ಸಿನ್ಸಿನಾಟಿ ಮಾಸ್ಟರ್ಸ್‌ ವಿಥ್‌ ಡ್ರಾ ಮಾಡಿಕೊಂಡ ಸೆರೇನಾ ವಿಲಿಯಮ್ಸ್‌

(ಕ್ಸಿನ್ಹುವಾ) ಅಮೆರಿಕದ ಸ್ಟಾರ್‌ ಟೆನಿಸ್‍ ಆಟಗಾರ್ತಿ ಸೆರೇನಾ ವಿಲಿಯಮ್ಸ್ ಅವರು ಬೆನ್ನು ನೋವಿನಿಂದಾಗಿ ಸಿನ್ಸಿನಾಟಿ ಮಾಸ್ಟರ್ಸ್

Published: 14th August 2019 09:43 AM  |   Last Updated: 14th August 2019 09:43 AM   |  A+A-


Serena Williams

ಸೆರೇನಾ ವಿಲಿಯಮ್ಸ್‌

Posted By : Srinivas Rao BV
Source : UNI

ವಾಷಿಂಗ್ಟನ್‍: (ಕ್ಸಿನ್ಹುವಾ) ಅಮೆರಿಕದ ಸ್ಟಾರ್‌ ಟೆನಿಸ್‍ ಆಟಗಾರ್ತಿ ಸೆರೇನಾ ವಿಲಿಯಮ್ಸ್ ಅವರು ಬೆನ್ನು ನೋವಿನಿಂದಾಗಿ ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯಿಂದ ವಿಥ್‍ ಡ್ರಾ ಮಾಡಿಕೊಂಡಿದ್ದಾರೆ.  

23ರ ಬಾರಿ ಗ್ರ್ಯಾನ್‍ ಸ್ಲ್ಯಾಮ್‍ ವಿಜೇತೆ ಕಳೆದ ರೋಜರ್ಸ್‍ ಕಪ್‍ ಫೈನಲ್‍ ಹಣಾಹಣಿ ವೇಳೆ ಬೆನ್ನು ನೋವಿಗೆ ಒಳಗಾಗಿದ್ದರು. ನಂತರ, ಪಂದ್ಯದವನ್ನು ಮುಂದುವರಿಸಲಾಗದೆ ಅಂಗಳ ತೊರೆದಿದ್ದರು. ಹಾಗಾಗಿ, ಬಿಯಾಂಕಾ ಆ್ಯಂಡ್ರೆಸ್ಕು ಅವರಿಗೆ ಚಾಂಪಿಯನ್‍ ಪಟ್ಟ ನೀಡಲಾಯಿತು. ಮಂಗಳವಾರ ಬೆಳಗ್ಗೆ ಚೇತರಿಸಿಕೊಂಡು ಅಂಗಳಕ್ಕೆ ಇಳಿಯುತ್ತೇನೆಂಬ ಭರವಸೆ ಇದೆ ಎಂದು 39ರ ಪ್ರಾಯದ ಸೆರೇನಾ ವಿಲಿಯಮ್ಸ್ ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದರು. ಆದರೆ, ಅವರ ಬೆನ್ನು ನೋವು ಇನ್ನೂ ಕಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಸಿನ್ಸಿನಾಟಿ ಟೂರ್ನಿಯಿಂದ ವಿಥ್‍ ಡ್ರಾ ಮಾಡಿಕೊಂಡಿದ್ದಾರೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp