ಯುಪಿ ಸಂಸ್ಕೃತ ಬೋರ್ಡ್‌ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮುಸ್ಲಿಂ ಬಾಲಕ!

ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಣ ಪರಿಷತ್‌ನ ಉತ್ತರ ಮಾಧ್ಯಮ-II(12 ನೇ ತರಗತಿ) ಮೆರಿಟ್ ಪರೀಕ್ಷೆಯಲ್ಲಿ ಮುಸ್ಲಿಂ ಬಾಲಕ ಇರ್ಫಾನ್, ಶೇ. 82.17 ರಷ್ಟು ಅಂಕ ಗಳಿಸುವ ಮೂಲಕ ಅಗ್ರ ಸ್ಥಾನ ಪಡೆದಿದ್ದು, ತಂದೆ ಸಲಾವುದ್ದೀನ್ ಹೆಮ್ಮೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಖನೌ: ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಣ ಪರಿಷತ್‌ನ ಉತ್ತರ ಮಾಧ್ಯಮ-II(12 ನೇ ತರಗತಿ) ಮೆರಿಟ್ ಪರೀಕ್ಷೆಯಲ್ಲಿ ಮುಸ್ಲಿಂ ಬಾಲಕ ಇರ್ಫಾನ್(17), ಶೇ. 82.17 ರಷ್ಟು ಅಂಕ ಗಳಿಸುವ ಮೂಲಕ ಅಗ್ರ ಸ್ಥಾನ ಪಡೆದಿದ್ದು, ತಂದೆ ಸಲಾವುದ್ದೀನ್ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಉತ್ತರ ಮಾಧ್ಯಮ-II ಮತ್ತು ಪೂರ್ವ ಮಾಧ್ಯಮ-II(Xನೇ ತರಗತಿ) ಪರೀಕ್ಷೆಯ ಫಲಿತಾಂಶಗಳನ್ನು ಬುಧವಾರ ಪ್ರಕಟಿಸಲಾಗಿದೆ. ಫೆಬ್ರವರಿ 23 ರಿಂದ ಮಾರ್ಚ್ 20 ರವರೆಗೆ ಈ ಪರೀಕ್ಷೆಗಳು ನಡೆದಿದ್ದವು.

ಇರ್ಫಾನ್ ಪೂರ್ವ ಯುಪಿಯ ವಾರಣಾಸಿ ಪಕ್ಕದ ಜಿಲ್ಲೆಯ ಚಂದೌಲಿಗೆ ಸೇರಿದ್ದು, ಬಲಿಯಾದ ಗಂಗೋತ್ರಿ ದೇವಿ ವಿದ್ಯಾಲಯದ ಶಿವದಯಾಳ್ ಗುಪ್ತಾ ಮತ್ತು ಪ್ರತಾಪ್‌ಗಢದ ಶ್ರೀ ರಾಮ್ ತಹಲ್ ವಿದ್ಯಾಲಯದ ವಿಕಾಸ್ ಯಾದವ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಪರೀಕ್ಷೆಯಲ್ಲಿ ಕ್ರಮವಾಗಿ ಶೇ. 80.57 ಅಂಕ ಮತ್ತು ಶೇ. 80.35 ಅಂಕಗಳೊಂದಿಗೆ ಎರಡು ಮತ್ತು ಮೂರು ಸ್ಥಾನ ಪಡೆದಿದ್ದಾರೆ.

<strong>ಇರ್ಫಾನ್</strong>
ಇರ್ಫಾನ್

ಚಂದೌಲಿಯ ಶ್ರೀ ಸಂಪೂರ್ಣಾನಂದ ವಿದ್ಯಾಲಯದ ವಿದ್ಯಾರ್ಥಿಯಾಗಿರುವ ಇರ್ಫಾನ್, ಧರ್ಮನಿಷ್ಠ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ತಾನು ಸಂಸ್ಕೃತ ವಿದ್ವಾಂಸನಾಗಲು ಮತ್ತು ಸಂಸ್ಕೃತವನ್ನು ಕಲಿಸಲು ಬಯಸುವುದಾಗಿ ಇರ್ಫಾನ್ ಹೇಳಿದ್ದಾರೆ. 

"XII ಮತ್ತು X ತರಗತಿಯ ವಿದ್ಯಾರ್ಥಿಗಳ ಮೆರಿಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 20 ವಿದ್ಯಾರ್ಥಿಗಳಲ್ಲಿ ಇರ್ಫಾನ್ ಏಕೈಕ ಮುಸ್ಲಿಂ ವಿದ್ಯಾರ್ಥಿ" ಎಂದು ಅವರ ತಂದೆ ಸಲಾವುದ್ದೀನ್ ಹೇಳಿದ್ದಾರೆ.

ಇರ್ಫಾನ್ ಸಂಸ್ಕೃತ ಬೋರ್ಡ್ ನ XII ತರಗತಿ ಪರೀಕ್ಷೆ ಬರೆದ 13,738 ವಿದ್ಯಾರ್ಥಿಗಳನ್ನು ಹಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಅವರ ತಂದೆ ಸಲಾವುದ್ದೀನ್(51) ಪದವೀಧರರಾಗಿದ್ದು, ಜಿಂದಾಸ್‌ಪುರ ಗ್ರಾಮದಲ್ಲಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

“ಇರ್ಫಾನ್ ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿರುವುದು ನನಗೆ ಖುಷಿ ತಂದಿದೆ. ಅವನು ಮೊದಲಿನಿಂದಲೂ ಸಂಸ್ಕೃತದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಮತ್ತು ಅದನ್ನು ಮತ್ತಷ್ಟು ಅಧ್ಯಯನ ಮಾಡಲು ಬಯಸಿದನು. ಅವನು ಸಂಸ್ಕೃತ ತೆಗೆದುಕೊಂಡಿದ್ದರಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ಮುಸ್ಲಿಂ ವಿದ್ಯಾರ್ಥಿಗೆ ಇದು ವಿಭಿನ್ನವಾಗಿದೆ ಎಂದು ನಾನು ಅವನನ್ನು ಪ್ರೋತ್ಸಾಹಿಸಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com