ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಸ್ವಪ್ನಾ ಬರ್ಮನ್‌ಗೆ ರಜತ ಹಾರ, ಸಂಜೀವಿನಿಗೆ ಕಂಚು

ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮಂಗಳವಾರ ಭಾರತದ ಬಹುನಿರೀಕ್ಷಿತ ಹೆಪ್ಟಾಥ್ಲಾನ್ ಆಟಗಾರ್ತಿ ಸ್ವಪ್ನಾ ಬರ್ಮನ್ ಬೆಳ್ಳಿ ಪದಕ ಗೆದ್ದರು
ಸ್ವಪ್ನಾ ಬರ್ಮನ್
ಸ್ವಪ್ನಾ ಬರ್ಮನ್
ದೋಹಾ: ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮಂಗಳವಾರ ಭಾರತದ ಬಹುನಿರೀಕ್ಷಿತ ಹೆಪ್ಟಾಥ್ಲಾನ್ ಆಟಗಾರ್ತಿ ಸ್ವಪ್ನಾ ಬರ್ಮನ್ ಬೆಳ್ಳಿ ಪದಕ ಗೆದ್ದರು. ಕಡೆಯ ಸುತ್ತಿನ ಪಂದ್ಯದಲ್ಲಿ ಸ್ವಪ್ನಾ 5993 ಅಂಕ ಪಡೆದು ಈ ಸಾಧನೆ ಮಾಡಿದ್ದಾರೆ.
ಇದೇ ವಿಬಾಗದಲ್ಲಿ ಉಜ್ರೇಕಿಸ್ಥಾನದ ಆಟಗಾರ್ತಿ6198 ಅಂಕ ಗಳಿಸಿ ಚಿನ್ನದ ಪದಕ ಪಡೆದರು.
ಮಹಿಳಾ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಭಾರತದ ಪಾರುಲ್ ಚೌಧರಿ 10: 03.43 ರ ಅತ್ಯುತ್ತಮ ವೈಯುಕ್ತಿಕ ಸಾಧನೆ ಮಾಡಿದ್ದಾರೆ.
ಇನ್ನು 1500 ಮೀಟರ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದ ಬಾರತದ ಸ್ಪರ್ಧಿಯಾಗಿದ್ದ ಜಿನ್ಸನ್ ಜಾನ್ಸನ್ ಗಾಯದ ಸಮಸ್ಯೆಯಿಂದ ಸ್ಪರ್ಧೆಯಿಂದ ದೂರವಾಗಿದ್ದು ಭಾರತದ ಪದಕದ ಆಸೆ ಕಮರಿದೆ. ಎಡಗಾಲಿನ ಮೀನಖಂಡದಲ್ಲಿ ನೋವು ಕಾಣಿಸಿಕೊಂಡ ಕಾರಣ ಅವರು ಸ್ಪರ್ಧೆಗೆ ಹೋಗುವುದಿಲ್ಲ ಎಂದು ಮಾದ್ಯಮ ವರದಿ ತಿಳಿಸಿದೆ.
ಸಂಜೀವನಿ ಜಾಧವ್ ಗೆ ಕಂಚು
ಮಹಿಳಾ 10,000 ಮೀ. ಸ್ಪರ್ಧೆಯಲ್ಲಿ  ಸಂಜೀವನಿ ಜಾಧವ್ ಅವರು 32: 44.96 ರ ವೈಯಕ್ತಿಕ ಸಾಧನೆಮಾಡಿ ಕಂಚಿನ ಪದಕ ಗಳಿಸಿದ್ದಾರೆ.ಭಾರತ ಈಗ ಒಟ್ಟು 2 ಚಿನ್ನ , 5 ಬೆಳ್ಳಿ ಮತ್ತು 6  ಕಂಚಿನ ಪದಕವನ್ನು ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com