ಇತಿಹಾಸದಲ್ಲೇ ಮೊದಲ ಬಾರಿಗೆ ಒಲಿಂಪಿಕ್ಸ್ ಆಯೋಜನೆಗೆ ಅವಕಾಶ ಕೋರಿದ ಭಾರತ!

ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್ ದೇಶದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದೆ.

Published: 04th December 2018 12:00 PM  |   Last Updated: 04th December 2018 11:50 AM   |  A+A-


First time in history, IOA submits interest to bid for 2032 Olympic Games: Sources

ಸಂಗ್ರಹ ಚಿತ್ರ

Posted By : SVN
Source : PTI
ನವದೆಹಲಿ: ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್ ದೇಶದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದೆ.

ದೇಶಕ್ಕೆ ಒಲಿಂಪಿಕ್​ ಕ್ರೀಡಾ ಕೂಟವನ್ನು ತರುವತ್ತ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್​ (ಐಒಎ) ದಾಪುಗಾಲು ಇಟ್ಟಿದ್ದು, ಇದೇ ಮೊದಲ ಬಾರಿಗೆ ಮಹಾ ಕ್ರೀಡಾಕೂಟದ ಆಯೋಜನೆಗೆ ಅವಕಾಶ ನೀಡುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯಲ್ಲಿ ಮನವಿ ಮಾಡಿಕೊಂಡಿದೆ.

ಮೂಲಗಳ ಪ್ರಕಾರ 2032ರ ಒಲಿಂಪಿಕ್​ ಕ್ರೀಡಾ ಕೂಟ ಆಯೋಜನೆಯ ಅವಕಾಶವನ್ನು ಭಾರತಕ್ಕೆ ನೀಡುವಂತೆ ಕೋರಿಕೆ ಸಲ್ಲಿಸಿರುವ ಐಒಎ ಇದಕ್ಕಾಗಿ ಭಾರತದ ಸರ್ಕಾರದ ಸಹಕಾರ ಕೂಡ ಕೋರಿದೆ. ಭಾರತಕ್ಕೆ ಅವಕಾಶ ನೀಡುವ ಕುರಿತು ಐಒಎ ಅಧ್ಯಕ್ಷ ನರಿಂದರ್​ ಬಾತ್ರ ನೀಡಿದ ಸಲಹೆಗೆ ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಯ(ಐಒಸಿ) ಮುಖ್ಯಸ್ಥ ಥಾಮಸ್​ ಬ್ಯಾಚ್​ ಅವರೂ ಸ್ವಾಗತಿಸಿದ್ದಾರೆ ಎನ್ನಲಾಗಿದೆ.

'ಭಾರತದಲ್ಲಿ 2032ರ ಒಲಿಂಪಿಕ್​ ಆಯೋಜಿಸುವ ಬಗ್ಗೆ ನಾವು ತುಂಬಾ ಗಂಭೀರವಾಗಿ ಯೋಚಿಸುತ್ತಿದ್ದೇವೆ. ಕ್ರೀಡಾ ಕೂಟ ಆಯೋಜಿಸುವ ವಿಚಾರದಲ್ಲಿ ನಮಗಿರುವ ಆಸಕ್ತಿಯ ಬಗ್ಗೆ ನಾವು ಐಒಸಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ಒಲಿಂಪಿಕ್​ ಬಿಡ್​ ಸಮಿತಿಯೊಂದಿಗೆ ನಾನು ಈಗಾಗಲೇ ಸಭೆ ನಡೆಸಿದ್ದೇನೆ. ಭಾರತದ ಆಸಕ್ತಿಯನ್ನು ಅವರು ಸ್ವಾಗತಿಸಿದ್ದಾರೆ. ಅಲ್ಲದೆ, ಆದಷ್ಟು ಶೀಘ್ರ ಭಾರತ ಕ್ರೀಡಾ ಕೂಟವನ್ನು ಆಯೋಜಿಸಬೇಕೆಂದು ಅವರೂ ಅಭಿಪ್ರಾಯಪಟ್ಟಿದ್ದಾರೆ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್​ ಮೆಹ್ತಾ ತಿಳಿಸಿದ್ದಾರೆ.

ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹೀಗೊಂದು ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ದೆಹಲಿ ಅಥವಾ ಮುಂಬೈನಲ್ಲಿ ಕ್ರೀಡಾ ಕೂಟಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ. ಭಾರತದಂತೆಯೇ 2032ರ ಒಲಿಂಪಿಕ್​ ಕೂಟ ಆಯೋಜಿಸಲು ಇಂಡೋನೇಷ್ಯಾ, ಜರ್ಮನಿ, ಚೀನಾ ಮತ್ತು ಆಸ್ಟ್ರೇಲಿಯಾ ತೀವ್ರ ಪ್ರಯತ್ನ ನಡೆಸುತ್ತಿವೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp