ದೋಷ ಪತ್ತೆ ಮಾಡಿದ ಕೇರಳ ಯುವಕನಿಗೆ ಅಮೆರಿಕಾದ ಸಂಸ್ಥೆಯಿಂದ 25 ಲಕ್ಷ ರೂ. ಬಹುಮಾನ!

ಸೈಬರ್-ಸೆಕ್ಯುರಿಟಿ ಎಕ್ಸ್‌ಪರ್ಟ್ ಅಥವಾ ನೈತಿಕ ಹ್ಯಾಕರ್ ಆಗುವುದು ಆತನ ಕನಸಾಗಿತ್ತು. ಇನ್ು ಮಿಸ್ಟರ್ ರೋಬೋಟ್ ಮತ್ತು ಬ್ಲ್ಯಾಕ್ ಮಿರರ್‌ನಂತಹ ಇಂಗ್ಲಿಷ್ ವೆಬ್ ಸರಣಿಗಳು ಅದನ್ನು ಮುಂದುವರಿಸಲು ಆತನನ್ನು ಪ್ರೇರೇಪಿಸಿತು. 
ಗೋಕುಲ್ ಸುಧಾಕರ್
ಗೋಕುಲ್ ಸುಧಾಕರ್

ಮಲಪ್ಪುರಂ: ಸೈಬರ್-ಸೆಕ್ಯುರಿಟಿ ಎಕ್ಸ್‌ಪರ್ಟ್ ಅಥವಾ ನೈತಿಕ ಹ್ಯಾಕರ್ ಆಗುವುದು ಆತನ ಕನಸಾಗಿತ್ತು. ಇನ್ು ಮಿಸ್ಟರ್ ರೋಬೋಟ್ ಮತ್ತು ಬ್ಲ್ಯಾಕ್ ಮಿರರ್‌ನಂತಹ ಇಂಗ್ಲಿಷ್ ವೆಬ್ ಸರಣಿಗಳು ಅದನ್ನು ಮುಂದುವರಿಸಲು ಆತನನ್ನು ಪ್ರೇರೇಪಿಸಿತು. 

ಪಾಲಕ್ಕಾಡ್‌ನ ಮನ್ನಾರ್ಕ್ಕಾಡ್‌ನ ಇಂಜಿನಿಯರಿಂಗ್ ಪದವೀಧರನಾದ ಗೋಕುಲ್ ಸುಧಾಕರ್ ಎಂಬವರು ಅಮೆರಿಕ ಮೂಲದ ಪ್ರಮುಖ ಹಣಕಾಸು ತಂತ್ರಜ್ಞಾನ ಕಂಪನಿಯ ಆನ್ ಲೈನ್ ಪಾವತಿ ವ್ಯವಸ್ಥೆಯಲ್ಲಿನ ದೋಷವನ್ನು ಪತ್ತೆ ಮಾಡಿದ್ದು ಇದಕ್ಕಾಗಿ ಆತನಿಗೆ ಸಂಸ್ಥೆ ಸುಮಾರು 25 ಲಕ್ಷ ರೂಪಾಯಿ ಬಹುಮಾನ ನೀಡಿದೆ.

ನಾನು ಇತ್ತೀಚೆಗೆ ಕಂಪನಿಯ ಆನ್‌ಲೈನ್ ವ್ಯವಸ್ಥೆಯಲ್ಲಿನ ದೋಷವನ್ನು ಗುರುತಿಸಿದೆ. ಅದಕ್ಕಾಗಿ ನಾನು 30,000 ಡಾಲರ್ ಬಹುಮಾನವನ್ನು ಪಡೆದಿದ್ದೇನೆ. ಕಂಪನಿಯ ಹೆಸರು ಅಥವಾ ಅವರ ವ್ಯವಸ್ಥೆಯಲ್ಲಿನ ದುರ್ಬಲತೆಯನ್ನು ನಾನು ಯಾರಿಗೂ ಬಹಿರಂಗಪಡಿಸುವುದಿಲ್ಲ ಎಂಬ ಷರತ್ತಿನ ಮೇಲೆ ಅವರು ಹಣವನ್ನು ನನ್ನ ಖಾತೆಗೆ ಜಮಾ ಮಾಡಿದ್ದಾರೆ ಎಂದು ಗೋಕುಲ್ ಹೇಳಿದರು.

ಕಂಪನಿಯು ಬಳಸುವ ಥರ್ಡ್-ಪಾರ್ಟಿ ಟೂಲ್‌ನಲ್ಲಿನ ದುರ್ಬಲತೆ ರಿಮೋಟ್ ಕೋಡ್ ಎಕ್ಸಿಕ್ಯೂಶನ್(RCE) ಮೂಲಕ ಅದರ ಫೈಲ್‌ಗಳಿಗೆ ಪ್ರವೇಶವನ್ನು ಒದಗಿಸಿದೆ. ಇದು ಹ್ಯಾಕರ್ ಗಳಿಗೆ ಬೇರೆಯವರ ಕಂಪ್ಯೂಟರ್ ನಲ್ಲಿ ದುರುದ್ದೇಶಪೂರಿತ ಕೋಡ್ ಅನ್ನು ರಿಮೋಟ್ ಆಗಿ ಕಾರ್ಯಗತಗೊಳಿಸಲು ಅನುಮತಿಸುತ್ತದೆ. ಈ ದೋಷವನ್ನು ವರದಿ ಮಾಡಿದ್ದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪಾವತಿಸಿದ ಬಹುಮಾನಗಳಲ್ಲಿ ಇದು ಒಂದಾಗಿದೆ.

25 ವಕ್ಷದ ನಾನು ಬಿಟೆಕ್ ಮುಗಿಸಿದ ನಂತರ ಪೆರಿಂತಲ್ಮನ್ನಾದ ಖಾಸಗಿ ಸಂಸ್ಥೆಯಲ್ಲಿ ನಾಲ್ಕು ತಿಂಗಳ ಅವಧಿಯ ಸೈಬರ್ ಸೆಕ್ಯುರಿಟಿ ವಿಶ್ಲೇಷಕ ಕೋರ್ಸ್ ಮಾಡಲು ಹೋದೆ. ಕೋರ್ಸ್ ನನಗೆ ಸೈಬರ್ ಭದ್ರತೆಯ ಮೂಲಭೂತ ಅಂಶಗಳನ್ನು ಪರಿಚಯಿಸಿತು. YouTube ಮತ್ತು ಇತರ ಆನ್‌ಲೈನ್ ಟ್ಯುಟೋರಿಯಲ್‌ಗಳ ಸಹಾಯದಿಂದ ನಾನು ವಿಷಯವನ್ನು ಆಳವಾಗಿ ಪರಿಶೀಲಿಸಿದೆ. ಇದು ದೋಷವನ್ನು ಗುರುತಿಸಲು ನನಗೆ ಸಹಾಯ ಮಾಡಿತು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com