ಥಾಯ್ಲೆಂಡ್ ಓಪನ್: ರಂಕಿರೆಡ್ಡಿ - ಚಿರಾಗ್ ಜೋಡಿಗೆ ಕಿರೀಟ

ಭಾರತದ ಅಗ್ರ ಶ್ರೇಯಾಂಕಿತ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‍ರಾಜ್‍ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‍ ಟೂರ್ನಿ ಪ್ರಶಸ್ತಿ ಗೆಲ್ಲುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಥಾಯ್ಲೆಂಡ್ ಓಪನ್: ರಂಕಿರೆಡ್ಡಿ - ಚಿರಾಗ್ ಜೋಡಿಗೆ ಕಿರೀಟ
ಥಾಯ್ಲೆಂಡ್ ಓಪನ್: ರಂಕಿರೆಡ್ಡಿ - ಚಿರಾಗ್ ಜೋಡಿಗೆ ಕಿರೀಟ
ಬ್ಯಾಂಕಾಕ್: ಭಾರತದ ಅಗ್ರ ಶ್ರೇಯಾಂಕಿತ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‍ರಾಜ್‍ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್‍ ಟೂರ್ನಿ ಪ್ರಶಸ್ತಿ ಗೆಲ್ಲುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಭಾನುವಾರ ಇಲ್ಲಿ ನಡೆದ ಫೈನಲ್ಸ್ ನಲ್ಲಿ ಈ ಜೋಡಿ ಚೀನಾದ ಲಿ-ಜುನ್-ಹುಯಿ ಮತ್ತು ಲಿಯು-ಯು ಚೆನ್ ಜೋಡಿಯನ್ನು ಮಣಿಸಿ ಭಾರತಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ.
ಚಿರಾಗ್ ಮತ್ತು ಸಾತ್ವಿಕ್‍ ರಾಜ್ ತಮ್ಮ ಡಬಲ್ಸ್ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿಗಾಗಿ ನಡೆದ ಪಂದ್ಯದಲ್ಲಿ ಚೀನಾದ ಮೂರನೇ ಶ್ರೇಯಾಂಕದ ಜೋಡಿಯನ್ನು 21-19, 18-21, 21-18ರಿಂದ ಪರಾಭವಗೊಳಿಸಿದರು. 
ವಿಶ್ವದ 16ನೇ  ಕ್ರಮಾಂಕದ ಭಾರತೀಯ ಜೋಡಿ ಆತ್ಮವಿಶ್ವಾಸದಿಂದ ಆಟವನ್ನು ಪ್ರಾರಂಭಿಸಿದ್ದು ಮೊದಲ ಸುತ್ತಿನಲ್ಲಿ 7-3ರ ಮುನ್ನಡೆ ಸಾಧಿಸಿತ್ತು. ಮತ್ತು ರಂಕಿರೆಡ್ಡಿ ಮೊದಲು ಆಟವನ್ನು 15-15ರಲ್ಲಿ ಸಮಗೊಳಿಸಿತ್ತು  ಆದರೆ ಎರಡನೇ ಸುತ್ತಿನ ಆಟ ಪ್ರಾರಂಭದಲ್ಲಿಯೇ ಭಾರತೀಯ ಜೋಡಿಯೆ ಕಠಿಣವಾಗಿ ಪರಿಣಮಿಸಿತ್ತು.ಮತ್ತು ಅಂತಿಮ ವಿರಾಮಕ್ಕೆ ಹೋಈಗುವ ಮುನ್ನ ಭಾರತೀಯರು 3-6 ಅಂತರದಿಂದ ಹಿಂದೆ ಬಿದ್ದರು.ಆದರೆ ಪ್ರಶಸ್ತಿ ನಿರ್ಣಾಯಕವಾಗುವ ವೇಳೆಗೆ ಐದು ಅಂಕಗಳೊಡನೆ 8-6ರ ಮುನ್ನಡೆ ಸಾಧಿಸಿದ್ದರು. ಅಂತಿಮವಾಗಿ ಭಾರತೀಯ ಜೋಡಿ 62 ನಿಮಿಷಗಳಲ್ಲಿ ಪಂದ್ಯವನ್ನು ಜಯಿಸಿ ಹೊಸ ತಿಹಾಸವೊಂದನ್ನು ಸೃಷ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com