ಮಹಿಳಾ ವಿಶ್ವ ಹಾಕಿ ಲೀಗ್: ಪೆನಾಲ್ಟಿ ಶೂಟೌಟ್ ನಲ್ಲಿ ಉರುಗ್ವೆಯನ್ನು 4-2 ಅಂತರದಿಂದ ಸೋಲಿಸಿದ ಭಾರತ

ವನಿತೆಯರ ವಿಶ್ವ ಹಾಕಿ ಲೀಗ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಹೊಡೆಯುವ ಮೂಲಕ 4-2 ಅಂತರದಿಂದ...

Published: 02nd April 2017 02:00 AM  |   Last Updated: 03rd April 2017 01:01 AM   |  A+A-


India, Fashion History Women The Independent Hockey League

ಭಾರತ

Posted By : VS
Source : Online Desk
ವೆಸ್ಟ್ ವ್ಯಾಂಕೊವರ್(ಕೆನಡಾ): ವನಿತೆಯರ ವಿಶ್ವ ಹಾಕಿ ಲೀಗ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಹೊಡೆಯುವ ಮೂಲಕ 4-2 ಅಂತರದಿಂದ ಉರುಗ್ವೆ ತಂಡವನ್ನು ಮಣಿಸಿ ಲೀಗ್ ರೌಂಡ್-2ರಲ್ಲಿ ಶುಭಾರಂಭ ಮಾಡಿದೆ. 

ಇಂದು ನಡೆದ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಸಮಯದಲ್ಲಿ 2-2ರಿಂದ ಸಮಬಲ ಸಾಧಿಸಿದ್ದವು. ಹೀಗಾಗಿ ಪೆನಾಲ್ಟಿ ಶೂಟೌಟ್ ಅನ್ನು ನೀಡಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ನಾಯಕಿ ರಾಣಿ, ಮೋನಿಕಾ, ದೀಪಿಕಾ ಹಾಗೂ ನವಜೋತ್ ಕೌರ್ ತಲಾ ಒಂದು ಗೋಲು ಬಾರಿಸಿದರು. 

ಇನ್ನು ಭಾರತದ ಅನುಭವಿ ಗೋಲ್ ಕೀಪರ್ ಸವಿತಾ ಉತ್ತಮ ಪ್ರದರ್ಶನ ನೀಡಿದ್ದು ಎದುರಾಳಿ ತಂಡದ ಎರಡು ಗೋಲುಗಳನ್ನು ತಡೆಯುವ ಮೂಲಕ ತಂಡ 4-2ರಿಂದ ಜಯಭೇರಿ ಬಾರಿಸಿತು. 

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp