ಪ್ರೊ ಕಬಡ್ಡಿ ಹರಾಜು: ಭಾರಿ ಮೊತ್ತಕ್ಕೆ ಸೇಲಾದ ಸಿದ್ಧಾರ್ಥ್ ಕೌಲ್, ಮಹಿಂದರ್ ಸಿಂಗ್, ಮಂಜೀತ್ ಸಿಂಗ್ ಮತ್ತು ಸಂದೀಪ್ ನರ್ವಾಲ್

ಏಳನೇ ಆವೃತ್ತಿ ಪ್ರೊ ಕಬಡ್ಡಿಗಾಗಿ ಸೋಮವಾರ ಹಾಗೂ ಮಂಗಳವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇಬ್ಬರು ಆಟಗಾರರು ಭಾರಿ ಮೊತ್ತಕ್ಕೆ ಸೇಲಾಗುವ ಮೂಲಕ ಕೋಟ್ಯಾಧಿಶರಾಗಿದ್ದು, ಕಳೆದ ಬಾರಿ ಆರು ಆಟಗಾರರು ಕೋಟಿ ರೂಪಾಯಿ ಪಡೆದು ಬೀಗಿದ್ದರು.

Published: 09th April 2019 12:00 PM  |   Last Updated: 09th April 2019 09:23 AM   |  A+A-


Mahinder Singh, Manjeet Singh, Sandeep Narwal fetch highest bid as franchises pay Rs 50 crore in PKL auction

ಸಂಗ್ರಹ ಚಿತ್ರ

Posted By : SVN SVN
Source : UNI
ಮುಂಬೈ: ಏಳನೇ ಆವೃತ್ತಿ ಪ್ರೊ ಕಬಡ್ಡಿಗಾಗಿ ಸೋಮವಾರ ಹಾಗೂ ಮಂಗಳವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇಬ್ಬರು ಆಟಗಾರರು ಭಾರಿ ಮೊತ್ತಕ್ಕೆ ಸೇಲಾಗುವ ಮೂಲಕ ಕೋಟ್ಯಾಧಿಶರಾಗಿದ್ದು, ಕಳೆದ ಬಾರಿ ಆರು ಆಟಗಾರರು ಕೋಟಿ ರೂಪಾಯಿ ಪಡೆದು ಬೀಗಿದ್ದರು. 
  
ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದ್ದು, 12 ಮಾಲೀಕರು 200 ಆಟಗಾರರನ್ನು ಖರೀದಿ ಮಾಡಿದ್ದಾರೆ. ಮುಂಬರುವ ಆವೃತ್ತಿಗಾಗಿ 173 ದೇಶಿಯ ಹಾಗೂ 27 ಅಂತಾರಾಷ್ಟ್ರೀಯ ಆಟಗಾರರು ಲೀಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಲೀಕರು ಆಟಗಾರರ ಖರೀದಿಗೆ ಒಟ್ಟು 50 ಕೋಟಿ ರೂ. ಖರ್ಚು ಮಾಡಿದ್ದಾರೆ. 
  
ಈ ಬಾರಿಯ ದುಬಾರಿ ಆಟಗಾರ ಎಂಬ ಹಿರಿಮೆ ಸಿದ್ಧಾರ್ಥ್ ಕೌಲ್ ಅವರದ್ದಾಗಿದ್ದು, ಸಿದ್ಧಾರ್ಥ್ 1.45 ಕೋಟಿ ರೂ.ಗೆ ತೆಲುಗು ಟೈಟಾನ್ಸ್ ತಂಡದ ಪರ ಆಡಲಿದ್ದಾರೆ. ಕಳೆದ ಬಾರಿ ಹರಿಯಾಣ ಸ್ಟೀಲರ್ಸ್ ಮೊನು ಗೋಯತ್ ರಿಗೆ 1.51 ಕೋಟಿ ರೂ. ನೀಡಿ ಖರೀದಿಸಿತ್ತು. ಈ ಬಾರಿ ನಿತಿನ್ ಥೋಮರ್ ಅವರು 1.20 ಕೋಟಿ ರೂ. ಗಳೊಂದಿಗೆ ಪುಣೆ ತಂಡದ ಪರ ಕಣಕ್ಕೆ ಇಳಿಯಲಿದ್ದು, ಎರಡನೇ ಕೋಟ್ಯಾಧಿಶರಾಗಿದ್ದಾರೆ. 
  
ಮಂಜೀತ್ ಚಿಲ್ಲರ್ ಅವರು ಸಹ ಅಧಿಕ ಹಣವನ್ನು ಪಡೆದವರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 63 ಲಕ್ಷ ರೂ. ಗಳಿಗೆ ಬಿಕರಿ ಆಗಿದ್ದಾರೆ. ಇನ್ನು ಡಿಫೆಂಡರ್ ಮಹೇಂದ್ರ ಸಿಂಗ್ ಅವರಿಗೆ ಬೆಂಗಳೂರು ಬುಲ್ಸ್‍ ತಂಡ 80 ಲಕ್ಷ ರೂ. ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
Stay up to date on all the latest ಕ್ರೀಡೆ news
Poll
DJ-Halli-Violence12

ಹಿಂಸಾಚಾರದಲ್ಲಿ ತೊಡಗಿ ಆಸ್ತಿಪಾಸ್ತಿಗೆ ಹಾನಿ ಮಾಡುವ ಗಲಭೆಕೋರರಿಂದಲೇ ನಷ್ಟದ ಹಣ ವಸೂಲಿ ಮಾಡುವುದರಿಂದ ಗುಂಪು ಗಲಭೆ ತಡೆಯಬಹುದೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp