Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
siddaramaiah

ವಿಪ್ ಬಗ್ಗೆ ಚರ್ಚೆಯಾಗುವವರೆಗೂ ವಿಶ್ವಾಸಮತ ಯಾಚನೆ ಬೇಡ- ಸಿದ್ದರಾಮಯ್ಯ: ಮಧ್ಯಾಹ್ನ 3 ಗಂಟೆಗೆ ಕಲಾಪ ಮುಂದೂಡಿದ ಸ್ಪೀಕರ್

ಅಯೋಧ್ಯೆ ವಿವಾದ: ಮಧ್ಯಸ್ಥಿಕೆ ಪ್ರಕ್ರಿಯೆ ಜುಲೈ 31ರವರೆಗೆ ವಿಸ್ತರಣೆ, ಆಗಸ್ಟ್ 2ರಂದು ವಿಚಾರಣೆ

Saravana Bhavan Founder, Serving Life Term in Murder Case, Dies In Chennai Hospital

ಪೊಲೀಸರಿಗೆ ಶರಣಾಗಿದ್ದ ಶರವಣ ಭವನ್ ಮಾಲೀಕ ಪಿ ರಾಜಗೋಪಾಲ್ ಆಸ್ಪತ್ರೆಯಲ್ಲಿ ಸಾವು

Jai Shankar

ಕುಲಭೂಷಣ್ ಜಾಧವ್ ರನ್ನು ಕೂಡಲೇ ಬಿಡುಗಡೆ ಮಾಡಿ: ಪಾಕಿಸ್ತಾನಕ್ಕೆ ಭಾರತ ಒತ್ತಾಯ

Smriti Irani

ಫೇಸ್ ಆಪ್ ಚಾಲೆಂಜ್ ನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ 10 ವರ್ಷ ಹಿಂದೆಯೇ ಮಾಡಿದ್ದರಂತೆ!

Jaggesh

ಅಯ್ಯೋ ದೇವರೆ ಎಂಥ ಹೀನ ಕೃತ್ಯ ಮಾಡಿದ್ದಾರೆ: ಸರ್ವನಾಶವಾಗುತ್ತೆ ಈ ಕೃತ್ಯ ಮಾಡಿದವರ ವಂಶ; ಜಗ್ಗೇಶ್ ಟ್ವೀಟ್

including

ಚಿತ್ರದುರ್ಗ ರಸ್ತೆ ಅಪಘಾತ: ಮಗಳು ಜಾನಕಿ ಖ್ಯಾತಿಯ ನಟಿ ಶೋಭಾ ಸೇರಿದಂತೆ ಐವರ ಸಾವು!

ಚಂದ್ರಯಾನ-2 ಉಡಾವಣೆ ಜುಲೈ 22ಕ್ಕೆ: ಇಸ್ರೊ ಪ್ರಕಟ

H.D kumaraswamy

ನಾವಿನ್ನೂ ಮಾನ ಮರ್ಯಾದೆ ಇಟ್ಟುಕೊಂಡು ಬದುಕುತ್ತಿದ್ದೇವೆ: ಸಿಎಂ ಕುಮಾರಸ್ವಾಮಿ

You had a great World Cup: Sachin Tendulkar told Kane Williamson after final loss

ನ್ಯೂಜಿಲೆಂಡ್‌ ಪಾಲಿಗೆ ಇದು ಅದ್ಭುತ ವಿಶ್ವಕಪ್‌: ವಿಲಿಯಮ್ಸನ್‌ ಗೆ ಸಚಿನ್‌ ಕಿವಿಮಾತು

Representational image

ಕಳೆದ 10 ದಿನದಲ್ಲಿ ಮೈತ್ರಿ ಸರ್ಕಾರದಿಂದ ಬರೋಬ್ಬರೀ 2 ಸಾವಿರ ಅಧಿಕಾರಿಗಳ ವರ್ಗಾವಣೆ!

Collective Photo

ಬೆಂಗಳೂರು ವಿಶ್ವವಿದ್ಯಾಲಯದ 77 ಕಾಲೇಜುಗಳು ಕಪ್ಪು ಪಟ್ಟಿಗೆ, 5 ಸಾವಿರ ವಿದ್ಯಾರ್ಥಿಗಳಿಗೆ ಆತಂಕ!

Gowri Lankesh

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯೇ ಎಂಎಂ ಕಲ್ಬುರ್ಗಿ ಹಂತಕ

ಮುಖಪುಟ >> ವಿಶೇಷ

ವೋಟರ್ ಐಡಿ ಇಲ್ಲವೇ? ಚಿಂತೆ ಬೇಡ,ಆನ್ ಲೈನ್ ನಲ್ಲಿ ಇಂದೇ ಅರ್ಜಿ ಸಲ್ಲಿಸಿ!

Casual Photo

ಸಾಂದರ್ಭಿಕ ಚಿತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವಂತೆ  ಇದೇ ಮೊದಲ ಬಾರಿಗೆ ಮತದಾನ ಮಾಡಲು ಹಲವು ಮಂದಿ ಕುತೂಹಲದಿಂದ ಕಾಯುತ್ತಿದ್ದಾರೆ.

ಒಂದು ವೇಳೆ  18 ವರ್ಷ ತುಂಬಿ, ವೋಟರ್  ಐಡಿಯನ್ನು  ಪಡೆಯದಿದ್ದರೆ ಚುನಾವಣಾ ಕಚೇರಿ ಮುಂಭಾಗ ಉದ್ದನೇಯ ಸಾಲಿನಲ್ಲಿ ನಿಲ್ಲಬೇಕೆಂಬ  ಆತಂಕಪಡಬೇಕಾಗಿಲ್ಲ. ಆನ್ ಲೈನ್ ಮೂಲಕ ಮತದಾರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹಿಂದೆ ವೋಟರ್ ಐಡಿ ಚುನಾವಣಾ ಕಚೇರಿಗೆ  ಹಲವು ಬಾರಿ ಅಲೆಯಬೇಕಾಗಿತ್ತು. ಆದರೆ. ಈಗ ಆನ್ ಲೈನ್ ನಲ್ಲಿಯೇ ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಮತದಾರರ ಚೀಟಿ ಪಡೆದುಕೊಳ್ಳುವುದು ಸುಲಭವಾಗಿದೆ.

ಒಂದು ಕ್ಷೇತ್ರ, ನಗರ, ಜಿಲ್ಲೆ, ಅಥವಾ ರಾಜ್ಯದಿಂದ ಮತ್ತೊಂದು ಕಡೆಗೆ ಹೋಗುವವರು ,ಮತದಾರ ಚೀಟಿ ಕಳೆದುಕೊಂಡಿರುವವರು, ಅಥವಾ ವೋಟರ್ ಐಡಿಯಲ್ಲಿ ಬದಲಾವಣೆ ಮಾಡಿಸುವವರು ಈಗ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್ ಲೈನ್ ಅರ್ಜಿ ಸಲ್ಲಿಸುವ ಮುನ್ನ ಇಟ್ಟುಕೊಳ್ಳಬೇಕಾದ ಅಗತ್ಯವಾದ ದಾಖಲೆಗಳು

1. ಒಂದು ಪಾಸ್ ಪೋರ್ಟ್ ಸೈಜಿನ ಪೋಟೋ

2.  ಹುಟ್ಟಿದ ದಿನಾಂಕ, ಪಾಸ್ ಪೋರ್ಟ್,  ಡ್ರೈವಿಂಗ್ ಲೈಸೆನ್ಸ್,  ಆಧಾರ್ ಕಾರ್ಡ್,  ಪ್ಯಾನ್ ಕಾರ್ಡ್  ಅಥವಾ 5, 8 ಅಥವಾ 10 ನೇ ತರಗತಿಯ ಅಂಕಪಟ್ಟಿ ಮತ್ತಿತರ ಯಾವುದೇ  ಗುರುತಿನ ಆಧಾರಗಳು

3. ಯಾವುದೇ ರೀತಿಯ ವಿಳಾಸದ ಪುರಾವೆಗಳು- ಪಾಸ್ ಪೋರ್ಟ್, ಬ್ಯಾಂಕ್ ಪಾಸ್ ಬುಕ್, ಪಡಿತರ ಚೀಟಿ, ಆದಾಯ ತೆರಿಗೆಗೆ ಸಂಬಂಧಿಸಿದ ದಾಖಲೆಗಳು, ಬಾಡಿಗೆ ಒಪ್ಪಂದದ ಪತ್ರ, ಡ್ರೈವಿಂಗ್ ಲೈಸೆನ್ಸ್,  ಅಥವಾ ನೀರು, ದೂರಸಂಪರ್ಕ, ವಿದ್ಯುತ್, ಗ್ಯಾಸ್ ಸಂಪರ್ಕದ ಬಿಲ್ ಮತ್ತಿತರ ದಾಖಲೆಗಳು

ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ ?

1. ರಾಷ್ಟ್ರೀಯ ವೋಟರ್ ಸರ್ವೀಸಸ್ ಪೋರ್ಟಲ್ ಪೇಜ್  (ಎನ್ ವಿಎಸ್ ಪಿ)  ಭೇಟಿ ನೀಡಿ
2. ಹೊಸ ವೋಟರ್ ಕಾರ್ಡ್ ನೋಂದಾಣಿಗಾಗಿ  ಇರುವ ( Apply online for
Registration ) ಕ್ಲಿಕ್ ಮಾಡಿ  ನಂತರ  ಹಿಂದಿ ಭಾಷೆಯಲ್ಲಿರುವ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.ನೀವು ಭಾಷೆಯನ್ನು ಬದಲಾಯಿಸಲು ಬಯಸಿದರೆ  ಪುಟದ ಮೇಲಿನ ಬಲ ಭಾಗದಲ್ಲಿರುವ ಡ್ರಾಪ್ ಡೌನ್  ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

3. ಅಗತ್ಯವಾದ ಮಾಹಿತಿ ಭರ್ತಿ ಮಾಡಿ,  ಪೋಟೋ, ವಯಸ್ಸು, ವಿಳಾಸದ ಪುರಾವೆ ಮತ್ತಿತರ ಅಗತ್ಯ ದಾಖಲೆಗಳನ್ನು ಆಟ್ಯಾಟ್ ಮಾಡಬೇಕಾಗುತ್ತದೆ. ನಂತರ ಪುಟದ ಕೆಳಭಾಗದಲ್ಲಿರುವ 'Submit' option  ಕ್ಲಿಕ್ ಮಾಡಿ.

4. ಒಮ್ಮೆ ನೀವು  ಅರ್ಜಿಯನ್ನು ಸಲ್ಲಿಸಿದ ನಂತರ   ಇ-ಮೇಲ್ ವೊಂದನ್ನು  ಸ್ವೀಕರಿಸುತ್ತೀರಿ.  ನಂತರ Track application status'  ಮೂಲಕ ನಿಮ್ಮ ಅರ್ಜಿಯನ್ನು ಗಮನಿಸಬಹುದು. ಎಲ್ಲಾ ಪ್ರಕ್ರಿಯೆ ಮುಗಿಯಲು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಪರ್ಯಾಯವಾಗಿ NVSP website ಗೆ ಹೋಗಿ  'Track application status ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

 ಎನ್ ಆರ್ ಐ- ಅನಿವಾಸಿ ಭಾರತೀಯರು ಹೇಗೆ ಅರ್ಜಿ ಸಲ್ಲಿಸಬಹುದು?

1. NVSP website ತೆರೆಯಬೇಕು.

2. Click on the second option - Apply online for registration of overseas voter Form 6A.

3. ಅಗತ್ಯ ಮಾಹಿತಿ ಭರ್ತಿ ಮಾಡಿ , Submit.'  ಮೇಲೆ  ಕ್ಲಿಕ್ ಮಾಡಬೇಕು.

NVSP website  ನಲ್ಲಿನ  ವಿವಿಧ ಆಯ್ಕೆಗಳ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಬದಲಾವಣೆ, ಅಥವಾ ತಿದ್ದುಪಡಿ  ಮಾಡಬಹುದಾಗಿದೆ.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : 2019 Lok Sabha elections, VoterID, online Application 2019 ಲೋಕಸಭಾ ಚುನಾವಣೆ, ವೋಟರ್ ಐಡಿ, ಆನ್ ಲೈನ್ ಅರ್ಜಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS