿಂದ ಜಿಮ್‌ವರೆಗೆ ಸೌಲಭ್ಯಗಳು ಲಭ್ಯವಿವೆ. ಪ್ರಯಾಣ ಬೋರ್ ಆಗಬಾರದೆಂದು ಕ್ರೂಸ್ ನಲ್ಲಿ ಹಾಡು-ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಿಮ್ ಇತ್ಯಾದಿ ಸೌಲಭ್ಯವಿರುತ್ತದೆ. ಗಂಗಾ ವಿಲಾಸ್ ಕ್ರೂಸ್ ಉದ್ದ 62.5 ಮೀಟರ್ ಮತ್ತು ಅಗಲ 12.8 ಮೀಟರ್ ಇದೆ. ಇದು ಪ್ರವಾಸಿಗರಿಗೆ ಉಳಿದುಕೊಳ್ಳಲು ಒಟ್ಟು 18 ಸೂಟ್‌ಗಳನ್ನು ಹೊಂದಿದೆ. ಜೊತೆಗೆ 40 ಆಸನಗಳ ರೆಸ್ಟೋರೆಂಟ್, ಸ್ಪಾ ಕೊಠಡಿ ಮತ್ತು 3 ಸನ್​ ಡೆಕ್‌ಗಳಿವೆ. ಅದರೊಂದಿಗೆ ಸಂಗೀತದ ವ್ಯವಸ್ಥೆಯೂ ಇದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com