ದಾಂಪತ್ಯ ಜೀವನಕ್ಕೆ ತಯಾರಾದ ಬಜರಂಗ್, ಪೋಗಟ್ ಕುಟುಂಬದ ಕುಡಿ ಕೈಹಿಡಿಯಲಿರುವ ವಿಶ್ವ ನಂ.1 ಕುಸ್ತಿಪಟು

ವಿಶ್ವದ ನಂಬರ್ ಒನ್ ಕುಸ್ತಿಪಟು ಬಜರಂಗ್ ಪುನಿಯಾ ಶೀಘ್ರವೇ ವಿವಾಹವಾಗಲಿದ್ದಾರೆ. ಖ್ಯಾತ ಕುಸ್ತಿ ಪಟುಗಳ ಕುಟುಂಬವಾದ ಪೋಗಟ್ ಕುಟುಂಬದ ಕುಡಿ....

Published: 09th August 2019 12:00 PM  |   Last Updated: 09th August 2019 12:20 PM   |  A+A-


ಸಂಗೀತಾ ಪೋಗಟ್ , ಬಜರಂಗ್ ಪುನಿಯಾ

Posted By : RHN RHN
Source : The New Indian Express
ಚಂಡಿಘರ್: ವಿಶ್ವದ ನಂಬರ್ ಒನ್ ಕುಸ್ತಿಪಟು ಬಜರಂಗ್ ಪುನಿಯಾ ಶೀಘ್ರವೇ ವಿವಾಹವಾಗಲಿದ್ದಾರೆ. ಖ್ಯಾತ ಕುಸ್ತಿ ಪಟುಗಳ ಕುಟುಂಬವಾದ ಪೋಗಟ್ ಕುಟುಂಬದ ಕುಡಿ ಸಂಗೀತಾ ಪೋಗಟ್ ಅವರನ್ನು ವರಿಸಲಿದ್ದಾರೆ ಎಂದು ಕುಟುಂಬ ಮೂಲಗಳು ಗುರುವಾರ ತಿಳಿಸಿವೆ.

ಟೋಕಿಯೊದಲ್ಲಿ ನಡೆವ  2020 ರ ಒಲಿಂಪಿಕ್ಸ್ ನಂತರ ವಿವಾಹ ಸಮಾರಂಭ ನಡೆಯುವ ಸಾಧ್ಯತೆ ಇದೆ.

65 ಕೆಜಿ ವಿಭಾಗದ ಕುಸ್ತಿಪಟು ಬಜರಂಗ್ ಮತ್ತು 59 ಕೆಜಿ ತೂಕ ವಿಭಾಗದಲ್ಲಿ ರಾಷ್ಟ್ರೀಯ ಪದಕ ವಿಜೇತೆಯಾಗಿರುವ ಸಂಗೀತಾ - ತಮ್ಮ ಕುಟುಂಬಗಳಿಗೆ ಮದುವೆಯಾಗುವ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ಫೋಗಟ್ ಕುಟುಂಬದ ಸದಸ್ಯರೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಸಂಗೀತಾ ತಂದೆ ಮಹಾವೀರ್ ಸಿಂಗ್ ಮಾಧ್ಯಮಗಳಿಗೆ ಈ ಬಗೆಗೆ ತಿಳಿಸಿದ್ದು ಇದು ಮಕ್ಕಳ ಆಶಯ ಮತ್ತು "ನಾವು ಅವರ ಭಾವನೆಗಳನ್ನು ಗೌರವಿಸುತ್ತೇವೆ". ಎಂದರು.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp