ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಎರಡನೇ ದಿನ ಭಾರತಕ್ಕೆ ಎರಡು ಸ್ವರ್ಣ

23ನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ದಿನ ಭಾರತ ಎರಡು ಚಿನ್ನದ ಪದಕಗಳೂ ಸೇರಿದಂತೆ ಐದು ಪದಕಗಳನ್ನು ಗಳಿಸಿ ಪದಕಗಳ ಸಂಖ್ಯೆಯನ್ನು ಹತ್ತಕ್ಕೆ ಹೆಚ್ಚಿಸಿಕೊಂಡಿತು.

Published: 23rd April 2019 12:00 PM  |   Last Updated: 23rd April 2019 08:17 AM   |  A+A-


Asian Athletics Championships: India win five medals including two golds on Day 2; tally swells to 10 medals

ಗೋಮತಿ ಮಾರಿಮುತ್ತು, ತಾಜೆಂದರ್ ಸಿಂಗ್ ತೋರ್

Posted By : RHN RHN
Source : Online Desk
ದೋಹಾ: 23ನೇ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ದಿನ ಭಾರತ ಎರಡು ಚಿನ್ನದ ಪದಕಗಳೂ ಸೇರಿದಂತೆ ಐದು ಪದಕಗಳನ್ನು ಗಳಿಸಿ ಪದಕಗಳ ಸಂಖ್ಯೆಯನ್ನು ಹತ್ತಕ್ಕೆ ಹೆಚ್ಚಿಸಿಕೊಂಡಿತು.

ಮಹಿಳೆಯರ 800 ಮೀಟರ್ ಓಟದ ವಿಭಾಗದಲ್ಲಿ ಭಾರತದ ಗೋಮತಿ ಮಾರಿಮುತ್ತು ಚಿನ್ನ ಗಳಿಸಿಕೊಳ್ಳುವ ಮೂಲಕ ಈ ಆವೃತ್ತಿಯಲ್ಲಿ ಭಾರತಕ್ಕೆ ಮೊದಲ ಸ್ವರ್ಣ ಪದಕ ಗಳಿಸಿಕೊಟ್ಟರು.ಅವರು ಎರಡು ನಿಮಿಷ 02.70 ಸೆಕೆಂಡ್ ನಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆ ಮಾಡಿದ್ದರು. 

ಪುರುಷರ ಶಾಟ್ ಪುಟ್ ಎಸೆತದಲ್ಲಿ ತಾಜೆಂದರ್ ಸಿಂಗ್ ತೋರ್ ಚಿನ್ನದ ಪದಕ ಗಳಿಸಿ ಬಾರತಕ್ಕೆ ಎರಡನೇ ಸ್ವನ ತಂದಿತ್ತರು.

ಇದಲ್ಲದೆ ಪುರುಷರ ಜಾವಲಿನ್ ಥ್ರೋ (ಈಟಿ ಎಸೆತ) ದಲ್ಲಿ ಭಾರತದ ಶಿವಪಾಲ್ ಸಿಂಗ್ 86.23 ಅಂಕಗಳೊಡನೆ ಬೆಳ್ಳಿ ಪದಕ ಗಳಿಸಿಕೊಂಡರೆ ಭಾರತದ ಸರಿತಾ ಗಾಯಕ್ ವಾಡ್ ಮಹಿಳೆಯರ 400 ಮೀಟರ್ ಹರ್ಡಲ್ಸ್ ನಲ್ಲಿ ಕಂಚಿನ ಪದಕ ಗೆದ್ದರು.

ಪುರುಷರ ವಿಭಾಗದಲ್ಲಿ ಭಾರತದ ಎಂಪಿ ಜಬೀರ್ 49.13 ರ ವೈಯಕ್ತಿಕ ದಾಕಲೆಗಳೊಂದಿಗೆ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
Stay up to date on all the latest ಕ್ರೀಡೆ news
Poll
DJ-Halli-Violence12

ಹಿಂಸಾಚಾರದಲ್ಲಿ ತೊಡಗಿ ಆಸ್ತಿಪಾಸ್ತಿಗೆ ಹಾನಿ ಮಾಡುವ ಗಲಭೆಕೋರರಿಂದಲೇ ನಷ್ಟದ ಹಣ ವಸೂಲಿ ಮಾಡುವುದರಿಂದ ಗುಂಪು ಗಲಭೆ ತಡೆಯಬಹುದೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp