ಸುದೀರ್ಘ ಕಾಲ ವಕೀಲಿ ವೃತ್ತಿ: 98ನೇ ವಯಸ್ಸಿನಲ್ಲಿ ಕೇರಳದ ವಕೀಲ ಬಾಲಸುಬ್ರಮಣ್ಯಂ ಮೆನನ್ ಗಿನ್ನೆಸ್ ದಾಖಲೆ!
ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಖ್ಯಾತ ವಕೀಲರಾದ ಪಿ ಬಾಲಸುಬ್ರಮಣ್ಯಂ ಮೆನನ್ ಅವರು ಸುದೀರ್ಘ ಕಾಲ ವಕೀಲಿ ವೃತ್ತಿ ನಡೆಸಿ ದಾಖಲೆ ನಿರ್ಮಿಸಿದ್ದಾರೆ.
Published: 10th November 2023 04:26 PM | Last Updated: 10th November 2023 07:29 PM | A+A A-

ಪಿ ಬಾಲಸುಬ್ರಮಣ್ಯಂ ಮೆನನ್
ಪಾಲಕ್ಕಾಡ್: ಕೇರಳದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಖ್ಯಾತ ವಕೀಲರಾದ ಪಿ ಬಾಲಸುಬ್ರಮಣ್ಯಂ ಮೆನನ್ ಅವರು ಸುದೀರ್ಘ ಕಾಲ ವಕೀಲಿ ವೃತ್ತಿ ನಡೆಸಿ ದಾಖಲೆ ನಿರ್ಮಿಸಿದ್ದಾರೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, 98 ವರ್ಷದ ಮೆನನ್ 73 ವರ್ಷ 60 ದಿನಗಳಿಂದ ವಕೀಲಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಇದನ್ನು 2023ರ ಸೆಪ್ಟೆಂಬರ್ 11ರಂದು ದಾಖಲೆ ಪುಸ್ತಕಗಳಲ್ಲಿ ದಾಖಲಿಸಲಾಗಿದೆ.
ಮೆನನ್ ಅವರಿಗಿಂತ ಮೊದಲು, ಜಿಬ್ರಾಲ್ಟರ್ ಸರ್ಕಾರದ ವಕೀಲ ಲೂಯಿಸ್ ಟ್ರಾಯ್ ಅವರು ಸುದೀರ್ಘ ಅವಧಿಯ ವಕೀಲರ ದಾಖಲೆಯನ್ನು ಹೊಂದಿದ್ದರು. ಟ್ರಾಯ್ 70 ವರ್ಷ 311 ದಿನಗಳ ದಾಖಲೆ ಮಾಡಿದ್ದರು. ಲೂಯಿಸ್ ಈ ವರ್ಷದ ಫೆಬ್ರವರಿಯಲ್ಲಿ 94ನೇ ವಯಸ್ಸಿನಲ್ಲಿ ನಿಧನರಾದರು.
ಮೆನನ್ ಅವರ ಮೊಮ್ಮಗಳು ಸುಮಾ ಕನಕಲ ಅವರು ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನನ್ನ ಅಜ್ಜ ನನಗೆ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ.
ಇಂದಿಗೂ ಪ್ರತಿದಿನ ಕೋರ್ಟ್ ಹೋಗ್ತಾರೆ ಮೆಮನ್
ಇಳಿವಯಸ್ಸಿನಲ್ಲೂ ಉತ್ಸಾಹಿ ವಕೀಲರಂತೆ ಮೆನನ್ ಕಾರಣುತ್ತಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ವಕೀಲಿಕೆಯಲ್ಲಿ ಸಕ್ರಿಯರಾಗಿದ್ದರು. ಇಂದಿಗೂ ದಿನವೂ ಕಚೇರಿ, ನ್ಯಾಯಾಲಯಕ್ಕೆ ತೆರಳಿ ಕಕ್ಷಿದಾರರನ್ನು ಭೇಟಿಯಾಗುತ್ತಿದ್ದಾರೆ. ಮೆನನ್ ಈ ಎಲ್ಲಾ ಕೆಲಸಗಳನ್ನು ಯಾವುದೇ ತೊಂದರೆಯಿಲ್ಲದೆ ಮಾಡುತ್ತಾರೆ.
Sri P.B.Menon(98yrs) my Ammaamma’s younger brother entered into the Guinness Book for longest working advocate (since 73yrs he is at work). He inspires me and many. My grandfather...My SUPERHERO pic.twitter.com/uRsQLYYNwC
— Suma Kanakala (@ItsSumaKanakala) November 9, 2023
ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಮೆನನ್, ಯಾರೇ ಆಗಲಿ ತನ್ನ ಪ್ರಕರಣದೊಂದಿಗೆ ನನ್ನ ಬಳಿಗೆ ಬಂದಾಗ ಅದು ನನ್ನ ಮೇಲೆ ನಂಬಿಕೆ. ಅವರಿಗಾಗಿ ನನ್ನ ಕೈಲಾದಷ್ಟು ಮಾಡುತ್ತೇನೆ. ತಮ್ಮ ಕಾರ್ಯವೈಖರಿಯನ್ನು ವಿವರಿಸಿದ ಮೆನನ್, ನ್ಯಾಯಾಲಯದಲ್ಲಿ ಹೆಚ್ಚು ವಾದ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ ಎಂದು ಹೇಳಿದರು. ಅವನು ಯಾವಾಗಲೂ ತನ್ನ ವಾದಗಳನ್ನು ಚಿಕ್ಕದಾಗಿಸುವುದಾಗಿ ಹೇಳಿದರು.
ಇದನ್ನೂ ಓದಿ: ಸಾಧನೆಗೆ ಮುಖ್ಯ ಮನೋಬಲ: ಅಂಗವೈಕಲ್ಯ ಮೆಟ್ಟಿನಿಂತು ಇತರರಿಗೆ ಸ್ಫೂರ್ತಿಯಾದ ಅಣ್ಣ-ತಂಗಿ!
ನಿವೃತ್ತಿ ಬಗ್ಗೆ ನಕ್ಕ ಮೆನನ್
ನೀವು ಯಾವಾಗ ನಿವೃತ್ತಿ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆ ಬಂದಾಗ, ಮೆನನ್ ಮೃದುವಾಗಿ ನಗುತ್ತಾ ನನ್ನ ಆರೋಗ್ಯವು ಉತ್ತಮವಾಗಿದ್ದು ನನ್ನ ಗ್ರಾಹಕರು ಮತ್ತು ಪಾರ್ಟಿಗಳು ನನ್ನನ್ನು ಬಯಸುವವರೆಗೂ ನಾನು ವಕೀಲ ವೃತ್ತಿಯನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.