ಕೆನಡಾ ಎದುರು ೧-೩ ಅಂತರದಿಂದ ಸೋತ ಭಾರತ ಮಹಿಳಾ ಹಾಕಿ ತಂಡ

ಮಹಿಳಾ ಹಾಕಿ ವಿಶ್ವ ಲೀಗ್ ನ ಎರಡನೇ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಕೆನಡಾ ವಿರುದ್ಧ ೧-೩ ಅಂತರಲ್ಲಿ ಪರಾಭವಗೊಂಡಿದೆ.

Published: 27th March 2017 02:00 AM  |   Last Updated: 28th March 2017 12:03 PM   |  A+A-


Indian women's hockey team lose to Canada 1-3

ಕೆನಡಾ ಎದುರು ೧-೩ ಅಂತರದಿಂದ ಸೋತ ಭಾರತ ಮಹಿಳಾ ಹಾಕಿ ತಂಡ

Posted By : GN
Source : PTI
ವೆಸ್ಟ್ ವ್ಯಾಂಕೋವರ್: ಮಹಿಳಾ ಹಾಕಿ ವಿಶ್ವ ಲೀಗ್ ನ ಎರಡನೇ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಕೆನಡಾ ವಿರುದ್ಧ ೧-೩ ಅಂತರಲ್ಲಿ ಪರಾಭವಗೊಂಡಿದೆ. 

ಪಂದ್ಯದ ಆರಂಭದ ೮ ನೇ ನಿಮಿಷದಲ್ಲಿಯೇ ಕೆನಡದಾ ಆಟಗಾರ್ತಿ ನಿಕ್ಕಿ ವುಡ್ ಕ್ರಾಫ್ಟ್ ಗೋಲು ಗಳಿಸಿ ೧-೦ ಅಂತರ ಕಾಯ್ದುಕೊಳ್ಳುವುದಕ್ಕ ಸಹಕರಿಸಿದ್ದಾರೆ. ೧೯ ನೇ ನಿಮಿಷದಲ್ಲಿ ನೊರ್ಲ್ಯಾಅಂಡರ್ ಗಳಿಸಿದ ಗೋಲಿನಿಂದ ಈ ಅಂತರ ೨-೦ ಆಗಿದೆ. 

ಪಂದ್ಯದ ಮಧ್ಯಅಂತರದಲ್ಲಿ ಕೆನಡಾ ಇದೆ ಅಂತರವನ್ನು ಉಳಿಸಿಕೊಂಡು ಆತ್ಮವಿಶ್ವಾಸದಿಂಗ ದ್ವಿತೀಯಾರ್ಧಕ್ಕೆ ಕಾಲಿಟ್ಟಿದೆ. 

೩೪ ನೇ ನಿಮಿಷದಲ್ಲಿ ಪ್ರವಾಸದಲ್ಲಿರುವ ಭಾರತೀಯ ತಂಡದ ಆಟಗಾರ್ತಿ ಗುರ್ಜಿತ್ ಕೌರ್ ಒಂದು ಗೋಲು ಗಳಿಸಿದ್ದೆ ಸಮಾಧಾನಕರ ಸಂಗತಿಯಾಗಿತ್ತು. ಆದರೆ ೪೯ ನೇ ನಿಮಿಷದಲ್ಲಿ ಕೆನಡಾ ಆಟಗಾರ್ತಿ ಕರ್ಲಿ ಜೋಹಾನ್ಸನ್ ಗಳಿಸಿದ ಗೋಲಿನಿಂದ, ಕೆನಡಾ ೩-೧ ಅಂತರದಿಂದ ಪಂದ್ಯ ಗೆದ್ದಿದೆ. 

ಏಪ್ರಿಲ್ ಒಂದರಂದು ಭಾರತ ತಂಡ ಉರುಗ್ವೆ ವಿರುದ್ಧ ಸೆಣಸಲಿದೆ. 
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp