Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆಗೈದ ಕರ್ನಾಟಕ ಐಎಎಸ್ ಅಧಿಕಾರಿ ಅಮಾನತು ಆದೇಶಕ್ಕೆ ತಡೆ

Justice NV Ramana

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿಚಾರಣಾ ಸಮಿತಿಯಿಂದ ಹೊರಬಂದ ನ್ಯಾಯಮೂರ್ತಿ ಎನ್.ವಿ.ರಮಣ

ಸಂಗ್ರಹ ಚಿತ್ರ

ಕಾಡಿನಲ್ಲಲ್ಲ, ಜೈಶ್ ಸಂಘಟನೆಯ 5 ಬಿಡಾರಗಳ ಮೇಲೆ ಮಿರಾಜ್-2000 ನಿಖರ ದಾಳಿ: ಐಎಎಫ್ ವರದಿ

Casual Photo

ಲೋಕಸಭಾ ಚುನಾವಣೆ: 437 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ, ಇದೇ ಮೊದಲ ಬಾರಿಗೆ ಹೆಚ್ಚಿನ ಸ್ಥಾನಗಳಲ್ಲಿ ಕಣಕ್ಕೆ

ಸಂಗ್ರಹ ಚಿತ್ರ

ಬಯಲಿನಲ್ಲಿ ಶೌಚ ಮಾಡುತ್ತಿದ್ದ ರೈತನಿಗೆ ಬುದ್ಧಿ ಕಲಿಸಿದ ಆನೆ, 50 ಮೀಟರ್ ದೂರ ಒಯ್ದು ಎಸೆದ ಗಜರಾಜ!

ಅಕ್ಷಯ್ ಕುಮಾರ್-ನರೇಂದ್ರ ಮೋದಿ-ಸಿದ್ಧಾರ್ಥ

ಪ್ರಧಾನಿ ಮೋದಿ ಸಂದರ್ಶನ: ನಟ ಅಕ್ಷಯ್ ನನ್ನು 'ವಿಲನ್' ಎಂದು ಕಿಡಿಕಾರಿದ ತಮಿಳು ನಟ ಸಿದ್ಧಾರ್ಥ್

ಸಂಗ್ರಹ ಚಿತ್ರ

ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಸ್ವರ್ಣ, ಏಷ್ಯನ್ ಕುಸ್ತಿಯಲ್ಲಿ ದಿವ್ಯಾ, ಮಂಜುಗೆ ಕಂಚು

Will support any secular alliance to stop Modi-Shah duo: Arvind Kejriwal

ಲೋಕಸಭೆ ಚುನಾವಣೆಗೆ ಆಪ್​​ ಪ್ರಣಾಳಿಕೆ ಬಿಡುಗಡೆ: ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನದ ಭರವಸೆ

Declaring me fugitive offender is like giving

'ತಲೆಮರೆಸಿಕೊಂಡ ಅಪರಾಧಿ' ಎಂದು ಘೋಷಿಸಿರುವುದು ನನಗೆ ಆರ್ಥಿಕ ಮರಣದಂಡನೆ ಕೊಟ್ಟಂತೆ: ವಿಜಯ್ ಮಲ್ಯ

ಸಂಗ್ರಹ ಚಿತ್ರ

ಕೋಟಿ ಕೋಟಿ ಖರ್ಚಾದರೂ ಪರವಾಗಿಲ್ಲ, ಸಿಸಿಬಿ ಪೊಲೀಸರ ಬಟ್ಟೆ ಬಿಚ್ಚಿಸುತ್ತೇನೆ: ಆರೋಪಿ ಯೂಸೂಫ್ ಷರೀಫ್ ಧಮ್ಕಿ

Casual photo

ಯುವತಿರನ್ನು ಕಾಮುಕ ಗಂಡ ರೇಪ್ ಮಾಡುತ್ತಿದ್ರೆ ಹೆಂಡತಿ ವಿಡಿಯೋ ಮಾಡ್ತಿದ್ಲು, ಯಾಕೆ ಗೊತ್ತ?

SriLanka Suicide Attackers younger brother Ilham detonated a bomb that killed him, his wife and their kids

ಶ್ರೀಲಂಕಾ: ವಿಚಾರಣೆಗೆ ಮನೆಗೆ ಬಂದ ಅಧಿಕಾರಿಗಳನ್ನೇ ಬಾಂಬ್ ಮೂಲಕ ಸ್ಫೋಟಿಸಿದ ಶ್ರೀಮಂತ ಉಗ್ರನ ಸಹೋದರ!

Election Commission is of the view that the movie

ಮುಕ್ತ ಮತ್ತು ನಿಸ್ಪಕ್ಷಪಾತ ಚುನಾವಣೆಗಾಗಿ ಪಿಎಂ ಮೋದಿ ಬಯೋಪಿಕ್ ಬಿಡುಗಡೆ ಇಲ್ಲ!

ಮುಖಪುಟ >> ವಿಶೇಷ

ಅನುಮತಿ ಇಲ್ಲದೆ ತನ್ನನ್ನು 'ಸೃಷ್ಟಿ'ಸಿದ್ದಕ್ಕೆ ಪೋಷಕರನ್ನೇ ಕೋರ್ಟಿಗೆಳೆದ ಪುತ್ರ!

Mumbai man wants to sue parents for creating him, mom admires his

ಅನುಮತಿ ಇಲ್ಲದೆ ತನ್ನನ್ನು 'ಸೃಷ್ಟಿ'ಸಿದ್ದಕ್ಕೆ ಪೋಷಕರನ್ನೇ ಕೋರ್ಟಿಗೆಳೆದ ಪುತ್ರ!

ಮುಂಬೈ: ಇಂತಹಾ ವಿಚಿತ್ರ ಪ್ರಸಂಗವನ್ನು ನೀವೆಂದೂ ಹಿಂದೆ ಕೇಳಿರಲಿಕ್ಕಿಲ್ಲ! ಪುತ್ರನೊಬ್ಬ ತನ್ನ ಮಾತಾ-ಪಿತರು ನನ್ನ ಅನುಮತಿ ಇಲ್ಲದೆ ನನ್ನನ್ನು ಸೃಷ್ಟಿಸಿದ್ದಾರೆಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾನೆ. ಇನ್ನೂ ವಿಶೇಷವೆಂದರೆ ಪುತ್ರನ "ನಡತೆ"ಗೆ ತಾಯಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ!

ಮುಂಬೈಯ 27 ರ ಹರೆಯದ ಉದ್ಯಮಿ, ರಾಫೆಲ್ ಸ್ಯಾಮ್ಯುಯೆಲ್  ಎಂಬಾತನೇ ತನ್ನ ಪೋಷಕರ ವಿರುದ್ಧ ನ್ಯಾಯಾಲಯದ ಮೊರೆ ಹೋದ ವ್ಯಕ್ತಿ.ಈತನ ಪ್ರಕಾರ ಭೂಮಿಯಲ್ಲಿ ಜನ್ಮಿಸುವ ಮುನ್ನ ಯಾವುದೇ ವ್ಯಕ್ತಿ ತನ್ನ ತಾಯಿ-ತಂದೆಗಳನ್ನು ಸ್ವತಃ ಆರಿಸಿಕೊಳ್ಳುವುದು ಸಾಧ್ಯ. ಎಂದರೆ ಈತನ ಪ್ರಕಾರ ಹುಟ್ಟು ಆಕಸ್ಮಿಕ ಎಂಬ ನಂಬಿಕೆಯೇ ತಪ್ಪು.ಒಬ್ಬ ವ್ಯಕ್ತಿ ತಪ್ಪಾದ ಪೋಷಕರನ್ನು ಪಡೆದರೆ, ತಪ್ಪಾದ ಸ್ಥಳದಲ್ಲಿ ಹುಟ್ಟಿದರೆ ಆತ ದುಃಖ ಪಡಬೇಕಾಗುವುದು ಎಂದು ರಾಫೆಲ್ ಹೇಳುತ್ತಾನೆ.

ರಾಫೆಲ್ ತನ್ನನ್ನು ಸೃಷ್ಟಿಸಿದ ಕುರಿತಂತೆ ಪೋಷಕರನ್ನು ಪ್ರಶ್ನಿಸಿದ್ದಲ್ಲದೆ ಅವರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಲು ತಯಾರಾಗಿದ್ದಾನೆ ಎನ್ನುವುದು ತಿಳಿಯುತ್ತಿದ್ದಂತೆ ಆತ ವಿಶ್ವಾದ್ಯಂತ ಪ್ರಸಿದ್ದನಾದನು.ಫೇಸ್ ಬುಕ್ ನಲ್ಲಿ "ನಿಹಿಲನಾಂದ್" ಎಂಬ ಹೆಸರಿನ ಖಾತೆ ಹೊಂದಿರುವ ರಾಫೆಲ್ ಪೋಷಕರು ಆತನ ಒಪ್ಪಿಗೆಯಿಲ್ಲದೆ ಆತನನ್ನು ಸೃಷ್ಟಿಸಿದ್ದು ತಪ್ಪೆಂದು ವಾದಿಸುತ್ತಾನೆ.

ಗಾರ್ಡಿಯನ್ ಲೇಖನವೊಂದರ ಪ್ರಕಾರ, ಆಂಟಿ ನಟಾಲಿಸಂ ಎನ್ನುವುದು ಜನರ ನೈತಿಕ ನಂಬಿಕೆಗಳಿಗೆ ವಿರುದ್ಧವಾಗಿದೆ. ನಂಬಿಕೆಯ ಒಂದು ವ್ಯವಸ್ಥೆಯಾಗಿದೆ, ಮತ್ತು ಒಂದು ದೊಡ್ಡ ಪ್ರಮಾಣದ ದುಃಖವನ್ನು  ಜನರು ಈ ವ್ಯವಸ್ಥೆಯ ಆಚೆ ನಿಂಟಾಗ ತಪ್ಪಿಸಲು ಸಾಧ್ಯ ಎನ್ನುವ ಸಿದ್ದಾಂತವಾಗಿದೆ. ಇದು ಜಾಗತಿಕವಾಗಿ ಹಲವಾರು ವ್ಯಕ್ತಿಗಳಲ್ಲಿ ಸಿದ್ದಾಂತವಾಗಿ ಬೆಳೆದು ಚಳವಳಿಯಾಗಿ ರೂಪುಗೊಳ್ಳುತ್ತಿದೆ.

ಫೇಸ್ ಬುಕ್ ಪೋಸ್ಟ್ ನಲ್ಲಿ ರಾಫೆಲ್  ತಾನು ತನ್ನ ಹೆತ್ತವರನ್ನು ಪ್ರೀತಿಸುತ್ತಿರುವುದಾಗಿ ಮತ್ತು "ನಾವು ಒಂದು ದೊಡ್ಡ ಸಂಬಂಧವನ್ನು ಹೊಂದಿದ್ದೇವೆ, ಆದರೆ ಅವರ ಸಂತೋಷ ಮತ್ತು ಸುಖಕ್ಕಾಗಿ ಅವರು ನನ್ನನ್ನು ಹೊಂದಿದ್ದರು" ಎಂದು ಹೇಳಿಕೊಂಡಿದ್ದಾನೆ. 

ಸಂದರ್ಶನವೊಂದರಲ್ಲಿ, ರಾಫೆಲ್ ಹೇಳುವಂತೆ ಸಂತಾನೋತ್ಪತ್ತಿ ಭೂಮಿಯ ಮೇಲಿನ ಅತ್ಯಂತ ನಾರ್ಸಿಸಿಸ್ಟಿಕ್ ಕ್ರಿಯೆಯಾಗಿದೆ. ಅವನ ಮಾತುಗಳ ಬಳಿಕ ಅನೇಕರು ಅವನ ವಿಚಿತ್ರ ವರ್ತನೆಗೆ ಮರುಕ ವ್ಯಕ್ತಪಡಿಸಿದ್ದಲ್ಲದೆ ಅವನ ಪೋಷಕರ ಬಗ್ಗೆ ಸಹಾನುಭೂತಿ ತೋರಿದ್ದಾರೆ.ಆದರೆ ರಾಫೆಲ್ ಈ ಬಗೆಯ ಸಹಾನುಭೂತಿಯನ್ನು ನಿರಾಕರಿಸುತ್ತಾನೆ.

"ನನ್ನ ಸ್ವತಂತ್ರ ಚಿಂತನೆಗಾಗಿ ನನ್ನ ಹೆತ್ತವರು ನನ್ನ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸಲು ತಯಾರಾಗಿದ್ದಾರೆ" ನಾವು ಒಬ್ಬರಿಗೊಬ್ಬರು ಒಳ್ಳೆಯವರಾಗಿರುತ್ತೇವೆ!" 
"ನನ್ನ ಪುತ್ರ ನಮ್ಮನ್ನು ನ್ಯಾಯಾಲಯಕ್ಕೆ ಕರೆಯುತ್ತಿರುವುದು ನನಗೆ ಸಂತಸತಂದಿದೆ.ರಾಫೆಲ್ ನ ಹುಟ್ಟಿನ ಕುರಿತು ನಾವು ಹೇಗೆ ಒಂದು ವಿವೇಚನಾಶೀಲ ವಿವರ ಪಡೆಯಬಹುದು ಎನ್ನುವುದನ್ನು ನಾವಿಲ್ಲಿ ನೋಡಲಿದ್ದೇವೆ." ರಾಫೆಲ್ ತಾಯಿ ಕವಿತಾ ಕಾರ್ನಾಡ್ ಹೇಳಿದ್ದಾರೆ.
"ಮಗನ ಸ್ವತಂತ್ರ ಆಲೋಚನೆಯು ನನಗೆ ಸಂತಸ ತಂದಿದೆ.ಆತನು ತನಗೆ ತಕ್ಕಂತೆ ಸಂತಸದ ಮಾರ್ಗವನ್ನು ಕಾಣಲು ಸ್ವತಂತನಾಗಿದ್ದಾನೆ." ಆಕೆ ಹೇಳಿದ್ದಾರೆ.
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Trending News, Anti-Nationalist, Mumbai, Raphael Samuel, Nihilanand, ಆಂಟಿ ನಟಾಲಿಸ್ಟ್, ಮುಂಬೈ, ರಾಫೆಲ್ ಸ್ಯಾಮ್ಯುಯೆಲ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS