G-20 ಶೃಂಗಸಭೆಯ ಅತಿಥಿಗಳಿಗೆ ಉತ್ತರ ಪ್ರದೇಶದ ಅಪರೂಪದ ಹಿತ್ತಾಳೆಯ ಕಮಲ ಸ್ಮರಣಿಕೆ ಉಡುಗೊರೆ!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ಶನಿವಾರ ಆರಂಭವಾದ ಜಿ20 ಶೃಂಗಸಭೆ ಇಂದು ಭಾನುವಾರ ಮುಕ್ತಾಯವಾಗಲಿದೆ. ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ ವಿಶ್ವದ ರಾಷ್ಟ್ರಗಳ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಂದೇಲ್‌ಖಂಡ್‌ನ ಮಹೋಬಾದ ಕಮಲದ ಆಕಾರದ 'ಕಮಲಂ' ಎಂಬ ವಿಶಿಷ್ಟ ಹಿತ್ತಾಳೆ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.
Published: 10th September 2023 11:21 AM | Last Updated: 11th September 2023 08:16 PM | A+A A-

ಲೋಹ ಕುಶಲಕರ್ಮಿ ಮತ್ತು ಮಹೋಬಾದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮನಮೋಹನ್ ಸೈನಿ ಅವರು ರಚಿಸಿರುವ ಕಲಾಕೃತಿಯು 16 ದಳಗಳೊಂದಿಗೆ ಐದು ಇಂಚು ಎತ್ತರವಿದೆ - ಎಂಟು ದೊಡ್ಡ ಮತ್ತು ಎಂಟು ಸಣ್ಣ ದಳಗಳನ್ನು ಹೊಂದಿವೆ
ಲಖನೌ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ಶನಿವಾರ ಆರಂಭವಾದ ಜಿ20 ಶೃಂಗಸಭೆ ಇಂದು ಭಾನುವಾರ ಮುಕ್ತಾಯವಾಗಲಿದೆ. ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ ವಿಶ್ವದ ರಾಷ್ಟ್ರಗಳ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಂದೇಲ್‌ಖಂಡ್‌ನ ಮಹೋಬಾದ ಕಮಲದ ಆಕಾರದ 'ಕಮಲಂ' ಎಂಬ ವಿಶಿಷ್ಟ ಹಿತ್ತಾಳೆ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ಐದು ಇಂಚು ಎತ್ತರದ ಕಲಾಕೃತಿಯನ್ನು ಮಹೋಬಾದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಲೋಹದ ಕುಶಲಕರ್ಮಿ ಮನಮೋಹನ್ ಸೈನಿ ಅವರು ರಚಿಸಿದ್ದಾರೆ, ಇದು 16 ದಳಗಳನ್ನು ಒಳಗೊಂಡಿದೆ - ಎಂಟು ದೊಡ್ಡ ಮತ್ತು ಎಂಟು ಸಣ್ಣ ದಳಗಳಿವೆ.
ಯುಪಿ ಕರಕುಶಲ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಎಂಟು ತಿಂಗಳ ಮುಂಚಿತವಾಗಿ ಹಿತ್ತಾಳೆಯಲ್ಲಿ 50 ಕಮಲಗಳನ್ನು ಸಿದ್ಧಪಡಿಸಲು ಸೈನಿ ಅವರಿಗೆ ಆರ್ಡರ್ ಕೊಟ್ಟಿತ್ತು, ಅವುಗಳನ್ನು ಬಿಡಿಭಾಗಗಳೊಂದಿಗೆ ಹಲವು ದಿನಗಳ ಹಿಂದೆಯೇ ದೆಹಲಿಗೆ ಕಳುಹಿಸಲಾಯಿತು.
ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ತಮ್ಮ ಕರಕುಶಲಕಲೆಯನ್ನು ಪ್ರದರ್ಶಿಸುವ ಬಗ್ಗೆ ಸೈನಿ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಕೆಲಸಕ್ಕೆ ಹೊಸ ದಿಕ್ಕು ಸಿಗಲಿದೆ ಎಂಬ ಆಶಾವಾದದಲ್ಲಿದ್ದಾರೆ. ಕಲಾಕೃತಿಯು ಪೂರ್ಣವಾಗಿ ಅರಳಿದ ಕಮಲವನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಹೊರಗಿನ ದಳಗಳ ಸ್ವಲ್ಪ ತಿರುಗುವಿಕೆಯೊಂದಿಗೆ ತೆರೆಯಬಹುದು ಮತ್ತು ಮುಚ್ಚಬಹುದು. ಈ ವಿಶೇಷ ಕಮಲಗಳನ್ನು ಸಿದ್ಧಪಡಿಸುವ ಏಕೈಕ ಕುಶಲಕರ್ಮಿ ಸೈನಿ ಅವರಾಗಿದ್ದಾರೆ.
ಅವುಗಳಲ್ಲಿ 50 ತಯಾರಿಸಲು ಅವರಿಗೆ ಮೂರು ತಿಂಗಳು ಬೇಕಾಯಿತು, ನಿಗಮದ ತಜ್ಞರು ಗುಣಮಟ್ಟ ನಿಯಂತ್ರಣ ಮತ್ತು ವಿನ್ಯಾಸಕ್ಕಾಗಿ ತಯಾರಿಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದರು.
2016 ರಲ್ಲಿ ಬಿಜೆಪಿ ಸಂಸದ ಕುನ್ವರ್ ಪುಷ್ಪೇಂದ್ರ ಚಾಂಡೆಲ್ ಅವರು ಪರಿವರ್ತನ್ ರ್ಯಾಲಿಯಲ್ಲಿ ಪ್ರಧಾನಿಗೆ ಉಡುಗೊರೆಯಾಗಿ ನೀಡಿದಾಗ ಸೈನಿ ಅವರ 'ಕಮಲಂ' ರಾಷ್ಟ್ರದ ಗಮನ ಸೆಳೆಯಿತು. ಇದು ಪ್ರಧಾನಿಯವರ ಗಮನ ಸೆಳೆದು ಸಾಕಷ್ಟು ಮೆಚ್ಚುಗೆ ಗಳಿಸಿತು. ಸೈನಿ ತನ್ನ ತಂದೆ ಗ್ಯಾಸಿ ಸೈನಿ ಅವರಿಂದ ಈ ಕಲೆಯನ್ನು ಕಲಿತರು, ಅವರು ಕುಲ್ಪಹಾಡ್‌ನಲ್ಲಿ ಅಲಂಕಾರಿಕ ಹಿತ್ತಾಳೆ ತುಂಡುಗಳನ್ನು ತಯಾರಿಸುತ್ತಿದ್ದರು.
ಅವರ ಇಬ್ಬರು ಸಹೋದರರಾದ ಆಜಾದ್ ಸೈನಿ ಮತ್ತು ಶಿವಕುಮಾರ್ ಸೈನಿ ಕೂಡ ಕರಕುಶಲಕಲೆಯಲ್ಲಿ ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಮಲಂ ಅವರ ಮನ್ನಣೆಯು ಮಹೋಬಾ ಮತ್ತು ಅದರ ಸುತ್ತಮುತ್ತಲಿನ ಸಾಂಪ್ರದಾಯಿಕ ಹಿತ್ತಾಳೆ ಕೆಲಸವನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಸೈನಿ ಆಶಯ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: G20 ಶೃಂಗಸಭೆ: ವಿಶ್ವ ನಾಯಕರಿಗೆ ವಿಶೇಷ ಔತಣಕೂಟ, ಪಕ್ಕಾ ಭಾರತೀಯ ಶೈಲಿಯ ಸಸ್ಯಾಹಾರಿ ಖಾದ್ಯಗಳು!
ಮಹೋಬದಲ್ಲಿ ತಯಾರಿಸಲಾದ ಇಂತಹ ವಿಶಿಷ್ಟ ಸ್ಮರಣಿಕೆಯನ್ನು ಜಿ-20 ಶೃಂಗಸಭೆಯಲ್ಲಿ ರಾಷ್ಟ್ರಗಳ ಮತ್ತು ವಿದೇಶಿ ಗಣ್ಯರಿಗೆ ನೀಡುತ್ತಿರುವುದು ಮಹೋಬ ಜಿಲ್ಲೆ ಮತ್ತು ಬುಂದೇಲ್‌ಖಂಡಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ಮೃದುಲ್ ಚೌಧರಿ ಹೇಳುತ್ತಾರೆ.