ಐಎಸ್‌ಎಸ್‌ಎಫ್‌ ವಿಶ್ವಕಪ್‌: ಭಾರತದ ದಿವ್ಯಾಂಶ್‌ ಸಿಂಗ್‌ಗೆ ಬೆಳ್ಳಿ ಪದಕ

ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌(ಪಿಸ್ತೂಲ್‌/ರೈಫಲ್‌)ನ ಪುರುಷರ 10 ಮೀ ಏರ್‌ ರೈಫಲ್‌ನಲ್ಲಿ ಭಾರತದ...

Published: 26th April 2019 12:00 PM  |   Last Updated: 26th April 2019 06:16 AM   |  A+A-


ISSF World Cup 2019: Divyansh Singh Panwar wins silver, secures Olympic quota

ದಿವ್ಯಾಂಶ್‌ ಸಿಂಗ್‌

Posted By : LSB LSB
Source : UNI
ಬೀಜಿಂಗ್‌: ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌(ಪಿಸ್ತೂಲ್‌/ರೈಫಲ್‌)ನ ಪುರುಷರ 10 ಮೀ ಏರ್‌ ರೈಫಲ್‌ನಲ್ಲಿ ಭಾರತದ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಅವರು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. 
  
ಚಿನ್ನದ ಪದಕ ವಿಜೇತ ಚೀನಾದ ಹುಯಿ ಝಿನ್ಚೆಂಗ್‌ ಅವರಿಗಿಂತ ಭಾರತದ ಶೂಟರ್‌ ಕೇವಲ 0.4 ಅಂತರದಲ್ಲಿ ಹಿನ್ನಡೆಯಲಿದ್ದರು. ಚೀನಾದ ಶೂಟರ್‌ ಫೈನಲ್‌ ಸುತ್ತಿನಲ್ಲಿ ಒಟ್ಟು 249.4 ಅಂಕಗಳನ್ನು ಗಳಿಸಿದರು. ರಷ್ಯಾದ ಗ್ರಿಗೋರಿ ಶಾಮಕೋವ್‌ 227.4 ಅಂಕಗಳನ್ನು ಪಡೆದು ಕಂಚಿನ ಪದಕಕ್ಕೆ ತೃಪ್ತರಾದರು. 
  
ಭಾರತದ ದಿವ್ಯಾಂಶ್‌ ಗುರುವಾರ ಮಿಶ್ರ ಶೂಟಿಂಗ್‌ ತಂಡದಲ್ಲಿ ಚಿನ್ನದ ಪದಕ ಜಯಿಸಿದ್ದರು. ಭಾರತದ ಮಹಿಳಾ 10 ಮೀ. ರೈಫಲ್‌ ವಿಭಾಗದಲ್ಲಿ ಅಪೂರ್ವಿ ಚಂದೇಲಾ ಹಾಗೂ ಅಂಜುಮ್‌ ಮೌದ್ಗಿಲ್‌ ಹಾಗೂ ಪುರುಷರ ವಿಭಾಗದಲ್ಲಿ ಸೌರಭ್‌ ಚೌಧರಿ ಹಾಗೂ ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಅವರು ಸೇರಿದಂತೆ ಒಟ್ಟು ನಾಲ್ವರು 10ಮೀ ಏರ್‌ ರೈಫಲ್‌ ವಿಭಾಗದಲ್ಲಿ ಮುಂಬರುವ ಒಲಿಂಪಿಕ್‌ಗೆ ಅರ್ಹತೆ ಪಡೆದಿದ್ದಾರೆ.
Stay up to date on all the latest ಕ್ರೀಡೆ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp